ಕೈತುಂಬ ರಾಖಿ, ಮುಖದ ತುಂಬ ನಗು; ಮಕ್ಕಳ ಜೊತೆ ಮಗುವಿನಂತೆ ಸಂಭ್ರಮಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ತಮ್ಮ ನಿವಾಸದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಮಕ್ಕಳೊಂದಿಗೆ ರಾಖಿ ಆಚರಿಸಿದರು. ದೆಹಲಿಯ ಶಾಲೆಗಳ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಪ್ರಧಾನಿಯವರ ನಿವಾಸಕ್ಕೆ ಹೋಗಿ ರಾಖಿ ಕಟ್ಟಿದರು. ಮಕ್ಕಳು ನಗುನಗುತ್ತಾ ಮೋದಿಗೆ ಬಹಳ ಪ್ರೀತಿಯಿಂದ ರಾಖಿ ಕಟ್ಟಿದರು. ಈ ಸಂದರ್ಭದಲ್ಲಿ ಮೋದಿ ಮಕ್ಕಳೊಂದಿಗೆ ಮೋಜಿನ ಸಂವಾದ ನಡೆಸಿದರು. ರಾಖಿ ಕಟ್ಟುವಾಗ ಅವರು ವಿದ್ಯಾರ್ಥಿಗಳ ಹೆಸರು ಮತ್ತು ತರಗತಿಗಳನ್ನು ಕೇಳಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಪ್ರಸ್ತುತ ವೈರಲ್ ಆಗುತ್ತಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಮಕ್ಕಳೊಂದಿಗೆ ರಾಖಿ ಆಚರಿಸಿದರು.
ದೆಹಲಿ, ಆಗಸ್ಟ್ 9: ಇಂದು ರಕ್ಷಾಬಂಧನ (Raksha Bandhan). ಪ್ರತಿವರ್ಷದಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ರಾಖಿ ಕಟ್ಟಲು ಶಾಲಾ ಮಕ್ಕಳು ಅವರ ನಿವಾಸಕ್ಕೆ ಆಗಮಿಸಿದ್ದರು. ದೆಹಲಿಯ ತಮ್ಮ ನಿವಾಸದಲ್ಲಿ ವಿವಿಧ ಶಾಲಾ ಮಕ್ಕಳ ಜೊತೆ ಸಮಯ ಕಳೆದ ಪ್ರಧಾನಿ ಮೋದಿ ಮಕ್ಕಳು ತಮಗಾಗಿ ಹಾಡಿದ ಹಾಡುಗಳನ್ನು ಆಲಿಸಿದರು, ಅವರೊಂದಿಗೆ ತಮಾಷೆ ಮಾಡಿದರು. ಮಕ್ಕಳ ಜೊತೆ ಅವರು ಹೇಳಿಕೊಟ್ಟ ರೀತಿ ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡರು. ಮೋದಿಯವರ ಬಲಗೈ ಪೂರ್ತಿ ಬಣ್ಣ ಬಣ್ಣದ ರಾಖಿಗಳಿಂದ ತುಂಬಿಹೋಗಿತ್ತು. ಅರಳಿ ಎಲೆಯಲ್ಲಿ ಬಾಲಕಿಯೊಬ್ಬಳು ರಾಖಿ ಮಾಡಿಕೊಂಡು ಮೋದಿಗಾಗಿ ತಂದಿದ್ದರೆ ಇನ್ನೊಬ್ಬಳು ಗೋವಿನ ಚಿತ್ರವಿರುವ ವಿಶೇಷ ರಾಖಿಯನ್ನು ಕಟ್ಟಿದಳು.
ದೆಹಲಿಯ ಶಾಲೆಗಳ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಪ್ರಧಾನಿಯವರ ನಿವಾಸಕ್ಕೆ ಹೋಗಿ ರಾಖಿ ಕಟ್ಟಿದರು. ಮಕ್ಕಳು ನಗುನಗುತ್ತಾ ಮೋದಿಗೆ ಬಹಳ ಪ್ರೀತಿಯಿಂದ ರಾಖಿ ಕಟ್ಟಿದರು. ಈ ಸಂದರ್ಭದಲ್ಲಿ ಮೋದಿ ಮಕ್ಕಳೊಂದಿಗೆ ಮೋಜಿನ ಸಂವಾದ ನಡೆಸಿದರು. ರಾಖಿ ಕಟ್ಟುವಾಗ ಅವರು ವಿದ್ಯಾರ್ಥಿಗಳ ಹೆಸರು ಮತ್ತು ತರಗತಿಗಳನ್ನು ಕೇಳಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಪ್ರಸ್ತುತ ವೈರಲ್ ಆಗುತ್ತಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಮಕ್ಕಳೊಂದಿಗೆ ರಾಖಿ ಆಚರಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

