AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Microsoft: ಮನುಷ್ಯರ ಮಲ, ಮೂತ್ರ ಖರೀದಿಸುತ್ತಿದೆ ಮೈಕ್ರೋಸಾಫ್ಟ್; ಒಂದು ಟನ್​ಗೆ 30 ಸಾವಿರ ರೂ; ಯಾಕೆ ಗೊತ್ತಾ?

Microsoft to buy 4.9 Million Metric Ton of human waste: ಮೈಕ್ರೋಸಾಫ್ಟ್ ಸಂಸ್ಥೆ ಮನುಷ್ಯರ ತ್ಯಾಜ್ಯ ಹಾಗೂ ಪೇಪರ್ ಮಿಲ್ ತ್ಯಾಜ್ಯ ಇತ್ಯಾದಿಯನ್ನು ಭಾರೀ ದುಡ್ಡು ಕೊಟ್ಟು ಖರೀದಿಸುತ್ತಿದೆ. ವಾಲ್ಟೆಡ್ ಡೀಪ್ ಎನ್ನುವ ಸ್ಟಾರ್ಟಪ್​ನಿಂದ ಅದು 12 ವರ್ಷ ಕಾಲ ಒಪ್ಪಂದ ಮಾಡಿಕೊಂಡಿದ್ದು 4.9 ಮಿಲಿಯನ್ ಮೆಟ್ರಿಕ್ ಟನ್ ತ್ಯಾಜ್ಯವನ್ನು ಕೊಳ್ಳುತ್ತಿದೆ. 1.7 ಬಿಲಿಯನ್ ಡಾಲರ್ ಮೊತ್ತದ 12 ವರ್ಷದ ಡೀಲ್ ಆಗಿದೆ.

Microsoft: ಮನುಷ್ಯರ ಮಲ, ಮೂತ್ರ ಖರೀದಿಸುತ್ತಿದೆ ಮೈಕ್ರೋಸಾಫ್ಟ್; ಒಂದು ಟನ್​ಗೆ 30 ಸಾವಿರ ರೂ; ಯಾಕೆ ಗೊತ್ತಾ?
ಮೈಕ್ರೋಸಾಫ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 27, 2025 | 4:06 PM

Share

ನವದೆಹಲಿ, ಜುಲೈ 27: ಜಾಗತಿಕ ಟೆಕ್ ಕಂಪನಿ ಮೈಕ್ರೋಸಾಫ್ಟ್ (Microsoft) ಮನುಷ್ಯರ ಮಲ ಮೂತ್ರ ತ್ಯಾಜ್ಯಗಳನ್ನು ಹಣ ಕೊಟ್ಟು ಖರೀದಿಸುತ್ತಿದೆ. ಒಂದು ಟನ್ ತ್ಯಾಜ್ಯವನ್ನು 350 ಡಾಲರ್, ಅಂದರೆ ಸುಮಾರು 30,000 ರುಪಾಯಿಗೆ ಖರೀದಿ ಮಾಡುತ್ತಿದೆ. ‘ವೋಲ್ಟೆಡ್ ಡೀಪ್’ ಎನ್ನುವ ಕಂಪನಿ ಜೊತೆ 12 ವರ್ಷಕ್ಕೆ ಡೀಲ್ ಮಾಡಿಕೊಂಡಿದೆ. ಒಟ್ಟು 4.9 ಎಂಎಂಟಿ ಸಾವಯವ ತ್ಯಾಜ್ಯವನ್ನು ಪಡೆಯುತ್ತಿದೆ. ಇದಕ್ಕಾಗಿ ಅದು ಒಟ್ಟು 1.7 ಬಿಲಿಯನ್ ಡಾಲರ್ ಅಥವಾ 14-15 ಸಾವಿರ ಕೋಟಿ ರೂ ವ್ಯಯಿಸಲಿದೆ. ಸಾಫ್ಟ್​ವೇರ್ ಕಂಪನಿಯಾದ ಮೈಕ್ರೋಸಾಫ್ಟ್ ಗೋಬರ್ ಗ್ಯಾಸ್ ಬ್ಯುನಿನೆಸ್​ಗೆ ಇಳಿದಿದೆಯಾ ಎಂದು ಅನುಮಾನ ಬರಬಹುದು. ಆದರೆ, ತ್ಯಾಜ್ಯ ಖರೀದಿಸುವ ಹಿಂದಿನ ಉದ್ದೇಶ ಬೇರೆ ಇದೆ.

ಮೈಕ್ರೋಸಾಫ್ಟ್ ಕೆಲಸ ಪಾಪ ನಿವಾರಣಾರ್ಥಾಯ…

ಮೈಕ್ರೋಸಾಫ್ಟ್ ಸಂಸ್ಥೆಯ ಎಐ ಚಟುವಟಿಕೆಗಳಿಂದ ಸಾಕಷ್ಟು ಇಂಗಾಲ ಅನಿಲವು ವಾತಾವರಣವನ್ನು ಸೇರುತ್ತಿದೆ. 2020ರಿಂದ 2024ರ ಅವಧಿಯಲ್ಲಿ ಕಂಪನಿಯು 75.5 ಮಿಲಿಯನ್ ಟನ್ ಕಾರ್ಬನ್ ಎಮಿಷನ್​​ಗೆ ಕಾರಣವಾಗಿದೆ. ಜಾಗತಿಕ ಪರಿಸರ ನಿಯಮಾವಳಿಗಳ ಪ್ರಕಾರ ಕಂಪನಿಗಳು ವಾಯು ಮಾಲಿನ್ಯ ಹೊರ ಹಾಕಿದಷ್ಟೂ ಮಾಲಿನ್ಯ ನಿವಾರಣೆಯ ಕಾರ್ಯವನ್ನೂ ಮಾಡಬೇಕು. ಅಂತೆಯೇ, ಮೈಕ್ರೋಸಾಫ್ಟ್ ಸಂಸ್ಥೆ 2030ರಷ್ಟರಲ್ಲಿ ಕಾರ್ಬನ್ ನೆಗಟಿವ್ ಆಗುವ ಗುರಿ ಹೊಂದಿದೆ. ಆ ನಿಟ್ಟಿನಲ್ಲಿ ವೋಲ್ಟೆಡ್ ಡೀಪ್ ಕಂಪನಿಯನ್ನು ಕೈಜೋಡಿಸಿಕೊಂಡಿದೆ.

ವಾಲ್ಟೆಡ್ ಡೀಪ್ ಕಂಪನಿಯ ಕೆಲಸವೇನು?

ವಾಲ್ಟೆಡ್ ಡೀಪ್ ಕಂಪನಿಯು ಮರುಬಳಕೆ ಮಾಡಲು ಕಷ್ಟಸಾಧ್ಯವಂತಹ ಜೈವಿಕ ತ್ಯಾಜ್ಯವನ್ನು ಸಂಗ್ರಹಿಸಿ, ಭೂಮಿಯಿಂದ 5,000 ಅಡಿ ಕೆಳಗೆ ಪೈಪ್ ಮೂಲಕ ತಳ್ಳುತ್ತದೆ. ಆಗ ಈ ಬಯೋವರ್ಜಕಗಳು ಡೀಪಾಂಪೋಸ್ ಆಗುವ ಪ್ರಕ್ರಿಯೆ ನಿಲ್ಲುತ್ತದೆ. ಇದರಿಂದ ಮೀಥೇನ್ ಹಾಗೂ ಕಾರ್ಬನ್ ಡೈ ಆಕ್ಸೈಡ್ ವಾತಾವರಣಕ್ಕೆ ಬಿಡುಗಡೆ ಆಗದಂತೆ ನಿಯಂತ್ರಣವಾಗುತ್ತದೆ. ಈ ಮೂಲಕ ಪರಿಸರ ಮಾಲಿನ್ಯ ನಿಯಂತ್ರ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಜನಸಂಖ್ಯೆಗಿಂತ ಕಂಪನಿಗಳ ಸಂಖ್ಯೆಯೇ ಹೆಚ್ಚು; ಏರ್​ಪೋರ್ಟ್ ಇಲ್ಲ; ಜನರು ಭಾರೀ ಶ್ರೀಮಂತರು; ಇದು ಲಿಕ್ಟನ್​ಸ್ಟೈನ್ ದೇಶದ ಕಥೆ

ಮೈಕ್ರೋಸಾಫ್ಟ್ ಇತ್ಯಾದಿ ಆಧುನಿಕ ಟೆಕ್ ಕಂಪನಿಗಳು ಕಾರ್ಯನಿರ್ವಹಿಸಬೇಕಾದರೆ ಪರಿಸರ ಮಾಲಿನ್ಯವಾಗುವಂತಹ ಪ್ರಕ್ರಿಯೆಗಳು ಅನಿವಾರ್ಯ. ಅಲ್ಲಿ ತುಂಬಿದ ಪಾಪವನ್ನು ಬೇರೆಡೆ ನಿವಾರಿಸುವ ಕೆಲಸವನ್ನು ಅನೇಕ ಕಂಪನಿಗಳು ಮಾಡುತ್ತವೆ. ಅದಕ್ಕಾಗೆಂದೇ ಕಾರ್ಬನ್ ಕ್ರೆಡಿಟ್ ವ್ಯವಸ್ಥೆ ಇದೆ. ಪರಿಸರಸ್ನೇಹಿ ಕಾರ್ಯಗಳಿಗೆ ಹಣ ವಿನಿಯೋಗಿಸಿ ಕಾರ್ಬನ್ ಕ್ರೆಡಿಟ್ ಸಂಪಾದಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ