AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅಮ್ಮ ಕಣ್ಣು ದಿಟ್ಟಿಸಿ ನೋಡಿದ್ದೇ ತಡ, ಪೂಲ್‌ನಿಂದ ಓಡೋಡಿ ಬಂದ ಮರಿ ಹಿಪ್ಪೋ

ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಆದರೆ ಇದೀಗ ಈ ಮುದ್ದಾದ ದೃಶ್ಯವು ನೆಟ್ಟಿಗರ ಹೃದಯ ಗೆದ್ದು ಕೊಂಡಿದೆ. ಅಮ್ಮನು ದಿಟ್ಟಿಸಿ ನೋಡಿದ ಕೂಡಲೇ ಈ ಹಿಪ್ಪೋ ಮರಿ ಮಾಡಿದ್ದೇನು ಎಂದು ನೋಡಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರಾ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Video: ಅಮ್ಮ ಕಣ್ಣು ದಿಟ್ಟಿಸಿ ನೋಡಿದ್ದೇ ತಡ, ಪೂಲ್‌ನಿಂದ ಓಡೋಡಿ ಬಂದ ಮರಿ ಹಿಪ್ಪೋ
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on: Aug 05, 2025 | 2:17 PM

Share

ತಾಯಿಯ (mother) ಪ್ರೀತಿಯೇ ಹಾಗೆ, ಎಷ್ಟು ಮುದ್ದಿಸುತ್ತಾಳೋ ತಪ್ಪು ಮಾಡಿದಾಗ, ಹೇಳಿದ ಮಾತನ್ನು ಕೇಳದೆ ಇದ್ದಾಗ ದಂಡಿಸುತ್ತಾಳೆ. ಹೀಗಾಗಿ ಅಮ್ಮನ ಅಂದ್ರೆ ಹೆಚ್ಚು ಇಷ್ಟವೋ ಅಷ್ಟೇ ಭಯ ಮಕ್ಕಳಿಗೆ ಇರುತ್ತದೆ. ಈ ವಿಚಾರದಲ್ಲಿ ಪ್ರಾಣಿಗಳು ಹೊರತಾಗಿಲ್ಲ. ಈ ದೃಶ್ಯವು ತಾಯಿ ಮೇಲೆ ಈ ಮರಿ ಹಿಪ್ಪೋಗೆ ಎಷ್ಟು ಭಯವಿದೆ ಎನ್ನುವುದಕ್ಕೆ ಸಾಕ್ಷಿ. ಹೌದು ಕೊಳದಿಂದ ಹೊರಬರಲು ಇಷ್ಟ ಪಡದ ಈ ಮರಿ ಹಿಪ್ಪೋ (baby hippo) ತಾಯಿಯ ಒಂದೇ ಒಂದು ನೋಟಕ್ಕೆ ಓಡೋಡಿ ಬಂದಿದೆ. ಈ ವಿಡಿಯೋ ಕನ್ಸಾಸ್ ನ ಟ್ಯಾಂಗನಿಕಾ ವನ್ಯಜೀವಿ ಉದ್ಯಾನವನದ್ದು ಎನ್ನಲಾಗಿದೆ. ಎಕ್ಸ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಈ ಮರಿಗೆ ತಾಯಿಯ ಮೇಲೆ ಭಯವಿರುವುದು ಸ್ಪಷ್ಟವಾಗಿ ತೋರುತ್ತದೆ. ಇದನ್ನು ನೋಡಿ ಬಳಕೆದಾರರು ಬಿದ್ದು ಬಿದ್ದು ನಕ್ಕಿದ್ದಾರೆ.

@AMAZINGNATURE ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋಗೆ ಅಮ್ಮನ ನೋಟ, ಎಲ್ಲಾ ಜೀವಿಗಳಲ್ಲಿಯೂ ಸಾರ್ವತ್ರಿಕವಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಟೇಕ್ ಕೇರ್ ಹಿಪ್ಪೋ ಮರಿಯನ್ನು ನೀರಿನ ಕೊಳದಿಂದ ತಾಯಿಯತ್ತ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಮರಿ ಹಿಪ್ಪೋ ಮಾತ್ರ ಇದನ್ನು ನಿರಾಕರಿಸಿ ಕೊಳದತ್ತ ತಪ್ಪಿಸಿಕೊಂಡು ಓಡುತ್ತಿದೆ. ಆದರೆ ತಾಯಿ ಹಿಪ್ಪೋ ದಿಟ್ಟಿಸಿ ನೋಡಿದ್ದೆ ತಡ, ಕೊಳದಲ್ಲಿದ್ದ ಈ ಮರಿ ಹಿಪ್ಪೋ ತನ್ನ ತಾಯಿಯತ್ತ ಓಡೋಡಿ ಹೋಗುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ
Image
ಆಟೋ ಓಡಿಸಿಕೊಂಡು ಈ ಚಾಲಕ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ
Image
ಭಾರತೀಯನನ್ನು ಮದುವೆಯಾಗಿದ್ದು ಇದೇ ಕಾರಣಕ್ಕೆ ಎಂದ ರಷ್ಯಾದ ಮಹಿಳೆ
Image
ಹಲ್ಲಿಯನ್ನು ಸಲೀಸಾಗಿ ಬರಿಗೈಯಲ್ಲಿ ಹಿಡಿದ ಪುಟಾಣಿ
Image
ಚಾಲಕನಿಲ್ಲದೆ ಸ್ಟಾರ್ಟ್ ಆಗಿ ಮುಂದಕ್ಕೆ ಬಂದು ನಿಂತ ಟ್ರ್ಯಾಕ್ಟರ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ದೈಹಿಕ ನ್ಯೂನತೆ ಮರೆತು ಖುಷಿಯಿಂದ ಚೆಂಡಾಟ ಆಡಿದ ಆನೆಗಳು

ಆಗಸ್ಟ್ 2 ರಂದು ಶೇರ್ ಮಾಡಲಾದ ಈ ವಿಡಿಯೋ 5.8 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರು ಈ ಮುದ್ದಾದ ವಿಡಿಯೋ ಕಂಡು ಫಿದಾ ಆಗಿದ್ದಾರೆ. ಒಬ್ಬ ಬಳಕೆದಾರ ತಾಯಿಯ ಒಂದೇ ಒಂದು ನೋಟಕ್ಕೆ ಅಷ್ಟು ಶಕ್ತಿಯಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಾನು ನಿನ್ನನ್ನು ಹೊಸ ಲೋಕಕ್ಕೆ ತಂದಿದ್ದೇನೆ. ನಾನು ನಿನ್ನನ್ನು ಹೊರಗೆ ಕರೆದ್ಯೋಯ್ಯಬಲ್ಲೆ ಎಂದು ಹೇಳುವ ನೋಟವದು. ಇದು ಪ್ರಾಣಿ ಸಾಮ್ರಾಜ್ಯದಲ್ಲೂ ಇರುತ್ತವೆ ಎಂದಿದ್ದಾರೆ. ತಾಯಿಯ ಪ್ರೀತಿ ಅತ್ಯಂತ ಬಲಿಷ್ಠವಾದದ್ದು, ಆ ಪ್ರೀತಿ ಹಾಗೂ ಕಾಳಜಿಯನ್ನು ಯಾರಿಂದಲು ನೀಡಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಗುವ ಇಮೋಜಿ ಕಳುಹಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ