Viral: ದ್ವೇಷದಿಂದ ಪ್ರೀತಿಯವರೆಗೆ: ಫ್ರೆಂಡ್‌ಶಿಪ್ ಡೇಯಂದು ವಿಚಿತ್ರ ಮ್ಯಾರೇಜ್ ಸ್ಟೋರಿ ರಿವೀಲ್ ಮಾಡಿದ ಯುವತಿ
ಕೆಲವು ವ್ಯಕ್ತಿಗಳನ್ನು ನಾವು ಬೇಡವೆಂದು ದೂರವಿಡುತ್ತೇವೆ. ಕೆಲವೊಮ್ಮೆ ಅವರೇ ನಮ್ಮ ಬದುಕಿನ ಭಾಗವಾಗಿಯೇ ಬಿಡುತ್ತಾರೆ. ಇದಕ್ಕೆ ಹೇಳೋದು ಋಣಾನುಬಂಧ. ಇದಕ್ಕೆ ಸಾಕ್ಷಿ ಈ ಜೋಡಿ. ಹೌದು ಸ್ನೇಹಿತರ ದಿನದಂದು ತನ್ನ ಪ್ರೀತಿಯ ಪತಿಗೆ ಶುಭಾಶಯ ತಿಳಿಸಿದ ಯುವತಿಯೂ, ತನ್ನನ್ನು ದ್ವೇಷಿಸುತ್ತಿದ್ದ ಬಾಲ್ಯದ ಸ್ನೇಹಿತನೇ ಪತಿಯಾಗಿ ಸಿಕ್ಕಿದ್ದು ಹೇಗೆ ಎಂದು ರಿವೀಲ್ ಮಾಡಿದ್ದಾಳೆ. ಈಕೆಯ ಲವ್ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಯಾರ ಹಣೆಬರಹದಲ್ಲಿ ಯಾರ ಹೆಸರು ಇರುತ್ತದೆಯೇ, ಸರಿಯಾದ ಸಮಯಕ್ಕೆ ಅವರು ಜೊತೆಯಾಗುತ್ತಾರೆ. ಇದೇ ಕಾರಣಕ್ಕೆ ಮದ್ವೆ (marriage) ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದು ಹೇಳೋದು. ಆದರೆ ಬೇಡ ಎಂದು ತಿರಸ್ಕರಿಸಿದ ವ್ಯಕ್ತಿಯನ್ನೇ ಮದುವೆಯಾದವರು ಅದೆಷ್ಟೋ ಜನರಿದ್ದಾರೆ. ಈ ಯುವತಿಯದ್ದು ಇಂತಹದ್ದೇ ಪರಿಸ್ಥಿತಿ. ಬಾಲ್ಯದಲ್ಲಿ ತನ್ನನ್ನು ಅತಿಯಾಗಿ ದ್ವೇಷಿಸುತ್ತಿದ್ದ ಹುಡುಗನೊಬ್ಬನಿದ್ದನಂತೆ. ಆದರೆ ಈಗ ಆ ವ್ಯಕ್ತಿಯೇ ಈಕೆಯ ಬದುಕನ್ನು ಸುಂದರವಾಗಿಸಿದ್ದಂತೆ. ಆ ವ್ಯಕ್ತಿ ಬೇರೆ ಯಾರು ಅಲ್ಲ ಈಕೆಯ ಪತಿ. ದ್ವೇಷಿಸುತ್ತಿದ್ದ ವ್ಯಕ್ತಿಯೇ ಹೇಗೆ ತನ್ನನ್ನು ಮದುವೆ ಮಾಡಿಕೊಂಡ. ಶಾಲಾ ದಿನಗಳು ಹಾಗೂ ಮದುವೆ ಸೇರಿದಂತೆ ತಮ್ಮ ವಿಚಿತ್ರ ಲವ್ ಸ್ಟೋರಿಯನ್ನು(love story) ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಈ ಯುವತಿಯ ಲವ್ ಸ್ಟೋರಿಗೆ ನೆಟ್ಟಿಗರು ಫಿದಾ ಆಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಬಾಲ್ಯದಲ್ಲಿ ದ್ವೇಷಿಸುತ್ತಿದ್ದ ವ್ಯಕ್ತಿಯೇ ಪತಿಯಾಗಿ ಜೊತೆಯಾದ
ಆಂಚಲ್ ರಾವತ್ ಅವರು ಎಕ್ಸ್ ಖಾತೆಯಲ್ಲಿ ತಮ್ಮ ಶಾಲಾ ದಿನಗಳಲ್ಲಿ ದ್ವೇಷ ಕಟ್ಟಿಕೊಂಡಿದ್ದ ವ್ಯಕ್ತಿಯೂ ನನ್ನ ಬಾಳಸಂಗತಿಯಾಗಿ ಬಂದದ್ದು ಹೇಗೆ ಎಂದು ಹೇಳಿಕೊಂಡಿದ್ದಾಳೆ. ಸ್ನೇಹಿತರ ದಿನದಂದು ಈ ಬಗ್ಗೆ ಬರೆದುಕೊಂಡು ತಮ್ಮ ಪತಿಗೆ ಶುಭಾಶಯಗಳನ್ನು ತಿಳಿಸಿದ್ದಾಳೆ. ತಮ್ಮ ಶಾಲಾದಿನದ ಫೋಟೋ ಹಾಗೂ ಮದುವೆಯ ಫೋಟೋ ಹಂಚಿಕೊಂಡು ಹೀಗೆ ಬರೆದುಕೊಂಡಿದ್ದಾಳೆ. ನಾನು ಹಿಂದಿನಿಂದಲೂ ಹುಡುಗರೊಂದಿಗೆ ಸ್ನೇಹ ಬೆಳೆಸಲು ಇಷ್ಟಪಡದ ಹುಡುಗಿಯಾಗಿದ್ದವಳು. ಆದರೆ ಶಾಲಾ ದಿನಗಳಲ್ಲಿ ಒಬ್ಬ ದಡ್ಡನಂತೆ ಇದ್ದ, ನಾಚಿಕೆ ಸ್ವಭಾವದ ವ್ಯಕ್ತಿ ನನ್ನೊಂದಿಗೆ ಊಟವನ್ನು ಹಂಚಿಕೊಳ್ಳುತ್ತಿದ್ದ. ಒಂದು ದಿನ ನಾನು ಆತನ ಪೋಕ್ಮನ್ ಟಿಫಿನ್ ಬಾಕ್ಸ್ ಮುರಿದೇ ಬಿಟ್ಟೆ. ಇದೇ ಕಾರಣಕ್ಕೆ ಅವನು ತುಂಬಾನೇ ಅತ್ತಿದ್ದ, ಅವನ ಅಳುವಿಗೆ ನಾನೇ ಕಾರಣವಾಗಿದ್ದೆ. ಈ ಘಟನೆಯ ಬಳಿಕ ಅವನು ನನ್ನನ್ನೂ ಮಾತನಾಡಿಸಲೇ ಇಲ್ಲ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಘಟನೆಯಾದ ಹದಿನೈದು ವರ್ಷಗಳ ಬಳಿಕ ಜೀವನ್ ಸಾಥಿಯಲ್ಲಿ ನಾನು ಅದೇ ದಡ್ಡ ವ್ಯಕ್ತಿಯನ್ನು ಕಂಡೆ. ಆತ ನನಗೆ ಮೊದಲ ಬಾರಿಗೆ, ‘ನೀವು ಯಾವಾಗ ನನಗೆ ಹೊಸ ಟಿಫಿನ್ ಬಾಕ್ಸ್ ಖರೀದಿಸಿ ಕೊಡ್ತೀರಾ’ ಎಂದು ಮೆಸೇಜ್ ಮಾಡಿದ್ದ. ಆದರೆ ನಾವು ಶಾಲಾ ದಿನಗಳಲ್ಲಿ ಸ್ನೇಹಿತರಾಗಿರಲಿಲ್ಲ, ಆದರೆ ನಮ್ಮ ವಿವಾಹವೂ ಆಗಿಯೇ ಹೋಯ್ತು ಸ್ನೇಹಿತರ ದಿನದ ಶುಭಾಶಯಗಳು ಪತಿದೇವ ಎಂದು ಬರೆದುಕೊಂಡಿದ್ದಾಳೆ.
ಇದನ್ನೂ ಓದಿ:Video: ಭಾರತೀಯನನ್ನು ಮದುವೆಯಾಗಿದ್ದು ಇದೇ ಕಾರಣಕ್ಕೆ ಎಂದ ರಷ್ಯಾದ ಮಹಿಳೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರೊಬ್ಬರು ನೀವಿಬ್ಬರು ಸತಿಪತಿಗಳು ಬರೆದು ಆಗಿತ್ತು..ಆದರೆ ನಿಮಗೆ ತಿಳಿದಿರಲಿಲ್ಲ, ಎಲ್ಲವೂ ದೈವ ಇಚ್ಛೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಟಿಫನ್ ಬಾಕ್ಸ್ ದ್ವೇಷ ಮದುವೆಯಾಗಿ ಅಂತ್ಯ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು ನೀವು ಮತ್ತೆ ಎಂದಿಗೂ ಟಿಫನ್ ಬಾಕ್ಸ್ ಮುರಿಯುವುದಿಲ್ಲ ಎಂದು ಭಾವಿಸುತ್ತೇನೆ. ನಿಮ್ಮ ಬದುಕಿಗೆ ಈ ನೆನಪುಗಳೇ ಖುಷಿ ನೀಡಲಿ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Tue, 5 August 25








