AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹುಟ್ಟಿದ ಕೆಲವೇ ಗಂಟೆಗಳಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ತಾಯಿಯನ್ನು ಹಿಂಬಾಲಿಸಿ ರಸ್ತೆ ದಾಟಿದ ಮರಿಯಾನೆ

ಪುಟಾಣಿ ಆನೆಗಳು ಏನು ಮಾಡಿದ್ರು ನೋಡೋಕೆ ಚಂದ. ಸೋಶಿಯಲ್ ಮೀಡಿಯಾದಲ್ಲಿ ಮರಿಯಾನೆಗಳ ಆಟ ತುಂಟಾಟದ ವಿಡಿಯೋ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಆಗ ತಾನೇ ಹುಟ್ಟಿದ ಮರಿಯಾನೆಯು ತನ್ನ ತಾಯಿಯನ್ನು ಹಿಂಬಾಲಿಸಿಕೊಂಡು ರಸ್ತೆ ದಾಟುವ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದೆ. ಈ ದೃಶ್ಯ ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

Video: ಹುಟ್ಟಿದ ಕೆಲವೇ ಗಂಟೆಗಳಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ತಾಯಿಯನ್ನು ಹಿಂಬಾಲಿಸಿ ರಸ್ತೆ ದಾಟಿದ ಮರಿಯಾನೆ
ವೈರಲ್ ವಿಡಿಯೋImage Credit source: Twitter
ಸಾಯಿನಂದಾ
|

Updated on: Aug 10, 2025 | 10:50 AM

Share

ಪುಟಾಣಿ ಆನೆಗಳನ್ನು (elephant) ನೋಡಿದರೆ ಅಪ್ಪಿ ಮುದ್ದಾಗಿ ಬಿಡುವ ಎಂದೆನಿಸುತ್ತದೆ. ತನ್ನ ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ ಅತ್ತಿಂದ ಇತ್ತ ಓಡಾಡುವುದು, ಅವುಗಳ ಆಟ, ತುಂಟಾಟ, ತಾಯಿಯೊಂದಿಗೆ ಸಲುಗೆಯಿಂದ ವರ್ತಿಸುವುದನ್ನುನೋಡಿದ್ರೆ ಒಮ್ಮೆ ಮುದ್ದಾಡಬೇಕೆನಿಸುತ್ತದೆ. ಆನೆಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ತಾಯಿ ಆನೆಯೊಂದು ಆಗ ತಾನೇ ಹುಟ್ಟಿದ ನವಜಾತ ಶಿಶುವಿನೊಂದಿಗೆ ರಸ್ತೆ ದಾಟುತ್ತಿರುವ ಅದ್ಭುತ ವಿಡಿಯೋ ವೈರಲ್ ಆಗುತ್ತಿದ್ದು, ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ (Parveen kaswan) ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ತಾಯಿಯೂ ಮಗುವಿಗೆ ಮಾರ್ಗದರ್ಶನ ಮಾಡುವ ವಿಡಿಯೋ ಎಲ್ಲರ ಗಮನ ಸೆಳೆದಿದೆ.

ತಾಯಿಯನ್ನು ಹಿಂಬಾಲಿಸಿ ರಸ್ತೆ ದಾಟಿದ ಮರಿಯಾನೆ

ಇದನ್ನೂ ಓದಿ
Image
ನದಿಯಲ್ಲಿ ಫುಲ್​​​ ಎಂಜಾಯ್​​​ ಮೂಡನಲ್ಲಿ ಗಜಲಕ್ಷ್ಮೀ
Image
ತಳ್ಳಾಟ, ತುಂಟಾಟದಲ್ಲಿ ಬ್ಯುಸಿ ಈ ಮರಿಯಾನೆಗಳು, ಈ ಕ್ಯೂಟ್ ದೃಶ್ಯ ನೋಡಿ
Image
ಮಹಿಳೆಯ ಹಾಡಿಗೆ ಮನಸೋತ ಗಜರಾಜ
Image
ಪ್ರವಾಹದಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟ ಆನೆ

@Parveen Kaswan ಹೆಸರಿನ ಖಾತೆಯಲ್ಲಿ ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಅವರು, ತಾಯಿ ಆನೆ ತನ್ನ ಕಂದಮ್ಮಗಳಿಗೆ ಹುಟ್ಟಿದ ಕೆಲವೇ ಗಂಟೆಗಳನ್ನು ಮಾರ್ಗದರ್ಶನ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಮರಿಯಾನೆ ಹುಟ್ಟಿದಾಗಿನಿಂದ ಅಸ್ಥಿರವಾದ ನಡಿಗೆ, ಆನೆ ಮರಿಗಳು ಹುಟ್ಟಿದ ಒಂದರಿಂದ ಎರಡು ಗಂಟೆಗಳಲ್ಲಿಯೇ ನಡೆಯಲು ಪ್ರಾರಂಭಿಸುತ್ತವೆ. ಕಾಡಿನಲ್ಲಿ ಅವು ಚಲನಶೀಲವಾಗಿರಬೇಕು,ಅದಕ್ಕಾಗಿ ಅದು ಅವಶ್ಯಕ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಹುಟ್ಟುತ್ತಿದ್ದಂತೆ ಈ ಮರಿಯಾನೆಗಳು ಒಂದು ಮೀಟರ್ ಎತ್ತರ ಹಾಗೂ ಸುಮಾರು 120 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ. ಈ ಆನೆಗಳು ಹುಟ್ಟಿದ ಕೆಲವೇ ಕೆಲವು ನಿಮಿಷಗಳಲ್ಲಿ ನಿಲ್ಲುವ ಮೂಲಕ ಕೆಲವೇ ಗಂಟೆಗಳಲ್ಲಿ ತನ್ನ ಪಾದಗಳನ್ನು ಮುಂದಿಟ್ಟು, ಮೆಲ್ಲನೆ ನಡೆಯಲು ಪ್ರಾರಂಭಿಸುತ್ತದೆ. ಈ ವಿಡಿಯೋದಲ್ಲಿ ಆಗ ತಾನೇ ಹುಟ್ಟಿದ ಕರುವಿನೊಂದಿಗೆ ತಾಯಾನೆಯೊಂದು ರಸ್ತೆ ದಾಟುತ್ತಿವೆ. ಇಲ್ಲಿ ತನ್ನ ತಾಯಿಯನ್ನೇ ಹಿಂಬಾಲಿಸಿಕೊಂಡು ಪುಟ್ಟ ಪುಟ್ಟ ಹೆಜ್ಜೆಯಿಡುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ:ವ್ಹಾವ್​​​​ ಏನ್​​ ಖುಷಿ ನೋಡಿ ಈ ಆನೆಗೆ, ನದಿಯಲ್ಲಿ ಫುಲ್​​​ ಎಂಜಾಯ್​​​ ಮೂಡ್​​​ನಲ್ಲಿ ಗಜಲಕ್ಷ್ಮೀ

ಆಗಸ್ಟ್ 7 ರಂದು ಶೇರ್ ಮಾಡಲಾದ ಈ ವಿಡಿಯೋದಲ್ಲಿ ಇದುವರೆಗೆ ನಲವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಇದು ಪ್ರಕೃತಿಯ ಪವಾಡ, ಪ್ರಾಣಿಗಳು ಹುಟ್ಟಿದ ಕೂಡಲೇ ಬೇಕಾದ ಅಗತ್ಯ ಪಾಠವನ್ನು ತಾಯಿಯಿಂದಲೇ ಕಲಿತು ಬಿಡುತ್ತವೆ ಎಂದಿದ್ದಾರೆ. ಇನ್ನೊಬ್ಬರು, ಪ್ರಕೃತಿ ಹಾಗೂ ಅದರ ಸೃಷ್ಟಿಯೇ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ. ಎಂತಹ ಹೃದಯಸ್ಪರ್ಶಿ ಕ್ಷಣ, ಆ ಪುಟ್ಟ ಮಗುವಿನ ಮೊದಲ ಹೆಜ್ಜೆಗಳು ಪ್ರಕೃತಿಯ ಪರಿಪೂರ್ಣ ಸಮಯವನ್ನು ತೋರಿಸುತ್ತವೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ