ವ್ಹಾವ್ ಏನ್ ಖುಷಿ ನೋಡಿ ಈ ಆನೆಗೆ, ನದಿಯಲ್ಲಿ ಫುಲ್ ಎಂಜಾಯ್ ಮೂಡ್ನಲ್ಲಿ ಗಜಲಕ್ಷ್ಮೀ
ಸಾಮಾಜಿಕ ಜಾಲತಾಣದಲ್ಲಿ ಮೂಖ ಪ್ರಾಣಿಗಳ ತುಂಟಾಟದ ವಿಡಿಯೋ ಆಗ್ಗಾಗೆ ವೈರಲ್ ಆಗುತ್ತಾ ಇರುತ್ತದೆ. ಪ್ರಾಣಿಗಳ ಆಟ ನೋಡುವುದೇ ಚಂದ, ಅದರಲ್ಲೂ ಈ ಆನೆಗಳು ಮಾಡುವ ಕಿತಾಪತಿ ನೋಡಿದ್ರೆ ಮನಸ್ಸಿಗೆ ತುಂಬಾ ಸಂತೋಷವನ್ನು ನೀಡುತ್ತದೆ. ಹೀಗೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನೆ ಹರಿಯುವ ನದಿಯ ನೀರಿನಲ್ಲಿ ನಿಂತು, ಆ ಕ್ಷಣವನ್ನು ಎಂಜಾಯ್ ಮಾಡಿದೆ. ಈ ಬಗ್ಗೆ ಸೇವ್ ಎಲಿಫೆಂಟ್ ಫೌಂಡೇಶನ್‌ನ ಸಂಸ್ಥಾಪಕ ಲೆಕ್ ಚೈಲರ್ಟ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಪ್ರಾಣಿಗಳಿಗೂ ಹಾಗೂ ಮನುಷ್ಯರ ನಡುವೆ ಕೆಲವೇ ಕೆಲವು ವ್ಯತ್ಯಾಸ ಅಷ್ಟೇ, ಪ್ರಾಣಿಗಳು ಕೂಡ ಮನುಷ್ಯರಂತೆ ಎಂಜಾಯ್ ಮಾಡುತ್ತದೆ. ಅವುಗಳು ಕೂಡ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಅದರಲ್ಲೂ ಈ ನಾಯಿ, ಬೆಕ್ಕುಗಳು ಅಂದರೆ ಸಾಕು ಪ್ರಾಣಿಗಳು ತಮ್ಮ ತುಂಟಾಟವನ್ನು ತೋರಿಸುತ್ತದೆ. ಇನ್ನು ಈ ಪ್ರಾಣಿಗಳಿಗೆ ಹೊರತು ಪಡಿಸಿದರೆ, ಆನೆಗಳು ಕೂಡ ತುಂಬಾ ತುಂಟಾಟ ಹಾಗೂ ಎಂಜಾಯ್ ಆಗಿರುತ್ತದೆ. ಆನೆಗಳ (elephant) ಆಟಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗ್ಗಾಗೆ ಹರಿದಾಡುತ್ತಿರುತ್ತವೆ. ಇದೀಗ ಇಲ್ಲೊಂದು ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿ ಹಲವು ಜನ ತುಂಬಾ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಆನೆಯೊಂದು ಹರಿಯುವ ನದಿಯಲ್ಲಿ (elephant viral video) ಸಂತೋಷದಿಂದ ಈಜುತ್ತಾ, ಅಲ್ಲಿಯೇ ನಿಂತು ತನ್ನ ಮಾಲೀಕನನ್ನು ಕೂಡ ಬರಲು ಸನ್ನೆಯನ್ನು ಮಾಡುತ್ತದೆ. ನದಿಯಲ್ಲಿ ಆಟವಾಡುತ್ತಾ, ಸಂತೋಷದಲ್ಲಿ ಕಿರುಚುತ್ತಾ ಆ ಕ್ಷಣವನ್ನು ಎಂಜಾಯ್ ಮಾಡಿದೆ.
ಈ ವಿಡಿಯೋವನ್ನು ಸೇವ್ ಎಲಿಫೆಂಟ್ ಫೌಂಡೇಶನ್‌ನ ಸಂಸ್ಥಾಪಕ ಲೆಕ್ ಚೈಲರ್ಟ್ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಕೂಡ ಎಂಜಾಯ್ ಮೂಡ್ಗೆ ಕರೆದುಕೊಂಡು ಹೋಗಿದೆ. ಹೋಮ್ ನುವಾನ್ ಎಂಬ ಆನೆಯು ನದಿಯಲ್ಲಿ ಈಜುತ ಈ ಕ್ಷಣವನ್ನು ಆನಂದಿಸಿದೆ. ಯಾರ ಸಹಾಯವಿಲ್ಲದೆ ನೀರಿನಲ್ಲಿ ಆಟವಾಡುವುದನ್ನು ಕಾಣಬಹುದು. ಆ ಆನೆಯ ವರ್ತನೆಯಲ್ಲಿಯೇ ಕಾಣುತ್ತದೆ ಅದು ಎಷ್ಟು ಸಂತೋಷವಾಗಿದೆ ಎಂಬುದು. ಈ ವಿಡಿಯೋವನ್ನು ಹಾಕಿ ಲೆಕ್ ಚೈಲರ್ಟ್ ಹೀಗೆ ಬರೆದುಕೊಂಡಿದ್ದಾರೆ. ಹೋಮ್ ನುವಾನ್ ಈಜಲು ಹೋಗಿದ್ದಾಳೆ, ಆದರೆ ಅವಳ ಜತೆಗೆ ಇದ್ದ ಇತರ ಎರಡು ಆನೆಗಳಾದ ಆಂಗ್ ಖಾಮ್ ಮತ್ತು ರಟ್ಟಾನಾ ಖಾಮ್ ಅವಳೊಂದಿಗೆ ಸೇರಲು ನಿರಾಕರಿಸಿದ್ದಾರೆ. ಆ ಕಾರಣದಿಂದ ಆಕೆ ಅವರನ್ನು ಕರೆಯುತ್ತಾಳೆ. ಎಂಜಾಯ್ ಮಾಡಿಕೊಂಡ ವಿಶೇಷವಾದ ಸ್ವರದಲ್ಲಿ ಅವರನ್ನು ಆಕರ್ಷಣೆ ಮಾಡಿದ್ದಾಳೆ. ತನ್ನ ಜತೆಗೆ ನೀರಿನಲ್ಲಿ ಆಟವಾಡುವಂತೆ ಕರೆಯುತ್ತಾಳೆ. ಆದರೆ ಆಕೆಯ ಈ ಸ್ನೇಹಿತರು ನದಿ ದಡ ಬಳಿ ಹೋಗಲು ಭಯಪಟ್ಟಿದ್ದಾರೆ.
ಇದನ್ನೂ ಓದಿ: ಕಷ್ಟ ಕಾಲದಲ್ಲಿ 2 ಸಾವಿರ ರೂ. ನೀಡಿದ ಅಪರಿಚಿತ ಹುಡುಗಿಗೆ ಹಣ ನೀಡಲು ಮುಂದಾದ ವ್ಯಕ್ತಿಗೆ ಆಕೆ ಏನು ಹೇಳಿದ್ಳು ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇನ್ನು ಈ ವಿಡಿಯೋ 36 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಹಲವಾರು ಕಮೆಂಟ್ ಕೂಡ ಪಡೆದುಕೊಂಡಿದೆ. ಒಬ್ಬ ಬಳಕೆದಾರ, ಇದು ನನ್ನ ದಿನವನ್ನು ಬದಲಾಯಿಸಿತು. ಅವಳ ಕರೆಯ ಶಬ್ದವು ತುಂಬಾ ಸುಂದರವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಪ್ರಾಣಿಗಳು ನಿಜವಾಗಿಯೂ ಭಾವನೆಗಳನ್ನು ಅನುಭವಿಸುತ್ತವೆ ಮತ್ತು ವ್ಯಕ್ತಪಡಿಸುತ್ತವೆ ಅವಳ ಉತ್ಸಾಹವನ್ನು ನೋಡಿ ಎಂದು ಕಮೆಂಟ್ ಮಾಡಿದ್ದಾರೆ. ಅವಳು ತನ್ನ ಸ್ನೇಹಿತರು ತನ್ನೊಂದಿಗೆ ಈಜಬೇಕು ಎಂದುಕೊಂಡಿದ್ದಾಳೆ. ಇದು ತುಂಬಾ ಸ್ಪರ್ಶದಾಯಕವಾಗಿದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಆನೆಗಳು ಅಂತಹ ಭಾವನಾತ್ಮಕ ಜೀವಿಗಳು. ಇದು ತುಂಬಾ ಸುಂದರವಾಗಿದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




