ಕಾರು ಡಿಕ್ಕಿಯಾಗಿ ಒದ್ದಾಡುತ್ತಿದ್ದ ಮರಿಯನ್ನು ಹಿಡಿದು ಗೋಳಾಡಿದ ತಾಯಿ ಕರಡಿ; ಮನಕಲಕುವ ವಿಡಿಯೋ ಇಲ್ಲಿದೆ
ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ತಾಯಿ ಕರಡಿಯೊಂದು ತನ್ನ ಗಾಯಗೊಂಡ ಮರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಹೃದಯವಿದ್ರಾವಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ತಾಯಿ ಕರಡಿ ಭಯಭೀತರಾಗಿ ತನ್ನ ಮರಿಯನ್ನು ರಸ್ತೆಬದಿಯಿಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು, ಇನ್ನೊಂದು ಮರಿ ತಾಯಿಯ ಬೆನ್ನು ಹತ್ತಿ ಕುಳಿತಿತ್ತು. ಗಾಯಗೊಂಡ ಮರಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಘಟನೆಯು ಅರಣ್ಯ ಪ್ರದೇಶಗಳಲ್ಲಿ ವೇಗವಾಗಿ ಚಲಿಸುವ ವಾಹನಗಳು ಮತ್ತು ಅವು ವನ್ಯಜೀವಿಗಳಿಗೆ ಒಡ್ಡುವ ಅಪಾಯಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ಶಹದೋಲ್, ಆಗಸ್ಟ್ 8: ತಾಯಿಗೆ ಮಕ್ಕಳೇ ಪ್ರಪಂಚ, ಇದಕ್ಕೆ ಪ್ರಾಣಿಗಳು ಕೂಡ ಹೊರತಾಗಿಲ್ಲ. ಮನುಷ್ಯರಂತೆ ಪ್ರಾಣಿಗಳಿಗೂ ತಮ್ಮ ಮಕ್ಕಳ ಮೇಲೆ ವಿಪರೀತ ಮಮಕಾರ ಇರುತ್ತದೆ. ಮಧ್ಯಪ್ರದೇಶದ ಶಹದೋಲ್‌ನಲ್ಲಿ (Shahdol) ನಡೆದ ಘಟನೆಯ ಹೃದಯ ವಿದ್ರಾವಕ ವಿಡಿಯೋವೊಂದು ವೈರಲ್ ಆಗಿದೆ. ರಾತ್ರಿ ವೇಗವಾಗಿ ಚಲಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಕಾರಣದಿಂದ ರಸ್ತೆಯಲ್ಲಿ ಹೋಗುತ್ತಿದ್ದ ಕರಡಿ ಮರಿ (Bear Video) ರಕ್ತದ ಮಡುವಿನಲ್ಲಿ ಒದ್ದಾಡಿದೆ. ತನ್ನ ಮರಿಯ ಸಂಕಟವನ್ನು ನೋಡಲಾರದೆ ಆ ಮರಿಯನ್ನು ರಸ್ತೆಯಿಂದ ಎಳೆದು ಪಕ್ಕಕ್ಕೆ ಕರೆತಂದ ತಾಯಿ ಕರಡಿ ಆ ಮರಿಯನ್ನು ಉಳಿಸಲು ಇನ್ನಿಲ್ಲದ ಪ್ರಯತ್ನ ಮಾಡಿದೆ. ಆ ಮರಿಗಾಗಿ ಸುಮಾರು 1 ಗಂಟೆ ಅಲ್ಲೇ ಕುಳಿತ ತಾಯಿ ಕರಡಿಯ ಜೊತೆಗೆ ಇನ್ನೂ ಕೆಲವು ಮರಿಗಳು ಅಲ್ಲಿ ಸೇರಿದ್ದವು. ಕೊನೆಗೆ ಬೇರೆ ವಾಹನದಲ್ಲಿ ಬಂದವರು ಆ ದೃಶ್ಯ ನೋಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಅವರು ಬಂದು ಕರಡಿ ಮರಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ರಕ್ತಸ್ರಾವದಿಂದ ಆ ಮರಿ ಜೀವ ಬಿಟ್ಟಿತ್ತು. ಈ ಘಟನೆಯು ಅರಣ್ಯ ಪ್ರದೇಶಗಳಲ್ಲಿ ವೇಗವಾಗಿ ಚಲಿಸುವ ವಾಹನಗಳು ಮತ್ತು ಅವು ವನ್ಯಜೀವಿಗಳಿಗೆ ಒಡ್ಡುವ ಅಪಾಯಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

