AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಟೈಮ್ ಆದ್ರೂ ಕೆಲಸ ವಹಿಸಿದ ಮ್ಯಾನೇಜರ್, ನೋ ಎಂದು ಆಫೀಸಿನಿಂದ ಹೊರನಡೆದ ಉದ್ಯೋಗಿ

ಕೆಲವರಿಗೆ ಕೆಲಸ ಅನಿವಾರ್ಯ, ಹೀಗಾಗಿ ತಮ್ಮ ಕೆಲಸದ ಸಮಯ ಮುಗಿದ ಸರಿಯೇ, ಮ್ಯಾನೇಜರ್ ಹೇಳಿದ ಆ ದಿನದ ಕೆಲಸವನ್ನು ಮಾಡಿ ಮುಗಿಸುವವರು ಇದ್ದಾರೆ. ಒಂದು ವೇಳೆ ಹೆಚ್ಚುವರಿ ಕೆಲಸ ಮಾಡಲು ಒಪ್ಪದಿದ್ದರೆ ತನ್ನನ್ನು ಕೆಲಸದಿಂದ ತೆಗೆದು ಹಾಕುತ್ತಾರೆ ಎನ್ನುವ ಭಯ ಕಾಡುತ್ತದೆ. ಕೆಲವರು ಎಲ್ಲವನ್ನು ಸಹಿಸಿಕೊಳ್ಳುವುದಿಲ್ಲ. ಟೈಮ್ ಆಗುತ್ತಿದ್ದಂತೆ ಮನೆಗೆ ಹೊರಡುತ್ತಾಳೆ. ಇಲ್ಲೊಬ್ಬಳು ಯುವತಿಯೂ ಮ್ಯಾನೇಜರ್ ಆಫೀಸ್ ಟೈಮ್ ಮುಗಿದ ಮೇಲೆ ಕೆಲಸವನ್ನು ಮಾಡುವಂತೆ ಹೇಳಿದ್ದಾರೆ. ಆದರೆ ಈ ಯುವತಿಯೂ ಸಾಧ್ಯವಿಲ್ಲ ಎಂದು ಹೇಳಿ ಆಫೀಸಿನಿಂದ ಹೊರನಡೆದಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಟೈಮ್ ಆದ್ರೂ ಕೆಲಸ ವಹಿಸಿದ ಮ್ಯಾನೇಜರ್, ನೋ ಎಂದು ಆಫೀಸಿನಿಂದ ಹೊರನಡೆದ ಉದ್ಯೋಗಿ
ವೈರಲ್ ವಿಡಿಯೋImage Credit source: Instagram
ಸಾಯಿನಂದಾ
|

Updated on: Aug 10, 2025 | 6:24 PM

Share

ಕಂಪನಿಗಳು (company) ಕೆಲಸ ಮಾಡುವ ನೌಕರರಿಗೆ ಕೆಲವೊಂದು ಕಟ್ಟುನಿಟ್ಟಾದ ಕ್ರಮಗಳು, ನಿಯಮಗಳನ್ನು ವಿಧಿಸುತ್ತದೆ. ಒಂದು ವೇಳೆ ಸರಿಯಾಗಿ ಕೆಲಸ ಮಾಡದಿದ್ದಲ್ಲಿ ಆ ನೌಕರರನ್ನು ಕೆಲಸದಿಂದ ವಜಾಗೊಳಿಸುವುದು ಸಹಜ. ಕೆಲವೊಮ್ಮೆ ನಿಗದಿತ ಸಮಯಕ್ಕಿಂತ ಹೆಚ್ಚುವರಿ ಕೆಲಸ ಮಾಡುವಂತೆ ಒತ್ತಡ ಹಾಕುವುದಿದೆ. ಹೀಗಾಗಿ ಈ ಟಾಕ್ಸಿಕ್ ಕೆಲಸದ ಸಂಸ್ಕೃತಿಯ ಕುರಿತಾದ ವಿಡಿಯೋಗಳು ಸೋಶಿಯಲ್ ಮೀಡಿಯಾ ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಯುವತಿಯೊಬ್ಬಳು ಕಚೇರಿಯ ಕೆಲಸದ ಸಂಸ್ಕೃತಿಯ (work place culture) ಬಗ್ಗೆ ರೊಚ್ಚಿಗೆದ್ದಿದ್ದಾಳೆ. ಸಮಯ ಆಗುತ್ತಿದ್ದಂತೆ ನಾನು ಹೊರಡುತ್ತೇನೆ. ಹೆಚ್ಚುವರಿ ಕೆಲಸವನ್ನು ಒಪ್ಪಿಕೊಂಡು ಮಾಡಲು ನಾನು ತಯಾರಿಲ್ಲ ಎಂದು ತಮ್ಮ ಮ್ಯಾನೇಜರ್‌ಗೆ ಹೇಳಿರುವುದಾಗಿ ವಿವರಿಸಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಜನರೇಷನ್ ಝೆಡ್ ಉದ್ಯೋಗಿಯೂ ಮಾಡಿದ್ದು ಸರಿ ಎಂದು ಹೇಳಿದ್ದಾರೆ.

Kad shatakshi ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಯುವತಿಯೊಬ್ಬಳು ಕಚೇರಿಯಲ್ಲಿ ಕೆಲಸದ ಸಂಸ್ಕೃತಿ ಬಗ್ಗೆ ಮಾತನಾಡಿದ್ದಾಳೆ. ಈ ವೇಳೆಯಲ್ಲಿ ಜನರೇಷನ್ ಝೆಡ್ ಅವರು ಎಕ್ಸ್‌ ಹಾಗೂ ವೈ ಅವರಂತೆ ಎಲ್ಲದನ್ನು ಚಾಚು ತಪ್ಪದೇ ಪಾಲಿಸುವುದಿಲ್ಲ ಎನ್ನುವುದು ಸ್ಪಷ್ಟಪಡಿಸಿದ್ದಾಳೆ. ಹೌದು, ಈ ಎಕ್ಸ್‌ ಹಾಗೂ ವೈ ತಲೆಮಾರಿನ ಜನರೇ ಎಲ್ಲಾ ಕಠಿಣ ಪರಿಶ್ರಮದ ಹೆಸರಿನಲ್ಲಿ ಟಾಕ್ಸಿಕ್ ಕೆಲಸದ ಸಂಸ್ಕೃತಿಯನ್ನು ತಪ್ಪದೇ ಪಾಲಿಸಬೇಡಿ ಎಂದು ಖಾರವಾಗಿ ಹೇಳಿದ್ದು, ತಮ್ಮ ಆಫೀಸಿನಲ್ಲಿ ಏನಾಯಿತು ಎನ್ನುವುದನ್ನು ಈ ವಿಡಿಯೋದಲ್ಲಿ ವಿವರಿಸಿರುವುದನ್ನು ನೋಡಬಹುದು.

ಇದನ್ನೂ ಓದಿ
Image
ಗೇಲಿ ಮಾಡಿದ ಸಂಬಂಧಿಕರಿಗೆ ತಕ್ಕ ಉತ್ತರ ನೀಡಿದ ಯುವಕ, ಏನ್‌ ಮಾಡಿದ ನೋಡಿ
Image
ಈ ಕೆಲಸ ಗೊತ್ತಿದ್ರೆ 30 ನಿಮಿಷಕ್ಕೆ 2000 ರೂ ದುಡಿಯಬಹುದಂತೆ
Image
ಕಡಿಮೆ ಸಂಬಳ, ಬೆಂಗಳೂರಿನಲ್ಲಿ ಬದುಕೋದು ಕಷ್ಟ ಎಂದ ಯುವಕ
Image
ಮಹಿಳೆಗೆ ಕೆಲಸ ನೀಡಲು ನಿರಾಕರಿಸಿದ ಕಂಪನಿ, ಕಾರಣ ಇದೆ ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ನಾನೀಗ ಮನೆಗೆ ಹೋಗುತ್ತಿದ್ದೇನೆ, ಹಾಗೂ ನನ್ನ ರಿಪೋರ್ಟಿಂಗ್ ಮ್ಯಾನೇಜರ್ ನನ್ನ ಬಳಿ ಬಂದು, ಶತಾಕ್ಷಿ, ಸ್ವಲ್ಪ ಹೆಚ್ಚು ಕೆಲಸವಿದೆ, ನಾನು ಅದನ್ನು ನಿಮಗೆ ನಿಯೋಜಿಸುತ್ತಿದ್ದೇನೆ, ದಯವಿಟ್ಟು ಅದನ್ನು ಮಾಡಿ ಎಂದರು. ಆದರೆ ನಾನು ಇಲ್ಲ ಸರ್, ನಾನು ಇಂದು ಸಮಯಕ್ಕೆ ಸರಿಯಾಗಿ ಹೋಗಬೇಕು ಎಂದು ನೇರವಾಗಿಯೇ ಹೇಳಿದೆ. ಅಷ್ಟೇ ಅಲ್ಲದೇ, ನಾನು ಸಮಯಕ್ಕೆ ಸರಿಯಾಗಿ ಹೋಗ್ಬೇಕು, ನಾನೇನು ಆಫೀಸಿನಿಂದ ಬೇಗನೆ ಹೊರಟಿಲ್ಲ. ನಾನು ನನ್ನ ಎಲ್ಲಾ ಕೆಲಸವನ್ನು ಆಫೀಸ್ ಟೈಮ್ ನಲ್ಲಿ ಪೂರ್ಣಗೊಳಿಸಿದ್ದೇನೆ, ನಾನು ಹೆಚ್ಚುವರಿ ಸಮಯ ಕಚೇರಿಯಲ್ಲಿ ಕಳೆಯಲು ಬಯಸುವುದಿಲ್ಲ, ಏಕೆಂದರೆ ನಾನು ಇಂದು ಉಪವಾಸ ಮಾಡುತ್ತಿದ್ದೇನೆ. ಅದಲ್ಲದೇ ನಾನು ನಿನ್ನೆ ರಾತ್ರಿ ರೈಲಿನಲ್ಲಿದ್ದೆ, ಬೆಳಗ್ಗೆ 7 ಗಂಟೆಗೆ ತಲುಪಿದೆ. 7:30 ಕ್ಕೆ ಆಫೀಸ್‌ಗೆ ಬಂದೆ, ನಾನು ಸಂಜೆ 6:30 ರವರೆಗೆ ಇಲ್ಲೇ ಇದ್ದೇನೆ ಯುವತಿ ಎಂದಿದ್ದಕ್ಕೆ, ನೀವು ಕೆಲಸ ಮಾಡಲು ಸಮಯವನ್ನು ನೀಡಿದ್ದೀರಿ ನೀವು ಮನೆಗೆ ಹೋಗಬಹುದು ಎಂದು ಹೇಳಿದ್ದಾರೆಯಂತೆ ಅವರ ಮ್ಯಾನೇಜರ್.

ಮ್ಯಾನೇಜರ್‌ನ ಈ  ಮನಸ್ಥಿತಿಯ ಬಗ್ಗೆ ಮಾತನಾಡಿದ್ದು, ಈ ರೀತಿ ಮನಸ್ಥಿತಿ ಹಾಗೂ ಕಂಡೀಷನಿಂಗ್ ಬಿಹೇವಿಯರ್ ಎಲ್ಲಿಂದ ಬರುತ್ತವೆ ಎಂದು ನನಗೆ ಅರ್ಥವಾಗುತ್ತಿಲ್ಲ. ಒಬ್ಬ ವ್ಯಕ್ತಿ ದಿನಕ್ಕೆ ಎರಡು ಹೊತ್ತಿನ ಹಸಿವನ್ನು ನೀಗಿಸಲು ಕೆಲಸ ಮಾಡುತ್ತಾನೆ. ಆದರೆ ಅಷ್ಟು ಕಷ್ಟ ಪಟ್ಟು ದುಡಿದ ಅನ್ನವನ್ನು ನೆಮ್ಮದಿಯಿಂದ ತಿನ್ನಲು ಆಗದೇ ಇದ್ದರೆ ಹೇಗೆ ಅಲ್ಲವೇ. ಅನಗತ್ಯವಾಗಿ ನಿಮ್ಮ ಮೇಲೆ ನೀವು ಹೊರೆ ಹಾಕಿಕೊಳ್ಳುವುದು ಯಾಕೆ? ಇದು ನಿಜಕ್ಕೂ ನರಕ.. ಅತಿಯಾದ ಕೆಲಸವನ್ನು ಮೈ ಮೇಲೆ ಹಾಕಿಕೊಂಡು ನಿಮ್ಮನ್ನು ನೀವು ಸಾಯಿಸುವ ಪ್ರಯತ್ನ ಮಾಡಬೇಡಿ. ನಾನು ಇದನ್ನೂ ನಿಜಕ್ಕೂ ಒಪ್ಪಲ್ಲ. ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ರು ನಾನು ಯೋಚನೆ ಮಾಡಲ್ಲ, ಚಿಂತೆ ಮಾಡಲ್ಲ, ಆದರೆ ಹೆಚ್ಚುವರಿ ಕೆಲಸ ಮಾಡುವುದನ್ನು ಮಾತ್ರ ಒಪ್ಪಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದಾಳೆ.

ಇದನ್ನೂ ಓದಿ: Viral: ತಿಂಗಳಿಗೆ 3 ಲಕ್ಷ ರೂ ದುಡಿದು ಕಡಿಮೆ ಮಾರ್ಕ್ಸ್ ತೆಗೆದಿದ್ದೀಯಾ ಎಂದು ಗೇಲಿ ಮಾಡಿದ ಸಂಬಂಧಿಕರಿಗೆ ತಕ್ಕ ಉತ್ತರ ನೀಡಿದ ಯುವಕ

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಮ್ಯಾನೇಜರ್ ಅಥವಾ ಮೇಲಿನ ಅಧಿಕಾರಿಗಳಿಗೆ ನೇರವಾಗಿ ಹೇಳುವ ಗುಣ ಬೇಕು, ಇಲ್ಲದಿದ್ದರೆ ಒತ್ತಡ ಭರಿತ ಕೆಲಸದ ವಾತಾವರಣ ಉಂಟಾಗುತ್ತದೆ ಎಂದು ಹೇಳಿದ್ದಾರೆ. ವಿಪರೀತ ಕೆಲಸ ಮಾಡುವುದು ಹೆಮ್ಮೆ ಪಡುವ ವಿಚಾರವಲ್ಲ, ಇದೊಂದು ರೀತಿಯ ದೌರ್ಜನ್ಯ. ನೀವು ಧೈರ್ಯದಿಂದ ಹೇಳುವ ಇಂತಹ ಸಂದರ್ಭವನ್ನು ವಿರೋಧಿಸುವುದು ಮುಖ್ಯ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿಮ್ಮ ಮಾತನ್ನು ಖಂಡಿತ ಒಪ್ಪುತ್ತೇನೆ. ಅದರ ಜೊತೆಗೆ ನಿಮ್ಮ ಕಣ್ಣು ತುಂಬಾನೇ ಸುಂದರ ವಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ