AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಸಂಖ್ಯೆಗಿಂತ ಕಂಪನಿಗಳ ಸಂಖ್ಯೆಯೇ ಹೆಚ್ಚು; ಏರ್​ಪೋರ್ಟ್ ಇಲ್ಲ; ಜನರು ಭಾರೀ ಶ್ರೀಮಂತರು; ಇದು ಲಿಕ್ಟನ್​ಸ್ಟೈನ್ ದೇಶದ ಕಥೆ

Surprising Story of Liechtenstein: ಯೂರೋಪ್​ನಲ್ಲಿರುವ ಈ ಪುಟ್ಟದ ದೇಶದಲ್ಲಿ ಒಂದೂ ಏರ್​ಪೋರ್ಟ್ ಇಲ್ಲ, ಸ್ವಂತ ಕರೆನ್ಸಿ ಇಲ್ಲ. ಆದರೂ ಬಹಳ ಶ್ರೀಮಂತ ದೇಶ. ಲಿಕ್ಟನ್​ಸ್ಟೈನ್ ದೇಶದಲ್ಲಿ ಜನಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಕಂಪನಿಗಳೇ ಇವೆ. ಇಲ್ಲಿಯ ಜನಸಂಖ್ಯೆಯ ಅರ್ಧದಷ್ಟು ಜನರು ಹೊರದೇಶಗಳಿಂದ ನಿತ್ಯವೂ ಬಂದು ಕೆಲಸ ಮಾಡಿ ಹೋಗುತ್ತಾರೆ.

ಜನಸಂಖ್ಯೆಗಿಂತ ಕಂಪನಿಗಳ ಸಂಖ್ಯೆಯೇ ಹೆಚ್ಚು; ಏರ್​ಪೋರ್ಟ್ ಇಲ್ಲ; ಜನರು ಭಾರೀ ಶ್ರೀಮಂತರು; ಇದು ಲಿಕ್ಟನ್​ಸ್ಟೈನ್ ದೇಶದ ಕಥೆ
ಲಿಕ್ಟನ್​ಸ್ಟೈನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 27, 2025 | 12:24 PM

Share

ವಿಶ್ವದ ಅತಿ ಶ್ರೀಮಂತ ದೇಶಗಳು ಯಾವುವೆಂದರೆ ನಿಮಗೆ ಅಮೆರಿಕ, ಸ್ವೀಡನ್, ಡೆನ್ಮಾರ್ಕ್ ಇತ್ಯಾದಿ ಹೆಸರು ಸ್ಮರಣೆಗೆ ಬರಬಹುದು. ಆದರೆ, ಲಿಕ್ಟನ್​ಸ್ಟೇನ್ (Liechtenstein) ಎನ್ನುವ ಹೆಸರು ಹೆಚ್ಚಿನ ಮಂದಿಗೆ ತಿಳಿದಿರುವುದು ಕಡಿಮೆ. ಇದು ವಿಶ್ವದಲ್ಲೇ ಅತಿಹೆಚ್ಚು ತಲಾದಾಯ ಹೊಂದಿರುವ ದೇಶಗಳ ಸಾಲಿಗೆ ಬರುತ್ತದೆ. ಈ ಪುಟ್ಟ ದೇಶದ ಬಗ್ಗೆ ಅಚ್ಚರಿ ಎನಿಸುವ ಹತ್ತು ಹಲವು ಅಂಶಗಳಿವೆ. ಈ ದೇಶದ ಬಗ್ಗೆ ಈಗ ಇಲ್ಲಿ ಬರೆಯಲು ಕಾರಣ, ಒಂದು ಸೋಷಿಯಲ್ ಮೀಡಿಯಾ ಪೋಸ್ಟ್. ಈ ದೇಶ ದೊಡ್ಡ ಶ್ರೀಮಂತ ದೇಶವಾದರೂ ಒಂದು ಏರ್​ಪೋರ್ಟ್ ಇಲ್ಲ, ಸ್ವಂತ ಕರೆನ್ಸಿ ಇಲ್ಲ ಎಂದು ಕೆಲ ಅಚ್ಚರಿಯ ಸಂಗತಿಗಳನ್ನು ಆ ಪೋಸ್ಟ್​ನಲ್ಲಿ ಬರೆಯಲಾಗಿತ್ತು.

ಲಿಕ್ಟನ್​ಸ್ಟೈನ್​ನಲ್ಲಿ ಏರ್​ಪೋರ್ಟ್ ಇಲ್ಲ ಎಂಬುದು ನಿಜ. ಅದರದ್ದೇ ಸ್ವಂತ ಕರೆನ್ಸಿ ಎಂಬುದೂ ಇಲ್ಲ. ನೆರೆಯ ದೇಶಗಳ ಕರೆನ್ಸಿಯನ್ನೇ ಬಳಸಲಾಗುತ್ತದೆ. ಆದರೂ ಕೂಡ ಇಲ್ಲಿಯ ಜನರು ಶ್ರೀಮಂತರೋ ಶ್ರೀಮಂತರು. ಹಾಗಂತ ಇಲ್ಲಿ ಅಪರಾಧ ಬಹಳ ಕಡಿಮೆ. ಮೋಸ ವಂಚನೆ, ದಗಾ ಇಲ್ಲ. ಇಡೀ ದೇಶದಲ್ಲಿ ಇರೋದು ಕೇವಲ 300 ಪೊಲೀಸರು. ಜೈಲಿನಲ್ಲಿ ಸದ್ಯ ಕಂಬಿ ಎಣಿಸುತ್ತಿರುವವರ ಸಂಖ್ಯೆ ಏಳು ಮಾತ್ರವಂತೆ. ಇದು ಅತ್ಯಂತ ಶ್ರೀಮಂತ ದೇಶಗಳಲ್ಲಿ ಒಂದು ಎನಿಸಿರುವುದು ಮಾತ್ರವಲ್ಲ, ಅತ್ಯಂತ ಸುರಕ್ಷಿತ ದೇಶಗಳಲ್ಲೂ ಒಂದಾಗಿದೆ.

ಇದನ್ನೂ ಓದಿ: 7.3 ಕಿ.ಮೀ ಕ್ರಮಿಸಲು ನನಗೆ 73 ನಿಮಿಷಗಳು ಬೇಕೇ ಬೇಕು; ಇದು ನನ್ನ ದಿನನಿತ್ಯದ ಪಾಡು

ಅಂದಹಾಗೆ ಲಿಕ್ಟನ್​ಸ್ಟೈನ್ ಯೂರೋಪ್​ನಲ್ಲಿರುವ ಒಂದು ಪುಟ್ಟ ದೇಶ. ಸ್ವಿಟ್ಜರ್​ಲ್ಯಾಂಡ್ ಮತ್ತು ಆಸ್ಟ್ರಿಯಾ ದೇಶಗಳ ನಡುವೆ ಇದೆ. ಇಲ್ಲಿಯ ಜನಸಂಖ್ಯೆ ಸುಮಾರು 39,000 ಇರಬಹುದು. ಬೆಂಗಳೂರಿನ ಒಂದು ಪುಟ್ಟ ಪ್ರದೇಶದ ಒಂದು ಲೇ ಔಟ್​ನಲ್ಲಿ ಇರುವಷ್ಟು ಜನಸಂಖ್ಯೆ ಮಾತ್ರವೇ. ಆದರೆ, ಅಚ್ಚರಿ ಎಂದರೆ ಇಲ್ಲಿ ನೊಂದಾಯಿಲ್ಪಟ್ಟಿರುವ ಕಂಪನಿಗಳ ಸಂಖ್ಯೆ 70,000 ಕ್ಕೂ ಅಧಿಕ.

ಜಿಡಿಪಿ ತಲಾದಾಯದಲ್ಲಿ ಇದು ಬಹಳ ಎತ್ತರದಲ್ಲಿದೆ. ಒಂದೂವರೆ ಲಕ್ಷ ಡಾಲರ್​ಗೂ ಅಧಿಕ ತಲಾದಾಯ ಇದೆ. ಅಮೆರಿಕದಕ್ಕಿಂತ ಬಹುತೇಕ ಎರಡು ಪಟ್ಟು ಹೆಚ್ಚು ಹೊಂದಿದೆ.

ಲಿಕ್ಟನ್​ಸ್ಟೈನ್ ದೇಶಕ್ಕೆ ಆದಾಯ ಮೂಲ?

ಲಿಕ್ಟನ್​ಸ್ಟೈನ್ ದೇಶಕ್ಕೆ ಪ್ರಮುಖ ಆದಾಯವೇ ಅದರಲ್ಲಿರುವ ಕೈಗಾರಿಕೆಗಳು ಮತ್ತು ಉದ್ದಿಮೆಗಳು. ಇಲ್ಲಿ ಆರ್ ಅಂಡ್ ಡಿಗೆ ಹೆಚ್ಚು ಒತ್ತುಕೊಡಲಾಗುತ್ತದೆ. ಹೀಗಾಗಿ, ಉತ್ಕೃಷ್ಟ ತಂತ್ರಜ್ಞಾನ ಇರುವ ಉದ್ದಿಮೆಗಳು ನೆಲಸಿವೆ. ಈ ದೇಶದ ಜನಸಂಖ್ಯೆಯ ಅರ್ಧದಷ್ಟು ಜನರು ಇಲ್ಲಿ ದಿನವೂ ಬಂದು ಕೆಲಸ ಮಾಡಿ ಹೋಗುತ್ತಾರೆ. ಇದರ ಫಲವಾಗಿ ಸಾಕಷ್ಟು ಆದಾಯ ಈ ದೇಶಕ್ಕೆ ಇದೆ.

ಇದನ್ನೂ ಓದಿ: ಒಂದಲ್ಲ, ಎರಡಲ್ಲ, ಬರೋಬ್ಬರಿ 10,000 ಕೋಟಿ ರೂ ಸಂಬಳದ ಕೆಲಸ; ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ; ಏನಿವನ ಕರಾಮತ್ತು?

ಈ ದೇಶದಲ್ಲಿ ಉತ್ಕೃಷ್ಟ ಶಿಕ್ಷಣ ವ್ಯವಸ್ಥೆ ಇದೆ. ಆದರೆ, ಪೂರ್ಣ ಉಚಿತ. ಶ್ರೀಮಂತರೇ ಅಧಿಕ ಇರುವ ಈ ದೇಶದಲ್ಲಿ ಏರ್​ಪೋರ್ಟ್ ಇಲ್ಲ. ಇಲ್ಲಿನ ಜನರು ನೆರೆಯ ದೇಶಗಳಿಗೆ ಹೋಗಿ ವಿಮಾನ ಹತ್ತುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ