Optical Illusion: ಈ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು 12 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣು ಹಾಗೂ ಮೆದುಳಿಗೆ ಸವಾಲೊಡ್ದುವ ಕುತೂಹಲಕಾರಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಅಡಗಿರುವ ಕಪ್ಪೆಯನ್ನು ಹುಡುಕಬೇಕು. ಈ ಸವಾಲನ್ನು ಬಗೆಹರಿಸುವ ಮುನ್ನ ನಿಮಗಿರುವ ಸಮಯ ಹನ್ನೆರಡು ಸೆಕೆಂಡುಗಳು ಮಾತ್ರ ಎನ್ನುವುದು ತಲೆಯಲ್ಲಿರಲಿ. ಈ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯನಾ?

ಆಪ್ಟಿಕಲ್ ಇಲ್ಯೂಷನ್ (optical illusion) ಹಾಗೂ ಬ್ರೈನ್ ಟೀಸರ್ (brain teaser) ನಂತಹ ಒಗಟಿನ ಚಿತ್ರಗಳು ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಲು ಸಹಾಯಕವಾಗಿದೆ. ಈ ಒಗಟನ್ನು ಬಿಡಿಸುವ ಮಜಾನೇ ಬೇರೆ, ಆದರೆ ಎಷ್ಟೋ ಜನರಿಗೆ ಇಂತಿಷ್ಟು ಕಾಲದ ಮಿತಿಯಲ್ಲಿ ಇಂತಹ ಟ್ರಿಕ್ಕಿ ಒಗಟನ್ನು ಬಿಡಿಸಲು ಸಾಧ್ಯವಾಗುವುದಿಲ್ಲ. ಆದರೆ ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರವು ನೋಡುವುದಕ್ಕೆ ಸರಳವಾಗಿದೆ. ಹಚ್ಚ ಹಸಿರಾದ ಗಿಡಗಳು ಹುಲ್ಲಿನ ನಡುವೆ ಕಪ್ಪೆಯೊಂದು ಅಡಗಿದೆ. ಹೀಗಾಗಿ ನೀವು ಹನ್ನೆರಡು ಸೆಕೆಂಡುಗಳೊಳಗೆ ಈ ಒಗಟನ್ನು ಬಿಡಿಸಿ ಕಪ್ಪೆ ಎಲ್ಲಿದೆ ಎಂದು ಹೇಳಬೇಕು.
ಈ ಚಿತ್ರದಲ್ಲಿ ಏನಿದೆ?

ರೋಡ್‌ಕಿಲ್‌ಗೋಬ್ಲಿನ್_2 ಅವರು ‘ ಫೈಂಡ್ ದಿ ಸ್ನೈಪರ್ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ಒಗಟಿನ ಆಟಗಳು ಮನೋರಂಜನೆಯೊಂದಿಗೆ ಯೋಚನಾ ಶಕ್ತಿ ಮತ್ತು ಏಕಾಗ್ರತೆಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಇಂತಹ ಒಗಟಿನ ಆಟಗಳಿಗೆ ಉತ್ತರ ಕಂಡುಹಿಡಿಯುವ ಕ್ರೇಜ್ ನಿಮಗಿದ್ರೆ ಇದೀಗ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ನಿಮಗಾಗಿ. ಹಚ್ಚ ಹಸಿರಾದ ಪರಿಸರವನ್ನು ನೀವು ಕಾಣಬಹುದು. ಹಚ್ಚಹಸಿರಿನಿಂದ ಕೂಡಿದ ಗಿಡಗಳು ಹಾಗೂ ಹುಲ್ಲಿನ ನಡುವೆ ಕಪ್ಪೆಯೊಂದು ಅಡಗಿದೆ. ಈ ಚಿತ್ರವನ್ನು ಬಹಳ ಎಚ್ಚರಿಕೆಯಿಂದ ಗಮನಿಸಿ ಈ ಈ ಹಸಿರಾದ ಹುಲ್ಲಿನ ನಡುವೆ ಮರೆ ಮಾಡಲಾದ ಕಪ್ಪೆಯನ್ನು ಕಂಡುಹಿಡಿಯಬೇಕು.
ಉತ್ತರ ಇಲ್ಲಿದೆ
ಅಬ್ಬಬ್ಬಾ ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಅಡಗಿರುವ ಕಪ್ಪೆಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲವೇ, ಇದಕ್ಕಾಗಿ ನೀವು ಹೆಚ್ಚು ತಲೆ ಕೆಡಿಸಿಕೊಂಡಿದ್ದೀರಾ? ಚಿಂತಿಸಬೇಡಿ. ನಾವು ನಿಮಗೆ ಆ ಹಚ್ಚಹಸಿರಾದ ಗಿಡಗಳು ಹಾಗೂ ಹುಲ್ಲಿನ ನಡುವೆ ಕಪ್ಪೆಯೊಂದು ಎಲ್ಲಿ ಅಡಗಿದೆ ಎಂದು ಹೇಳುತ್ತೇವೆ. ಚಿತ್ರದ ಕೆಳಭಾಗದಲ್ಲಿ ಕಣ್ಣು ಹಾಯಿಸಿ. ಕೆಳಭಾಗದ ಮಧ್ಯಭಾಗದಲ್ಲಿ ಕಪ್ಪೆಯೂ ಇದೆ, ಸರಿಯಾಗಿ ಗಮನಿಸಿದರೆ ಕಪ್ಪೆ ನಿಮ್ಮ ಕಣ್ಣಿಗೆ ಖಂಡಿತ ಕಾಣಿಸುತ್ತದೆ.
ಇದನ್ನೂ ಓದಿ: Optical illusion: ನೀವು ಜಾಣರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಮುಖವನ್ನು ಕಂಡು ಹಿಡಿಯಿರಿ ನೋಡೋಣ
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಈ ಒಗಟಿನ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಬಳಿಕ ಬಳಕೆದಾರರು ಕಾಮೆಂಟ್ ಮಾಡಿ ತಮ್ಮ ಉತ್ತರವನ್ನು ಹೇಳಿದ್ದಾರೆ. ಒಬ್ಬ ಬಳಕೆದಾರ, ತಕ್ಷಣವೇ ಸಿಕ್ಕಿತು ಎಂದು ಹೇಳಿದರೆ ಮತ್ತೊಬ್ಬರು ಈ ಒಗಟನ್ನು ಬಿಡಿಸುವುದು ತುಂಬಾನೇ ಸುಲಭವಾಗಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








