Video: ಬೆಂಗಳೂರಿನ ಸ್ನೇಹಿತೆ ಜತೆಗೆ ಸೇರಿ ಕನ್ನಡ ಕವಿತೆ ಹಾಡಿದ ರಷ್ಯಾದ ಹುಡುಗಿ
ಕರ್ನಾಟಕದವರಿಗಿಂತ ವಿದೇಶಿಗರಿಗೆ ಕನ್ನಡದ ಮೇಲೆ ಹೆಚ್ಚು ಅಭಿಮಾನ ಇದೆ ಎಂಬುದು ಕೆಲವೊಂದು ವಿಡಿಯೋಗಳ ಮೂಲಕ ಸಾಬೀತು ಆಗುತ್ತಿದೆ. ಕನ್ನಡ ಅಭಿಮಾನಕ್ಕೆ ಹಾಗೂ ಭಾಷೆಯನ್ನು ಕಲಿಯಬೇಕು ಎಂಬ ಹಂಬಲ ವಿದೇಶಿಗರಿಗೆ ಇದೆ ಎಂಬುದನ್ನು ಈ ವಿಡಿಯೋ ಹೇಳುತ್ತದೆ. ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಪುಟ್ಟ ಹುಡುಗಿ ಬೆಂಗಳೂರಿನ ತನ್ನ ಸ್ನೇಹಿತೆ ಜತೆಗೆ ಕನ್ನಡದ ಕವಿತೆಯನ್ನು ಹಾಡಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ

ಭಾರತಕ್ಕೆ ಬಂದ ಅದೆಷ್ಟೋ ವಿದೇಶಿಗರು (foreigner) ಭಾರತದ ಸಂಸ್ಕೃತಿ, ಆಚಾರ ವಿಚಾರಗಳನ್ನು ಅನುಸರಿಸಿಕೊಂಡು ಹೋಗುವುದರ ಜತೆಗೆ ಭಾಷೆಗಳನ್ನು ಕಲಿಯುತ್ತಾರೆ. ಕರ್ನಾಟಕದಲ್ಲೂ ಇಂತಹ ಘಟನೆಗಳಿಗೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದೆ. ಕನ್ನಡ ಹಾಡುಗಳನ್ನು ಹಾಡುವುದು, ಕನ್ನಡ ಮಾತನಾಡುವುದು, ಅದನ್ನು ಕಲಿಯುವ ಆಸಕ್ತಿ ತೋರಿಸುವುದು ಹೀಗೆ ಅನೇಕ ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಇದೀಗ ವಿಡಿಯೋವೊಂದು ಭಾರೀ ವೈರಲ್ ಆಗಿದ್ದು, ಕನ್ನಡಿಗರ ಮನಸ್ಸು ಈ ವಿಡಿಯೋ ಗೆದ್ದಿದೆ. ಬೆಂಗಳೂರಿನಲ್ಲಿ ರಷ್ಯಾದ ಹುಡುಗಿ (Russian girl) ಹಾಗೂ ಆಕೆಯ ಭಾರತೀಯ ಸ್ನೇಹಿತ ಜತೆಗೆ ಸೈಕಲ್ ಓಡಿಸುತ್ತ, ಕನ್ನಡ ಕವಿತೆಯನ್ನು ಹಾಡಿದ್ದಾಳೆ. ಇದೀಗ ಕನ್ನಡಿಗರ ಹೃದಯಕ್ಕೆ ಮುಟ್ಟಿದೆ. ಈ ರಷ್ಯಾದ ಹುಡುಗಿಯ ತಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಕನ್ನಡ ಪದ್ಯಕ್ಕೆ ಮೀಸಲಾಗಿರದೇ, ಅವರ ಅಂತರ್-ಸಾಂಸ್ಕೃತಿಕ ಸ್ನೇಹ ಮತ್ತು ಭಾಷಾ ಬಾಂಧವ್ಯದ ಬಗ್ಗೆ ಹೇಳಿದೆ.
ಈ ವಿಡಿಯೋದಲ್ಲಿ ರಷ್ಯಾದ ಹುಡುಗಿಯ ತಾಯಿ ಹೇಳಿರುವಂತೆ, ಇವರಿಬ್ಬರೂ ಮೂರು ವರ್ಷಗಳಿಂದ ಸಹಪಾಠಿಗಳು ಮತ್ತು ಆಪ್ತ ಸ್ನೇಹಿತರಾಗಿದ್ದಾರೆ. ಸೈಕಲ್ನಲ್ಲಿ ಆಟವಾಡುತ್ತ, ಕನ್ನಡದ ಖ್ಯಾತ ಪದ್ಯ “ಬಣ್ಣದ ಹಕ್ಕಿ” ಎಂಬ ಹಾಡನ್ನು ಇಬ್ಬರು ಒಟ್ಟಿಗೆ ಹಾಡಿದ್ದಾರೆ. ಮಕ್ಕಳ ಕನ್ನಡ ಹಾಡನ್ನು ಕೇಳಿ ನಮಗೆ ಖುಷಿಯಾಗಿದೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋದ ಜತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 2022ರಲ್ಲಿ ಹಂಚಿಕೊಂಡ ಫೋಟೋ ಕೂಡ ವೈರಲ್ ಆಗಿದೆ. ರಷ್ಯಾದ ಕುಟುಂಬ ಭಾರತಕ್ಕೆ ಸ್ಥಳಾಂತರಗೊಂಡಾಗಿನಿಂದ ಇವರಿಬ್ಬರ ಸ್ನೇಹ ಬೆಳೆದುಕೊಂಡಿದೆ ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: Video: ಭಾರತೀಯನನ್ನು ಮದುವೆಯಾಗಿದ್ದು ಇದೇ ಕಾರಣಕ್ಕೆ ಎಂದ ರಷ್ಯಾದ ಮಹಿಳೆ
ಭಾರತದಲ್ಲಿ 3 ವರ್ಷ, ಗೆಳತಿಯರು – ಸಹಪಾಠಿಗಳು ಎಂದು ರಷ್ಯಾದ ಹುಡುಗಿಯ ತಾಯಿ ಬರೆದುಕೊಂಡಿದ್ದಾರೆ. ಈ ವೀಡಿಯೊ ರೆಡ್ಡಿಟ್‌ನಲ್ಲಿ ಮರುಹಂಚಿಕೊಳ್ಳಲಾಗಿದೆ. ರೆಡ್ಡಿಟ್ ಬಳಕೆದಾರರೊಬ್ಬರು ಬೆಂಗಳೂರಿನಿಂದ ಬಂದ ಒಬ್ಬ ರಷ್ಯಾದ ಹುಡುಗಿ ತನ್ನ ಸ್ಥಳೀಯ ಸ್ನೇಹಿತನೊಂದಿಗೆ ಕನ್ನಡ ಕವಿತೆಯನ್ನು ಹಾಡುತ್ತಿದ್ದಾಳೆ. ಇದನ್ನು ನೋಡಲು ಎಷ್ಟು ಚೆನ್ನಾಗಿದೆ! ವಿದೇಶಿಯರು ಸಹ ಕನ್ನಡ ಕಲಿತರು, ನಮ್ಮ ಭಾಷೆಯ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿ ಏನು ಹೇಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮಕ್ಕಳು ಉಚ್ಚಾರಣೆಯ ಬಗ್ಗೆ ಚಿಂತಿಸದ ಕಾರಣ ಮಾತನಾಡಲು ಭಾಷೆಯನ್ನು ಕಲಿಯುವುದು ಅವರಿಗೆ ಸುಲಭವಾಗಿದೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಸ್ಥಳೀಯ ಭಾಷೆಗಳ ಕಲಿಕೆಯನ್ನು ಪ್ರೋತ್ಸಾಹಿಸದ ಶಾಲೆಗಳು ಮತ್ತು ಸರ್ಕಾರಿ ನೀತಿಗಳನ್ನು ಹಲವು ಬಳಕೆದಾರರು ಇಲ್ಲಿ ದೂರಿದ್ದಾರೆ. ಸರ್ಕಾರವು ಶಾಲೆಗಳಲ್ಲಿ ಸ್ಥಳೀಯ ಭಾಷೆಯನ್ನು ಕಡ್ಡಾಯಗೊಳಿಸಬೇಕು, ಇದರಿಂದ ಎರಡನೇ ತಲೆಮಾರಿನ ವಲಸಿಗರು ಅದನ್ನು ಕಲಿಯುತ್ತಾರೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Thu, 7 August 25








