Video: ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟ ಆನೆ, ಮುಂದೇನಾಯ್ತು ನೋಡಿ
ಕಾಡಿನಲ್ಲಿ ವಾಸಿಸುವ ಪ್ರಾಣಿಗಳ ಜೀವನ ಅಷ್ಟು ಸುಲಭವಲ್ಲ, ಯಾವಾಗ ಅಪಾಯ ಬಂದೊದಗುತ್ತದೆ ಎಂದು ಹೇಳಲಾಗದು. ಇದೀಗ ಪ್ರವಾಹದಲ್ಲಿಸಿಲುಕಿಕೊಂಡ ಆನೆಯೊಂದು ತನ್ನನ್ನು ತಾನು ಹೇಗೆ ರಕ್ಷಿಸಿಕೊಂಡಿತು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟ ಈ ಆನೆಯೂ ಬದುಕಿ ಉಳಿದದ್ದು ಹೇಗೆ ಎನ್ನುವುದನ್ನು ನೀವಿಲ್ಲಿ ನೋಡಿ. ಆನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.

ಛತ್ತೀಸ್‌ಗಢ, ಆಗಸ್ಟ್ 06: ಬದುಕು ಹಾಗೆ, ಯಾವಾಗ ಕಷ್ಟಗಳು ಬರುತ್ತದೆ ಎಂದು ಹೇಳಲಾಗದು. ಏನೇ ಬರಲಿ ಎದ್ದು ನಿಂತು ಮುನ್ನುಗ್ಗುವೆ ಎನ್ನುವ ಛಲವಿದ್ದರೆ ಸೋಲುವ ಮಾತೇ ಇಲ್ಲ. ಈ ಆನೆಯ ವಿಡಿಯೋ ನೋಡಿದ ಮೇಲೆ ನಿಮಗೆ ಈ ಮಾತು ನಿಜವೆನಿಸುತ್ತದೆ. ಪ್ರವಾಹದ ನಡುವೆ ಸಿಲುಕಿಕೊಂಡ ಆನೆಯೊಂದು (elephant) ತನ್ನನ್ನು ತಾನೇ ರಕ್ಷಿಸಿಕೊಂಡಿದೆ. ಹೌದು, ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡ ಆನೆಯೊಂದು ಅಪಾಯದಿಂದ ಪಾರಾಗಿದೆ. ಈ ಘಟನೆಯೂ ಛತ್ತೀಸ್‌ಗಢದ ಸುರ್ಗಜಾ ಜಿಲ್ಲೆಯಲ್ಲಿ (Surguja District in Chattisgarh) ಈ ನಡೆದಿದೆ. ಎಡೆ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದೆ. ಲುಂಡ್ರಾದ ಅಸ್ಕಲಾದ ಮಹೋರಾ ನದಿಯಲ್ಲಿ ಸಿಲುಕಿಕೊಂಡಿದ್ದ ಆನೆಯೂ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯವೂ ವೈರಲ್ ಆಗಿದೆ. ಕೊನೆಗೆ ಛಲಬಿಡದೇ ಹೇಗೆ ಈ ಆನೆಯೂ ಅಪಾಯದಿಂದ ಪಾರಾಯಿತು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ.
Suraj Vloger ಹೆಸರಿನ ಯೂಟ್ಯೂಬ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಆನೆಯೊಂದು ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡಿರುವುದನ್ನು ಕಾಣಬಹುದು. ನೋಡನೋಡುತ್ತಿದ್ದಂತೆ ಪ್ರವಾಹದಲ್ಲಿ ಆನೆಯೂ ಕೊಚ್ಚಿ ಹೋಗುತ್ತಿದೆ. ನೀರಿನ ತೀವ್ರತೆಯೂ ಆನೆಯನ್ನು ನದಿಯ ಮಧ್ಯ ಎಳೆಯಲ್ಪಟ್ಟಿದ್ದರೂ ಅಲ್ಲೇ ನಿಂತಿದ್ದ ಸ್ಥಳೀಯರು ಜೋರಾಗಿ ಸದ್ದು ಮಾಡುವ ಮೂಲಕ ಆನೆಯನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಸ್ಥಳೀಯರು ಜೋರಾಗಿ ಕಿರುಚುವುದನ್ನು ಕಂಡ ಆನೆಯೂ ಭಯಗೊಂಡಿದೆ. ಕೊನೆಗೆ ಉಕ್ಕಿ ಹರಿಯುತ್ತಿರುವ ನೀರಿನ ಮಧ್ಯೆ ಸಿಲುಕಿದ್ದ ಆನೆಯೂ ಓಡಿ ಹೋಗುವ ಮೂಲಕ ಅಪಾಯದಿಂದ ಪಾರಾಗಿದೆ. ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆನೆಯನ್ನು ಕಣ್ಣಾರೆ ಕಂಡ ಸ್ಥಳೀಯ ನಿವಾಸಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ:Video: ಪಾರ್ಕ್‌ನಲ್ಲಿ ಕುಳಿತಿದ್ದ ದಂಪತಿಯನ್ನು ತಬ್ಬಿಕೊಂಡ ಮರಿಯಾನೆ
ಈ ವಿಡಿಯೋ ನೋಡಿದ ಬಳಕೆದಾರರು, ಜೀವ ಉಳಿಸಕೊಳ್ಳಬೇಕು ಎಂದು ಒದ್ದಾಡುತ್ತಿರುವುದನ್ನು ಕಂಡು ನಿಜಕ್ಕೂ ಬೇಸರವಾಯಿತು ಎಂದಿದ್ದಾರೆ. ಇನ್ನೊಬ್ಬರು, ಸ್ಥಳೀಯರು ಆನೆಯನ್ನು ಹೆದರಿಸುವ ಮೂಲಕ ಅದರ ಜೀವ ಉಳಿಸಲು ನೆರವಾಗಿದ್ದೀರಿ ಧನ್ಯವಾದಗಳು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 am, Wed, 6 August 25








