Viral: ಕಾರ್ಮಿಕನ ಬ್ಯಾಂಕ್ ಖಾತೆಗೆ ಬಂತು ಕೋಟಿ ಕೋಟಿ ಹಣ, ಸುದ್ದಿ ಆಗುತ್ತಿದ್ದಂತೆ ಎಲ್ಲಾ ಮಾಯಾ
ಬಿಹಾರ ಮೂಲದ ವ್ಯಕ್ತಿಯ ಬ್ಯಾಂಕ್ ಖಾತೆಗೆ ಎಣಿಸಲು ಸಾಧ್ಯವಾಗದಷ್ಟು ಹಣ ಜಮೆ ಆಗಿದೆ, ಇದರಿಂದ ಆ ವ್ಯಕ್ತಿ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಈ ಹಣ ಎಲ್ಲಿಂದ ಬಂತು ಎಂಬುದು ಅವರಿಗೆ ತಿಳಿದಿಲ್ಲ. ಇನ್ನು ಈ ವಿಚಾರದ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಆಗುತ್ತಿದ್ದಂತೆ, ತನ್ನ ಖಾತೆಯಲ್ಲಿದ್ದ ಅಷ್ಟು ಹಣದ ಜತೆಗೆ ಅವರು ಖಾತೆಯಲ್ಲಿದ್ದ ಸ್ವಂತ ಹಣ ಕೂಡ ಹೋಗಿದೆ. ಇದೀಗ ಈ ಬಗೆಗಿನ ಪೋಸ್ಟ್ ವೈರಲ್ ಆಗಿದೆ.

ಬಿಹಾರ, ಆಗಸ್ಟ್ 06: ಖಾತೆಗಳಿಗೆ ಕೆಲವೊಂದು ಬಾರಿ ದೊಡ್ಡ ಮೊತ್ತ ಜಮೆ ಆಗುತ್ತದೆ. ಇದು ತಾಂತ್ರಿಕ ದೋಷವೋ ಅಥವಾ ಸ್ಕ್ಯಾಮ್ ಎಂಬುದು ತಿಳಿಯುವುದಿಲ್ಲ, ಅನಾಮಿಕ ಖಾತೆಗೆ ಕೋಟಿ ಕೋಟಿ ಹಣ (billions rupees) ಜಮೆ ಆಗಿರುವ ಅದೆಷ್ಟೋ ಘಟನೆಗಳ ಬಗ್ಗೆ ಕೇಳಿರಬಹುದು. ಇದೀಗ ಅಂತಹದೇ ಒಂದು ಘಟನೆ ಅನುಭವ ಬಿಹಾರದ ವ್ಯಕ್ತಿಗೆ ಆಗಿದೆ. ಬಿಹಾರದಿಂದ ರಾಜಸ್ಥಾನದ ಗಂಗಾಪುರ ನಗರಕ್ಕೆ ಕೂಲಿ ಕೆಲಸ (labourer account) ಮಾಡಲು ಬಂದಿದ್ದ ತೇನಿ ಮಾಂಝಿ ಎಂಬುವವರ ಖಾತೆಗೆ 10, 01, 35, 60, 00, 00, 00, 00, 50, 01, 00, 23, 56, 00, 00, 00, 28, 844 ರೂ.ಗಳು ಜಮೆ ಆಗಿದೆ. ಇಷ್ಟು ದೊಡ್ಡ ಮೊತ್ತವನ್ನು ನೋಡಿ ಶಾಕ್ ಆಗಿದ್ದಾರೆ. ತೇನಿ ಮಾಂಝಿ ಈ ಬಗ್ಗೆ ಎನ್ಡಿಟಿವಿಗೆ ಹಂಚಿಕೊಂಡಿದ್ದಾರೆ. ಇಷ್ಟು ಹಣವನ್ನು ನೋಡಿ ನಾನು ದಿಗ್ಭ್ರಮೆಗೊಂಡೆ. ನನಗೆ ಏನೂ ಅರ್ಥವಾಗಲಿಲ್ಲ. ನಾನು ನನ್ನ ಪೋಷಕರಿಗೆ ಈ ಬಗ್ಗೆ ತಿಳಿಸಿದೆ. ಅವರು ಪೊಲೀಸ್ ಠಾಣೆಗೆ ವರದಿ ಮಾಡಲು ಸಲಹೆ ನೀಡಿದರು. ನಮಗೆ ಬ್ಯಾಂಕಿನಿಂದಲೂ ಯಾವುದೇ ಕರೆ ಬರಲಿಲ್ಲ. ನಾನು ನನ್ನ ಖಾತೆಯನ್ನು ಪದೇ ಪದೇ ಪರಿಶೀಲಿಸುತ್ತಿದ್ದೆ ಎಂದು ಹೇಳಿದ್ದಾರೆ.
ಇನ್ನು ನನ್ನ ಬಳಿ ಎಟಿಎಂ ಕಾರ್ಡ್ ಕೂಡ ಇರಲಿಲ್ಲ. ಈ ಎಟಿಎಂ ಕಾರ್ಡ್ 5 ತಿಂಗಳ ಹಿಂದೆ ಕಳೆದುಹೋಗಿತ್ತು. ಬ್ಯಾಂಕ್ನಲ್ಲಿ ಈ ಬಗ್ಗೆ ತಿಳಿಸಿದ್ದೆ, ಅಂದಿನಿಂದ ನನಗೆ ಹೊಸ ಎಟಿಎಂ ಕಾರ್ಡ್ ಸಿಕ್ಕಿಲ್ಲ. ಇನ್ನು ಈ ಹಣವನ್ನು ನಾನು ಬೇರೆ ಖಾತೆಗೆ ವರ್ಗಾಯಿಸಲು ಪ್ರಯತ್ನಿಸುತ್ತಿದ್ದೆ, ಅದು ವರ್ಗಾವಣೆಯಾಗುತ್ತಿರಲಿಲ್ಲ. ಬೇರೆಯವರ ಖಾತೆಗೆ ಜಮೆ ಮಾಡಲು ಹಲವು ಜನ ಸಲಹೆ ನೀಡಿದ್ರು, ಬೇರೆಯವರ ಖಾತೆಗೆ ವರ್ಗಾವಣೆ ಮಾಡಿದ್ರು ಅದು ಮತ್ತೆ ನನ್ನ ಖಾತೆಗೆ ಬಂದು ಬೀಳುತ್ತಿತ್ತು. ಮಂಗಳವಾರ (ಆಗಸ್ಟ್ 5) ಮಾಧ್ಯಮಗಳಲ್ಲಿ ಸುದ್ದಿ ಬಂದಾಗ, ಸುಮಾರು ಒಂದು ಗಂಟೆಯ ನಂತರ ಬ್ಯಾಲೆನ್ಸ್ ಶೂನ್ಯ ಎಂದು ತೋರಿಸಿದೆ ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟ ಆನೆ, ಮುಂದೇನಾಯ್ತು ನೋಡಿ
ತನ್ನ ಖಾತೆಯಲ್ಲಿ ಸುಮಾರು 600-700 ರೂಪಾಯಿ ಇತ್ತು, ಅದು ಕೂಡ ಹೋಗಿದೆ. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತೇನಿ ಮಾಂಝಿ ಹೇಳಿದ್ದಾರೆ. ಹಣ ಎಲ್ಲಿಂದ ಬಂತು ಮತ್ತು ಈಗ ಎಲ್ಲಿಗೆ ಹೋಗಿದೆ. ಆದರೆ ನನಗೆ ಖಾತೆಯಲ್ಲಿದ್ದ ನನ್ನ ಹಣ ಬೇಕು ಎಂದು ಮಾಧ್ಯಮದ ಮುಂದೆ ಹೇಳಿದ್ದಾರೆ. ಇನ್ನು ತೇನಿ ಮಾಂಝಿ ಬಿಹಾರದ ಜಮುಯಿ ಜಿಲ್ಲೆಯ ನಿವಾಸಿ. ಅವರು ಜಿಲ್ಲಾ ಆಸ್ಪತ್ರೆಯ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕೆಲಸಕ್ಕೆಂದು ರಾಜಸ್ಥಾನದ ಗಂಗಾಪುರ ನಗರಕ್ಕೆ ಕಾರ್ಮಿಕನಾಗಿ ಕೆಲಸ ಮಾಡಲು ಬಂದಿದ್ದಾರೆ. ಇಷ್ಟೊಂದು ಹಣವನ್ನು ತಾನು ಎಂದಿಗೂ ನೋಡಿಲ್ಲ, ಅದನ್ನು ಎಣಿಸಲು ಸಹ ಸಾಧ್ಯವಾಗಲಿಲ್ಲ, ನಾನು ನನ್ನ ಸ್ನೇಹಿತನ ಬಳಿ ಎಣಿಸಲು ಹೇಳಿದಾಗ ನನಗೆ ಶಾಕ್ ಆಗಿದೆ. ಮುಂಬೈನಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕಿನ ಖಾತೆಗೆ ಈ ಹಣ ಜಮೆ ಆಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Wed, 6 August 25








