Video: ತಳ್ಳಾಟ, ತುಂಟಾಟದಲ್ಲಿ ಬ್ಯುಸಿ ಈ ಮರಿಯಾನೆಗಳು, ಈ ಕ್ಯೂಟ್ ದೃಶ್ಯ ನೋಡಿ
ಆನೆ ಮರಿಗಳ ಆಟ ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಚಂದ. ಪುಟಾಣಿ ಮರಿಯಾನೆಗಳ ಮುದ್ದು ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಮರಿಯಾನೆಗಳು ಆಹಾರ ಸೇವಿಸುತ್ತಾ ಅರಣ್ಯ ಸಿಬ್ಬಂದಿಗಳ ಜೊತೆಗೆ ಯಾವುದೇ ಭಯವಿಲ್ಲದೇ ಬೆರೆಯುವ ವಿಡಿಯೋ ವೈರಲ್ ಆಗಿದೆ. ಈ ಆನೆಮರಿಗಳು ಮುದ್ದಾಗಿ ಆಡುತ್ತಿರುವುದನ್ನು ಕಂಡು ಬಳಕೆದಾರರು ಕಳೆದೇ ಹೋಗಿದ್ದಾರೆ.

ಮರಿಯಾನೆಗಳು (baby elephants) ಮಾಡುವ ತುಂಟಾಟವನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ. ಅವುಗಳ ಆಟ, ತುಂಟಾಟಗಳನ್ನು ನೋಡಿದ್ರೆ ಒಮ್ಮೆ ಮುದ್ದಾಡಬೇಕೆನಿಸುತ್ತದೆ. ಆನೆಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ (social media) ಆಗಾಗ ವೈರಲ್ ಆಗುತ್ತಿರುತ್ತದೆ. ಈ ಮರಿಯಾನೆಗಳು ತನ್ನ ಸಂಗಡಿಗರ ಜೊತೆಯಲ್ಲಿ ಮಾತ್ರವಲ್ಲ ಮನುಷ್ಯರ ಜೊತೆಯಲ್ಲಿ ಪ್ರೀತಿ ಸಲುಗೆಯಿಂದ ವರ್ತಿಸುವ ಮೂಲಕ ಸಣ್ಣ ಮಕ್ಕಳಂತೆಯೇ ಆಡುತ್ತವೆ. ಇದೀಗ ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ (Parveen Kaswan) ವಿಡಿಯೋ ಹಂಚಿಕೊಂಡಿದ್ದು ತಾಯಿಯನ್ನು ಕಳೆದುಕೊಂಡ ಬಳಿಕ ರಕ್ಷಿಸಲ್ಪಟ್ಟ ಈ ಎರಡು ಆನೆ ಮರಿಗಳ ಒಂದಕ್ಕೊಂದು ತಳ್ಳುವುದು, ಜೊತೆಯಾಗಿ ಆಹಾರ ತಿನ್ನುವುದು ಹೀಗೆ ತುಂಟಾಟದ ವಿಡಿಯೋದ ಇದಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
@ParveenKaswan ಹೆಸರಿನ ಎಕ್ಸ್ ಖಾತೆಯಲ್ಲಿ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಈ ವಿಡಿಯೋ ಹಂಚಿಕೊಂಡಿದ್ದು, ಗಜರಾಜ್ ಮತ್ತು ತೀಸ್ತಾ ಎಂಬ ಆನೆಗಳನ್ನು ಭೇಟಿಯಾದೆ. ಅವುಗಳು ತಮ್ಮ ತಾಯಂದಿರು ಸಾವನ್ನಪ್ಪಿದ ಬಳಿಕ ಅನಾಥವಾಗಿದ್ದವು. ತಾಯಿಯನ್ನು ಕಳೆದುಕೊಂಡ ಬಳಿಕ ಈ ಮರಿಯಾನೆಗಳನ್ನು ರಕ್ಷಿಸಲಾಯಿತು. ಇದೀಗ ಮಾವುತರ ಆರೈಕಕೆಯಲ್ಲಿ ಖುಷಿಯಾಗಿವೆ. ಈಗ ಹತ್ತಿರದ ಅರಣ್ಯವನ್ನು ಸದಾ ಅನ್ವೇಷಿಸುತ್ತಾ ಇವೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
While on field, met Gajraj and Teesta yesterday who wanted their toll taxes. Both were rescued after their mothers died and they were abandoned. Now under able care of our Mahauts, they keep exploring the nearby forest. pic.twitter.com/U7kAQ0kfUK
— Parveen Kaswan, IFS (@ParveenKaswan) August 6, 2025
ಈ ವಿಡಿಯೋದಲ್ಲಿ ಮರಿಯಾನೆಗಳು ಪರಸ್ಪರ ನಿಧಾನವಾಗಿ ತಳ್ಳಾಡುತ್ತಿರುವುದು, ಜೊತೆಯಾಗಿ ಆಹಾರ ಸೇವಿಸುವುದು ಹಾಗೂ ಅರಣ್ಯ ಸಿಬ್ಬಂದಿಗಳ ಜೊತೆಗೆ ಬೆರೆಯುತ್ತಿರುವುದನ್ನು ನೀವಿಲ್ಲಿ ನೋಡಬಹುದು.
ಆಗಸ್ಟ್ 6 ರಂದು ಶೇರ್ ಮಾಡಲಾದ ಈ ವಿಡಿಯೋ ಇದುವರೆಗೆ ನಲವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಮರಿಯಾನೆಗಳ ಈ ವಿಡಿಯೋಗೆ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, ತಾಯಿ ಆನೆ ಸತ್ತರೆ ಅದರ ಸಹೋದರಿಯರು ಅಥವಾ ಹಿಂಡಿನಲ್ಲಿರುವ ಇತರ ಹೆಣ್ಣು ಆನೆಗಳು ಮರಿಗಳನ್ನು ನೋಡಿಕೊಳ್ಳುತ್ತವೆ ಎಂದು ನಾನು ಎಲ್ಲೋ ಓದಿದ್ದೇನೆ. ಅದು ನಿಜವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Video: ಹಾಡು ಹಾಡುತ್ತಿದ್ದ ಮಹಿಳೆಯನ್ನು ಖುಷಿಯಲ್ಲಿ ತಬ್ಬಿ ನಿಂತ ಆನೆ, ಹೃದಯಸ್ಪರ್ಶಿ ದೃಶ್ಯ ವೈರಲ್
ಮತ್ತೊಬ್ಬರು, ನಿಜಕ್ಕೂ ಹೃದಯಸ್ಪರ್ಶಿ, ಗಜರಾಜ್ ಮತ್ತು ತೀಸ್ತಾ ಈ ಮರಿಯಾನೆಗಳು ಕಾಳಜಿಯುಳ್ಳ ಕೈಗಳ ಕೆಳಗೆ ಬೆಳೆಯುತ್ತಿರುವುದನ್ನು ನೋಡಿ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. ಇಂತಹ ವಿಡಿಯೋಗಳನ್ನು ನೋಡುವುದಕ್ಕೆ ಖುಷಿಯಾಗುತ್ತವೆ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








