AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಕನ್ನಡದಲ್ಲಿ ಮಾತ್ರ ಮಾತನಾಡು, ಹಿಂದಿ, ಇಂಗ್ಲೀಷ್​ ಬೇಡ ಎಂದ ಗುಜರಾತಿ ತಾಯಿ

ಕನ್ನಡದ ಬಗ್ಗೆ ಆಗ್ಗಾಗೆ ಒಂದಲ್ಲ ಒಂದು ವಿಚಾರ ವೈರಲ್​​ ಆಗುತ್ತಲೇ ಇರುತ್ತದೆ. ಅದೂ ವಿವಾದವಾಗಿ ಅಥವಾ ಒಂದು ಒಳ್ಳೆಯ ವಿಚಾರವಾಗಿ. ಆದರೆ ಇದೀಗ ಭಾವನ್ಮಾಕವಾದ ಘಟನೆಯೊಂದು ವೈರಲ್​​ ಆಗಿದೆ. ಬೆಂಗಳೂರಿನಲ್ಲಿ ಕನ್ನಡ ಮಾತನಾಡುವುದಕ್ಕಿಂತ ಅನ್ಯ ಭಾಷೆಗಳ ಬಳಕೆಯೇ ಹೆಚ್ಚು. ಇದರ ನಡುವೆ ಗುಜರಾತಿ ಫ್ಯಾಮಿಲಿಯೊಂದು ಕನ್ನಡದ ಬಗ್ಗೆ ಇಟ್ಟುಕೊಂಡಿರುವ ಗೌರವದ ಬಗ್ಗೆ ಇಲ್ಲಿ ನೋಡಬಹದು. ಚಿಕ್ಕ ಮಕ್ಕಳಿಂದಲೇ ಇದು ಪ್ರಾರಂಭವಾದರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ ಎಂದು ಹೇಳಿದ್ದಾರೆ.

Viral: ಕನ್ನಡದಲ್ಲಿ ಮಾತ್ರ ಮಾತನಾಡು, ಹಿಂದಿ, ಇಂಗ್ಲೀಷ್​ ಬೇಡ ಎಂದ ಗುಜರಾತಿ ತಾಯಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
|

Updated on: Aug 06, 2025 | 5:58 PM

Share

ಬೆಂಗಳೂರು,ಆಗಸ್ಟ್‌ 06: ಬೆಂಗಳೂರಿನಲ್ಲಿ (Bengaluru) ಕನ್ನಡ ಹಾಗೂ ಇತರ ಭಾಷೆಗಳಿಗೆ ಸಂಬಂಧಿಸಿದಂತೆ ದಿನಕ್ಕೊಂದು ಜಗಳ, ವಿವಾದಗಳು ಇರುತ್ತದೆ. ಕೆಲವೊಂದು ಕಡೆ ಕನ್ನಡ ಮಾತನಾಡುವ ಪ್ರಯತ್ನ, ಕನ್ನಡ ಕಲಿಯುವ ಆಸಕ್ತಿಯನ್ನುಕೆಲವರು ತೋರುತ್ತಾರೆ. ಅದರಲ್ಲೂಇಂತಹ ವಿಷಯಗಳಲ್ಲಿ ಆಸಕ್ತಿ ತೋರುವವರಲ್ಲಿ  ವಿದೇಶಿಗರು ಹೆಚ್ಚು. ಆದರೆ ಇಲ್ಲೊಂದು ಕನ್ನಡ ಭಾಷೆಯ ಪ್ರೇಮ ಹಾಗೂ ಕಲಿಕೆಯ ಬಗ್ಗೆ ಗುಜರಾತಿನ ತಾಯಿಯೊಬ್ಬರು ಮಕ್ಕಳಿಗೆ ಸಾರ್ವಜನಿಕವಾಗಿ ಹೇಳಿಕೊಟ್ಟಿದ್ದಾರೆ. ಇದೀಗ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ರೆಡ್ಡಿಟ್ ಪೋಸ್ಟ್​​​ವೊಂದನ್ನು ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಈ ಘಟನೆ ನಡೆದಿದೆ. ಈ ಹೃದಯಸ್ಪರ್ಶಿ ಘಟನೆಗೆ ಅನೇಕ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಸಾಂಸ್ಕೃತಿಕ ಸಮೀಕರಣ (cultural assimilation) ಮತ್ತು ಭಾಷಾ ಕಲಿಕೆಯ ಕುರಿತು ಚರ್ಚೆಗೆ ಗ್ರಾಸವಾಗಿದೆ. ದಕ್ಷಿಣ ಬೆಂಗಳೂರಿನಲ್ಲಿ ವಾಸವಾಗಿರುವ ಗುಜರಾತಿ ದಂಪತಿಗಳು ಕನ್ನಡ ಸಂಸ್ಕೃತಿಯನ್ನು ಹೇಗೆ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ಈ ಮೂಲಕ ತಿಳಿಸಿದ್ದಾರೆ.

ಗಾಂಧಿ ಬಜಾರ್ ವೃತ್ತದ ಬಳಿಯ ಸ್ಥಳೀಯ ಕಾಫಿ ಪುಡಿ ಅಂಗಡಿಯಲ್ಲಿ ಶಾಪಿಂಗ್ ಮಾಡುವಾಗ ಗುಜರಾತಿ ತಾಯಿಯೊಬ್ಬರು ತನ್ನ ಚಿಕ್ಕ ಮಗಳನ್ನು ಕನ್ನಡದಲ್ಲಿ ಮಾತನಾಡುವಂತೆ ಹೇಳುತ್ತಾರೆ. ಈ ಗುಜರಾತಿನ ದಂಪತಿಗಳು ಕಾಫಿ ಖರೀದಿ ಮಾಡಲು ಬಂದಾಗ ತಾಯಿ ತನ್ನ ಮಗಳನ್ನು ಮುಂದಕ್ಕೆ ಹೋಗುವಂತೆ ಹೇಳಿ ಕನ್ನಡದಲ್ಲಿ ಮಾತನಾಡುವಂತೆ ಹೇಳುತ್ತಾರೆ. ಆದರೆ ಇದು ಕಾಫಿ ಖರೀದಿ ಮಾಡಲು ಮಾತ್ರವಲ್ಲ ಆಕೆಗೆ ಕನ್ನಡದ ಗೌರವ ಹಾಗೂ ಪ್ರಾಮುಖ್ಯತೆಯನ್ನು ತಿಳಿಸುವಂತೆ ಇತ್ತು. ಈ ತಾಯಿ ತನ್ನ ಮಗಳಿಗೆ ಕನ್ನಡದಲ್ಲಿ ಮಾತ್ರ ಮಾತನಾಡಿ. ಇಂಗ್ಲಿಷ್ ಅಥವಾ ಗುಜರಾತಿ ಬೇಡ, ಮಗು ಆರಂಭದಲ್ಲಿ ಸ್ವಲ್ಪ ತಡವಡಿಸಿದರೂ ತಾಯಿಯ ಮೇಲೆ ನಂಬಿಕೆ ಇಟ್ಟುಕೊಂಡು ಕನ್ನಡದಲ್ಲಿ ಮಾತನಾಡಿದೆ. ಆ ಮಗುವಿನ ಪ್ರಯತ್ನ ನೋಡಿ, ಅಲ್ಲಿದ್ದ ಜನ ತುಂಬಾ ಸಂತೋಷ ವ್ಯಕ್ತಪಡಿಸಿದ್ದಾರೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

Viral Post

ಇದನ್ನೂ ಓದಿ
Image
ಪ್ರವಾಹದಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟ ಆನೆ
Image
ಮೊದಲು ನನ್ನ ಹೆಂಡತಿಯನ್ನು ಉಳಿಸಿ, ಅವಳಿಗೆ ಈಜು ಬರುವುದಿಲ್ಲ
Image
ಫ್ರೆಂಡ್‌ಶಿಪ್‌ ಡೇಯಂದು ವಿಚಿತ್ರ ಮ್ಯಾರೇಜ್ ಸ್ಟೋರಿ ರಿವೀಲ್ ಮಾಡಿದ ಯುವತಿ
Image
ಅಮ್ಮ ಕಣ್ಣು ದಿಟ್ಟಿಸಿ ನೋಡಿದ್ದೇ ತಡ, ಪೂಲ್‌ನಿಂದ ಓಡೋಡಿ ಬಂದ ಮರಿ ಹಿಪ್ಪೋ

ಇದನ್ನೂ ಓದಿ: ಇದು ಪರ್ಫೆಕ್ಟ್ ಮಾರ್ಕೆಟಿಂಗ್‌ ತಂತ್ರ; ಬೆಂಗಳೂರಿನ ಸೀರೆ ಮಳಿಗೆಯಲ್ಲಿ ಗಮನ ಸೆಳೆದ ಚಾಟ್ ಜಿಪಿಟಿ ಪ್ರೇರಿತ ಜಾಹೀರಾತು

ಇನ್ನು ಈ ಪೋಸ್ಟ್​​​ನ್ನು ನೋಡಿ ಹಲವು ಬಳಕೆದಾರರು ರೆಡ್ಡಿಟ್​​​ನಲ್ಲಿ ಕಾಮೆಂಟ್​ ಮಾಡಿದ್ದಾರೆ. ಕೆಲವರು ವ್ಯವಹಾರಕ್ಕಾಗಿ ಕಲಿಯುತ್ತಾರೆ. ಇಂತಹ ಮಕ್ಕಳು ಸಾಂಸ್ಕೃತಿಕವಾಗಿ ಕಲಿಯುತ್ತಾರೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಬೆಂಗಳೂರು ಬಲವಾದ, ಸಾಂಸ್ಕೃತಿಕವಾಗಿ ಬೇರೂರಿರುವ ಜನಸಮೂಹವನ್ನು ಹೊಂದಿದೆ, ಆದ್ದರಿಂದ ಹೊಸಬರು ಅದರ ಭಾಗವೆಂದು ಭಾವಿಸಲು ಭಾಷೆಯನ್ನು ಹೊಂದಿಕೊಳ್ಳುವುದು ಮತ್ತು ಕಲಿಯುವುದು ಸಹಜ ಎಂದು ಹೇಳಿದ್ದಾರೆ. ನಾನು ಗುಜರಾತಿ, ವ್ಯವಹಾರ ಎಂದಾದರೆ ನಾವು ಮ್ಯಾಂಡರಿನ್ ಕೂಡ ಮಾತನಾಡುತ್ತೇವೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಭಾಷೆ ಒಂದು ಅಡಚಣೆಯಾಗಬಾರದು ಎಂದು ಹಲವರು ಒಪ್ಪಿಕೊಂಡರು. “ಅವೆನ್ಯೂ ರಸ್ತೆಯಲ್ಲಿರುವ ಗುಜರಾತಿ ಅಥವಾ ಮಾರ್ವಾಡಿ ಅಂಗಡಿಗಳಿಗೆ ಹೋಗಿ, ಅವರು ಕನ್ನಡ, ತೆಲುಗು, ತಮಿಳು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ. ‘ದಕ್ಷಿಣ ಭಾರತೀಯ ಭಾಷೆಗಳು ಕಠಿಣ’ ಎಂದು ಯಾರಾದರೂ ಹೇಳುತ್ತಿದ್ದರೆ ಇದು ಉತ್ತರವಾಗಲಿದೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್