Video: ನಟಿ ಸಾಕ್ಷಿ ಮಲಿಕ್ಗೆ ಕಪಾಳಮೋಕ್ಷ ಮಾಡಿದ ನಟ ರಾಘವ್, ಅಸಲಿ ಕಾರಣ ಇಲ್ಲಿದೆ ನೋಡಿ
ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲ ವಿಡಿಯೋಗಳನ್ನು ನಂಬಬಾರದು ಎಂಬುದನ್ನು ಈ ವಿಡಿಯೋ ತಿಳಿಸುತ್ತದೆ ನೋಡಿ. ನಟ ರಾಘವ್ ಜುಯಾಲ್ ಅವರು ನಟಿ ಸಾಕ್ಷಿ ಮಲಿಕ್ ಮೇಲೆ ಕೈ ಮಾಡಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ವಿಡಿಯೋದ ಅಸಲಿ ವಿಚಾರ ತಿಳಿದು ಬಂದಿದೆ. ಈ ಜಗಳ ಯಾಕೆ ನಡೆಯಿತು. ಕಾಣರವೇನು ಎಂಬುದನ್ನು ಇಲ್ಲಿ ನೋಡಿ.

ಸಾಮಾಜಿಕ ಜಾಲತಾಣದಲ್ಲಿ ಆಗುವ ಎಲ್ಲ ವಿಚಾರಗಳನ್ನು ನಂಬಬಾರದು ಎಂದು ಹೇಳುವುದು ಇದಕ್ಕೆ. ನಟಿಯೊಬ್ಬರಿಗೆ ನಟ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿ ಅನೇಕರು ಆತಂಕಗೊಂಡಿದ್ದರು. ಅಷ್ಟಕ್ಕೂ ಈ ಇಬ್ಬರ ನಡುವೆ ನಡೆದ ಜಗಳ ಏನು ಎಂಬುದನ್ನು ಇಲ್ಲಿ ನೋಡಿ. ನೃತ್ಯ ತಾರೆ ಮತ್ತು ನಟ ರಾಘವ್ ಜುಯಾಲ್ ಅವರು ನಟಿ ಸಾಕ್ಷಿ ಮಲಿಕ್ (Sakshi Malik) ಅವರಿಗೆ ಕಪಾಳಮೋಕ್ಷ (slapped) ಮಾಡುತ್ತಿರುವ ವಿಡಿಯೋವೊಂದು ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟ ರಾಘವ್ ಜುಯಾಲ್ ಅವರ ಕೂದಲು ಹಿಡಿದು ನಟಿ ಸಾಕ್ಷಿ ಮಲಿಕ್ ಎಳೆಯುತ್ತಾರೆ. ಇದರಿಂದ ಕೋಪಗೊಂಡು ರಾಘವ್ ನಟಿ ಸಾಕ್ಷಿ ಮಲಿಕ್ಗೆ ಕಪಾಳಮೋಕ್ಷ ಮಾಡುತ್ತಾರೆ. ನಿಜವಾಗಿಯೂ ಇಬ್ಬರ ನಡುವೆ ದೊಡ್ಡ ಜಗಳ ನಡೆದಿದೆ ಎಂದು ಜನ ಭಾವಿಸಿದ್ದಾರೆ. ಆದರೆ ಈ ವಿಡಿಯೋದಲ್ಲಿ ನಿಜವಾದ ತಿರುವು ಇನ್ನೂ ಇದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ರಾಘವ್ ಮತ್ತು ಸಾಕ್ಷಿ ಜಗಳವಾಡುತ್ತಿರುವುದನ್ನು ಕಾಣಬಹುದು. ಸಾಕ್ಷಿ ಇದ್ದಕ್ಕಿದ್ದಂತೆ ರಾಘವ್ ಅವರ ಕೂದಲನ್ನು ಎಳೆದಿದ್ದಾರೆ. ಅದು ಕೂಡ ಕೋಪದಿಂದ, ರಾಘವ್ ಅವರು ಕೂಡ ತಕ್ಷಣ ನಟಿಯ ಕಪಾಳಕ್ಕೆ ಹೊಡೆದಿದ್ದಾರೆ. ಈ ವೇಳೆ ಅಲ್ಲಿದ್ದ ಸ್ನೇಹಿತರು ಅವರನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಈ ಜಗಳ ಇಬ್ಬರ ನಡುವೆ ತುಂಬಾ ಜೋರಾಗಿಯೇ ನಡೆದಿದೆ ಎಂದು ಅನೇಕರು ಭಾವಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಅಸಲಿ ಸತ್ಯ ಇಲ್ಲಿದೆ ನೋಡಿ:
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರಾಘವ್ ಮತ್ತು ಸಾಕ್ಷಿ ಸ್ವತಃ ಮುಂದೆ ಬಂದು ‘ಇದೆಲ್ಲವೂ ಒಂದು ದೃಶ್ಯಕ್ಕಾಗಿ ಮಾಡಿದ ಅಭ್ಯಾಸ, ಇದು ನಿಜವಾದ ಜಗಳವಲ್ಲ, ಇದೊಂದು ಸಿನಿಮಾಕ್ಕೆ ಪೂರ್ವ ಅಭ್ಯಾಸದ ವೇಳೆ ನಡೆದ ಘಟನೆ ಅಷ್ಟೇ, ಈ ಬಗ್ಗೆ ರಾಘವ್ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿಯೂ ಬರೆದಿದ್ದಾರೆ. ಇದು ನಟನೆಯ ಪೂರ್ವಾಭ್ಯಾಸ ಸಹೋದರ, ಇದು ನಿಜವೆಂದು ಭಾವಿಸಬೇಡಿ ಎಂದು ಹೇಳಿದ್ದಾರೆ. ರಾಘವ್ ಜುಯಾಲ್ ಅವರ ಹೆಸರು ಕೇಳಿದ ತಕ್ಷಣ ಮೊದಲು ನೆನಪಿಗೆ ಬರುವುದು ಅವರ ಹಾಸ್ಯ ಹಾಗೂ ನೃತ್ಯ , ಅವರು ಎಬಿಸಿಡಿ, ಸ್ಟ್ರೀಟ್ ಡ್ಯಾನ್ಸರ್ 3D, ಮತ್ತು ಸಲ್ಮಾನ್ ಅವರ ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ನಂತಹ ಚಿತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ‘ಸೋನು ಕೆ ಟಿಟು ಕಿ ಸ್ವೀಟಿ’ ಚಿತ್ರದಲ್ಲಿನ ಸೂಪರ್‌ಹಿಟ್ ಐಟಂ ಹಾಡಿನ ಮೂಲಕ ಸಾಕ್ಷಿ ಮಲಿಕ್ ಕೂಡ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹಾಡು ಹಾಡುತ್ತಿದ್ದ ಮಹಿಳೆಯನ್ನು ಖುಷಿಯಲ್ಲಿ ತಬ್ಬಿ ನಿಂತ ಆನೆ, ಹೃದಯಸ್ಪರ್ಶಿ ದೃಶ್ಯ ವೈರಲ್
ಇನ್ನು ಈ ವಿಡಿಯೋ ನೋಡಿ ಒಂದು ಪಾಠ ಮಾತ್ರ ಸಾಮಾಜಿಕ ಜಾಲತಾಣದ ಬಳಕೆದಾರರೂ ಕಲಿಯಬೇಕಿದೆ. ನೀವು ನೋಡುವ ಎಲ್ಲವನ್ನೂ ಕುರುಡಾಗಿ ನಂಬಬೇಡಿ. ಅದು ಕೇವಲ ನಟನಾ ದೃಶ್ಯವಾಗಿರಬಹುದು. ರಾಘವ್-ಸಾಕ್ಷಿ ಇಬ್ಬರೂ ನಟನೆಯಲ್ಲಿ ತುಂಬಾ ಫಿಟ್ ಆಗಿದ್ದಾರೆ. ಅದಕ್ಕಾಗಿಯೇ ಒಂದು ರಿಹರ್ಸಲ್ ವೀಡಿಯೊ ಇಡೀ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








