Video: ಬಸ್‌ಗಳ ನಡುವೆ ಸಿಲುಕಿ ಅಪ್ಪಚ್ಚಿಯಾದ ಆಟೋ, ಭೀಕರ ಅಪಘಾತದ ದೃಶ್ಯ ಇಲ್ಲಿದೆ ನೋಡಿ
ವಾಹನಗಳನ್ನು ನಿಧಾನವಾಗಿ ಓಡಿಸಿ ಎಂದು ಎಷ್ಟೇ ಹೇಳಿದರೂ ವಾಹನ ಸಿಕ್ಕರೆ ಸಾಕು, ಮನಬಂದಂತೆ ರಸ್ತೆಯಲ್ಲಿ ಓಡಿಸುತ್ತಾರೆ. ತಮಗೆ ತಾವೇ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುವವರೇ ಹೆಚ್ಚು. ಇದೀಗ ಅಂತಹದ್ದೇ ಭೀಕರ ಅಪಘಾತಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದೆ, ಎರಡು ಬಸ್‌ಗಳ ನಡುವೆ ಆಟೋ ಸಿಲುಕಿ ಅಪ್ಪಚ್ಚಿಯಾಗಿದ್ದು, ಈ ಪರಿಣಾಮವಾಗಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗ, ಆಗಸ್ಟ್ 05: ಇತ್ತೀಚೆಗಿನ ದಿನಗಳಲ್ಲಿ ರಸ್ತೆ ಅಪಘಾತ (Accident) ಪ್ರಕರಣಗಳು ಹೆಚ್ಚಾಗುತ್ತಿದೆ. ಎಲ್ಲಿ ನೋಡಿದರಲ್ಲಿ ಈ ಅಪಘಾತಗಳದ್ದೇ ಸುದ್ದಿ. ಅತೀ ವೇಗದ ವಾಹನ ಚಾಲನೆಯಿಂದ ಅದೆಷ್ಟೋ ರಣ ಭೀಕರ ಅಪಘಾತಗಳು ಸಂಭವಿಸಲು ದಾರಿ ಮಾಡಿಕೊಡುತ್ತವೆ. ಇದೀಗ ಅಂತಹದ್ದೇ ಅಪಘಾತವೊಂದು ಚಿತ್ರದುರ್ಗದ ಬಸ್ ನಿಲ್ದಾಣದ ಸಮೀಪ (Near Chitradurga Bus Stand) ನಡೆಸಿದೆ. ಹಿಂಭಾಗದಿಂದ ಬಂದ ಬಸ್ಸೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಮುಂಭಾಗದ ಬಸ್‌ಗೆ ಹೋಗಿ ಗುದ್ದಿದೆ. ಈ ವೇಳೆ ಈ ಎರಡು ಬಸ್‌ಗಳ ನಡುವೆ ಸಿಲುಕಿಕೊಂಡ ಆಟೋ ಅಪ್ಪಚ್ಚಿಯಾಗಿದ್ದು, ಈ ಭೀಕರ ಅಪಘಾತದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಪಘಾತದ ವಿಡಿಯೋ ವೈರಲ್ ಆಗುತ್ತಿದೆ.
@nabilajamal ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಆಟೋಗೆ ಹಿಂಭಾಗದಿಂದ ಬಂದ ಖಾಸಗಿ ಬಸ್ಸು ಡಿಕ್ಕಿ ಹೊಡೆಯುವುದನ್ನು ನೋಡಬಹುದು. ಖಾಸಗಿ ಬಸ್ ಗುದ್ದಿದ ರಭಸಕ್ಕೆ ಆಟೋ ಮುಂಭಾಗದ ಸಾರಿಗೆ ಬಸ್ ಗೆ ಅಪ್ಪಳಿಸಿದ್ದು ಎರಡು ಬಸ್‌ಗಳ ನಡುವೆ ಸಿಲುಕಿ ಅಪ್ಪಚ್ಚಿಯಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Auto driver & passengers reportedly survived this!!!#Karnataka pic.twitter.com/dkwBuMas57
— Nabila Jamal (@nabilajamal_) August 5, 2025
ಈ ಅಪಘಾತದ ಪರಿಣಾಮವಾಗಿ ಐವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Video: ಚಾಲಕನಿಲ್ಲದೆ ಸ್ಟಾರ್ಟ್ ಆಗಿ ಮುಂದಕ್ಕೆ ಬಂದು ನಿಂತ ಟ್ರ್ಯಾಕ್ಟರ್
ಈ ವಿಡಿಯೋ ಈವರೆಗೆ ಆರು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ನಿಜವಾಗಿ ಯಮರಾಜ ರಜೆಯಲ್ಲಿ ಇರಬೇಕು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆಘಾತಕಾರಿ ವಿಡಿಯೋ, ಪವಾಡ ಸದೃಶವಾಗಿ ಪಾರಾರಾಗಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ತುಂಬಾ ಭಯಾನಕವಾಗಿದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:04 pm, Tue, 5 August 25








