Video: ಡಾಲರ್‌ಗಿಂತ ರೂಪಾಯಿ ಬೆಟರ್ ಆಗಿದೆ ಎಂದ ಅಮೆರಿಕನ್ ಮಹಿಳೆ; ಅದು ಹೇಗಂತೀರಾ?
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತವೆ. ಅಂತಹದ್ದೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಅಮೆರಿಕದ ಮಹಿಳೆಯೊಬ್ಬರು ಡಾಲರ್‌ಗಿಂತ ರೂಪಾಯಿಗೆ ಪರ್ಚೇಸಿಂಗ್ ಪವರ್ ಜಾಸ್ತಿಯಿದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ರೂಪಾಯಿಗಿಂತ ಡಾಲರ್ ಮೌಲ್ಯ ಹೆಚ್ಚಿದೆ, ಆದ್ರೂ ಅವರು ರೂಪಾಯಿ ಬೆಸ್ಟ್ ಆಗಿದೆ ಎಂದು ಹೇಳಿದ್ದಾರೆ. ಅದು ಹೇಗೆ ಎಂಬ ವಿವರಣೆಯನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ರೂಪಾಯಿಗಿಂತ ಡಾಲರ್ (dollar) ಮೌಲ್ಯ ಹೆಚ್ಚಿದೆ. ಡಾಲರ್ ಎನ್ನುವುದು ಯುನೈಟೆಡ್ ಸ್ಟೇಟ್ ಅಂದರೆ ಅಮೆರಿಕದ ಅಧಿಕೃತ ಕರೆನ್ಸಿಯಾಗಿದ್ದು, ಜೊತೆಗೆ ಇದು ಜಾಗತಿಕವಾಗಿ ಹೆಚ್ಚು ಚಲಾವಣೆಯಲ್ಲಿರುವ ಕರೆನ್ಸಿಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ರೂಪಾಯಿಗಿಂದ ಡಾಲರ್ ಮೌಲ್ಯ ಹೆಚ್ಚೇ ಇದೆ. ಆದ್ರೆ ಪರ್ಚೇಸಿಂಗ್ (purchasing power) ಅಂದರೆ ವಸ್ತುಗಳನ್ನು ಖರೀದಿಸುವ ವಿಷಯದಲ್ಲಿ ಡಾಲರ್‌ಗಿಂತ ರೂಪಾಯಿ ಬೆಟರ್ ಆಗಿದೆ ಎಂದು ಅಮೆರಿಕದ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಸದ್ಯ ಭಾರತದಲ್ಲಿ ನೆಲೆಸಿರುವ ಅಮೆರಿಕ ಮೂಲಕ ಕ್ರಿಸ್ಟನ್ ಫಿಷರ್ ಎಂಬವರು ಡಾಲರ್‌ಗಿಂತ ರೂಪಾಯಿ ಉತ್ತಮವಾಗಿದೆ ಎಂದು ಹೇಳಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಡಾಲರ್‌ಗಿಂತ ರೂಪಾಯಿ ಉತ್ತಮವೇ?
ಕಳೆದ ನಾಲ್ಕು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಅಮೆರಿಕ ಮೂಲದ ಮಹಿಳೆಯಾದ ಕ್ರಿಸ್ಟನ್ ಫಿಷರ್ (kristenfischer3) ಎಂಬವರು ಡಾಲರ್‌ಗಿಂದ ರೂಪಾಯಿಗೆ ಪರ್ಚೇಸಿಂಗ್ ಪವರ್ ಹೇಗೆ ಜಾಸ್ತಿಯಿದೆ ಎಂಬುದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿವರಣೆಯನ್ನು ನೀಡಿದ್ದಾರೆ.
ಡಾಲರ್‌ಗಿಂತ ರೂಪಾಯಿ ನಿಜವಾಗಿಯೂ ಉತ್ತಮವೇ ಎಂಬ ಪ್ರಶ್ನೆಯನ್ನು ನನಗೆ ಆಗಾಗ್ಗೆ ಕೇಳುತ್ತಿರುತ್ತಾರೆ. ಇದರ ಬಗ್ಗೆ ಮಾತನಾಡುವುದಾದರೆ ಪರ್ಚೇಸಿಂಗ್ ಪವರ್ ಡಾಲರ್‌ಗಿಂತ ರೂಪಾಯಿಗೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕದಲ್ಲಿ ಆದಾಯ ಹೆಚ್ಚಿದೆ ನಿಜ. ಆದಾಯ ಹೆಚ್ಚಿದ್ದರೂ ಅಲ್ಲಿ ಖರ್ಚು ಕೂಡಾ ತುಂಬಾನೇ ಹೆಚ್ಚಿದೆ. ಆದರೆ ಭಾರತದಲ್ಲಿ ಆದಾಯ ಕಡಿಮೆ ಇದ್ದರೂ, ಸರಕು ಮತ್ತು ಸೇವೆಗಳ ವೆಚ್ಚವೂ ಅಷ್ಟೇ ಕಡಿಮೆಯಿದೆ. ಉದಾಹರಣೆಗೆ ಭಾರತದಲ್ಲಿ ಕ್ಷೌರದ ವೆಚ್ಚವು 100 ರೂ. ಇದ್ರೆ, ಅಮೆರಿಕದಲ್ಲಿ ಕ್ಷೌರದ ವೆಚ್ಚ 40 ಡಾಲರ್ ಅಂದ್ರೆ 3,400 ರೂ. ರಷ್ಟಿದೆ. ಅದೇ ರೀತಿ ಅಮೆರಿಕದಲ್ಲಿ 10 ಡಾಲರ್‌ಗೆ ಕೇವಲ ಒಂದು ಸರಳ ಊಟವನ್ನು ಮಾಡಬಹುದು. ಅದೇ ರೀತಿ ಭಾರತದಲ್ಲಿ 10 ಡಾಲರ್‌ಗೆ ಸಮಾನವಾದ 800 ರೂ. ಗೆ ವೆರೈಟಿ ಊಟವನ್ನು ಮಾಡಬಹುದು ಎಂದು ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಮನೆಯವರ ಬೆಂಬಲವಿಲ್ಲ, ಮಕ್ಕಳನ್ನು ಬೆಳೆಸುವಾಗ ಕೈಯಲ್ಲಿ ಎಷ್ಟು ದುಡ್ಡಿದ್ರೂ ಸಾಲಲ್ಲ ಎಂದ ದಂಪತಿ
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಅಮೆರಿಕದಲ್ಲಿ ಎಂದಿಗೂ ಪ್ರಿಮಿಯಂ ವಸ್ತುಗಳನ್ನು ಖರೀದಿಸಿಲ್ಲ, ಆದ್ರೆ ಭಾರತದಲ್ಲಿ ಕಮ್ಮಿ ಹಣಕ್ಕೆ ಪ್ರಿಮಿಯಂ ವಸ್ತುಗಳನ್ನು ಖರೀದಿಸಿದ್ದೇನೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜವಾಗಿಯೂ ಈ ಬಗ್ಗೆ ಬಹಳ ಸೊಗಸಾಗಿ ವಿವರಣೆಯನ್ನು ನೀಡಿದ್ದೀರಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಡಾಲರ್‌ಗಳಲ್ಲಿ ಸಂಪಾದಿಸಿ, ರೂಪಾಯಿಗಳಲ್ಲಿ ಕಡಿಮೆ ಖರ್ಚು ಮಾಡಿʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನೀವು ಯಾವಾಗಲೂ ಭಾರತದ ಬಗ್ಗೆ ಸಕಾರಾತ್ಮಕ ವಿಷಯಗಳನ್ನು ಹೇಳುವುದನ್ನು ಕೇಳುವುದೇ ಚೆಂದʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








