Daily Devotional: ರಕ್ಷಾ ಬಂಧನ ಆಚರಣೆ ಹಿಂದಿನ ಮಹತ್ವ ತಿಳಿಯಿರಿ
ರಕ್ಷಾ ಬಂಧನವು ಕೇವಲ ಹಬ್ಬವಲ್ಲ. ಇದು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ರಕ್ಷಣೆಯ ಸಂಕೇತ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಕ್ಷಾ ಕಟ್ಟಿ ಅವರ ಆರೋಗ್ಯ ಮತ್ತು ಸುಖಕ್ಕಾಗಿ ಪ್ರಾರ್ಥಿಸುತ್ತಾರೆ. ಪುರಾಣಗಳಲ್ಲಿಯೂ ರಕ್ಷಾಬಂಧನದ ಉಲ್ಲೇಖಗಳಿವೆ. ಪಾರ್ವತಿ ದೇವಿ ದೇವೇಂದ್ರನಿಗೆ ರಕ್ಷೆಯನ್ನು ಕಟ್ಟಿದ್ದು, ದ್ರೌಪದಿ ಶ್ರೀಕೃಷ್ಣನಿಗೆ ಕಟ್ಟಿದ್ದು ಇದಕ್ಕೆ ಕೆಲವು ಉದಾಹರಣೆಗಳು.
ಬೆಂಗಳೂರು, ಆಗಸ್ಟ್ 09: ರಕ್ಷಾ ಬಂಧನವು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸುವ ಪವಿತ್ರ ಹಬ್ಬ. “ರಕ್ಷ” ಎಂದರೆ ರಕ್ಷಣೆ ಮತ್ತು “ಬಂಧನ” ಎಂದರೆ ಬಂಧ. ಸಹೋದರಿಯರು ತಮ್ಮ ಸಹೋದರರಿಗೆ ರಕ್ಷಾ ಕಟ್ಟುವುದು ಇದರ ಮುಖ್ಯ ಆಚರಣೆ. ಪ್ರತಿಯಾಗಿ ಸಹೋದರರು ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಇದು ಕೇವಲ ರಕ್ತಸಂಬಂಧಿಗಳಿಗೆ ಮಾತ್ರ ಸೀಮಿತವಲ್ಲ. ಪ್ರೀತಿ ಮತ್ತು ಗೌರವ ಇರುವ ಎಲ್ಲರಿಗೂ ರಕ್ಷಾ ಕಟ್ಟಬಹುದು. ಪುರಾಣಗಳಲ್ಲಿ ದೇವತೆಗಳು ಮತ್ತು ರಾಜರಿಗೆ ರಕ್ಷಾ ಕಟ್ಟಿದ ಉಲ್ಲೇಖಗಳಿವೆ.

