ದೆಹಲಿಯಲ್ಲಿ ರಸ್ತೆ ಮಧ್ಯೆ ಮಹಿಳೆಯಿಂದ ಸರ ದೋಚಿ, ಕೊಂದು ಪರಾರಿ
ದೆಹಲಿಯ ಶಕರ್‌ಪುರ ಪೊಲೀಸ್ ಠಾಣೆಯ ಡಿ ಬ್ಲಾಕ್ ಪ್ರದೇಶದಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಅಲ್ಲಿ ದರೋಡೆಕೋರರು ಮಹಿಳೆಯೊಬ್ಬಳನ್ನು ನಿರ್ದಯವಾಗಿ ನೆಲಕ್ಕೆ ಬೀಳಿಸಿಕೊಂಡು ದರೋಡೆ ಮಾಡಿ, ನಂತರ ಪರಾರಿಯಾಗಿದ್ದಾರೆ. ಈ ದೃಶ್ಯಗಳಲ್ಲಿ ಒಬ್ಬ ವ್ಯಕ್ತಿ ಮಹಿಳೆಯನ್ನು ರಹಸ್ಯವಾಗಿ ಹಿಂಬಾಲಿಸಿ ಆಕೆಯನ್ನು ಹಿಂದಿನಿಂದ ಹಿಡಿದು ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಚಿನ್ನದ ಕಿವಿಯೋಲೆಗಳನ್ನು ಕಸಿದುಕೊಳ್ಳುತ್ತಿರುವ ದೃಶ್ಯವನ್ನು ನೋಡಬಹುದು. ಇದರಿಂದ ಆ ಮಹಿಳೆ ಮೂರ್ಛೆ ಹೋಗಿ ನೆಲಕ್ಕೆ ಕುಸಿದು ಬೀಳುತ್ತಿದ್ದಂತೆ ದರೋಡೆಕೋರ ಆಕೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ.
ನವದೆಹಲಿ, ಆಗಸ್ಟ್ 8: ದೆಹಲಿಯ ಶಕರ್‌ಪುರದಲ್ಲಿ ಆಘಾತಕಾರಿ (Shocking News) ರೀತಿಯಲ್ಲಿ ಕಳ್ಳರು ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ಕಿತ್ತುಕೊಂಡು, ಆಕೆಯನ್ನು ಕೊಂದು ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ಈ ದೃಶ್ಯಗಳಲ್ಲಿ ಒಬ್ಬ ವ್ಯಕ್ತಿ ಮಹಿಳೆಯನ್ನು ರಹಸ್ಯವಾಗಿ ಹಿಂಬಾಲಿಸಿ ಆಕೆಯನ್ನು ಹಿಂದಿನಿಂದ ಹಿಡಿದು ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಚಿನ್ನದ ಕಿವಿಯೋಲೆಗಳನ್ನು ಕಸಿದುಕೊಳ್ಳುತ್ತಿರುವ ದೃಶ್ಯವನ್ನು ನೋಡಬಹುದು. ಇದರಿಂದ ಆ ಮಹಿಳೆ ಮೂರ್ಛೆ ಹೋಗಿ ನೆಲಕ್ಕೆ ಕುಸಿದು ಬೀಳುತ್ತಿದ್ದಂತೆ ದರೋಡೆಕೋರ ಆಕೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ. ಈ ಘಟನೆ ನಡೆದ ಸ್ಥಳದಿಂದ ಕೆಲವೇ ಹೆಜ್ಜೆಗಳ ದೂರದಲ್ಲಿ ಶಹದಾರಾ ವಲಯ ಎಂಸಿಡಿ ಅಧ್ಯಕ್ಷರ ಮನೆ ಇದೆ. ಹೀಗಾಗಿ, ಅಲ್ಲಿನ ಜನರು ಪೊಲೀಸ್ ವ್ಯವಸ್ಥೆ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಗಣೇಶ ಚತುರ್ಥಿ ದಿನವೇ ಸಿದ್ದರಾಮಯ್ಯ ಗೃಹಪ್ರವೇಶ: ಭವ್ಯ ಬಂಗಲೆ ಹೇಗಿದೆ ನೋಡಿ
ಮೈಸೂರಿನ 101 ಗಣಪತಿ ದೇವಾಲಯದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಬಿಗ್ ಬಾಸ್: ಗಗನ್ ಚಿನ್ನಪ್ಪ ವಿರುದ್ಧ ತಿರುಗಿಬಿದ್ದ ಕಾಮನರ್ ಸ್ಪರ್ಧಿಗಳು
ಸರ್ಕಾರಕ್ಕೆ 100ರ ಸಂಭ್ರಮ :ಬಿಕೆ ಹರಿಪ್ರಸಾದ್ ಅಸಮಾಧಾನ

