AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮನ್ನು ಅಧಿಕಾರದಿಂದ ಬೀಳಿಸಿದವರ ಜೊತೆ ಕುಮಾರಸ್ವಾಮಿ ಕೈ ಜೋಡಿಸಿದ್ದಾರೆ: ಸಿದ್ದರಾಮಯ್ಯ

ತಮ್ಮನ್ನು ಅಧಿಕಾರದಿಂದ ಬೀಳಿಸಿದವರ ಜೊತೆ ಕುಮಾರಸ್ವಾಮಿ ಕೈ ಜೋಡಿಸಿದ್ದಾರೆ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 09, 2025 | 6:35 PM

Share

ಕಾಂಗ್ರೆಸ್ 2023 ರಲ್ಲಿ ಪುನಃ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ನಾಯಕರು ನಮ್ಮ ಸರ್ಕಾರವನ್ನು ಟೀಕಿಸುತ್ತಿದ್ದಾರೆ ಮತ್ತು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ, ನಾವು ಐದು ಗ್ಯಾರಂಟಿ ಯೋಜನಗೆಳನ್ನು ಘೋಷಿಸಿ ಜಾರಿಗೆ ತಂದಿದ್ದು ಅವರಿಗೆ ಸಹಸಿಕೊಳ್ಳಲಾಗುತ್ತಿಲ್ಲ, ಸರ್ಕಾರದ ಬೊಕ್ಕಸ ಖಾಲಿಯಾಗಿದೆ, ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮೈಸೂರು, ಆಗಸ್ಟ್ 9: ನಗರದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ ಭಾಗ್ಯಗಳು ಮತ್ತು ಈಡೇರಿಸಿದ ಭರವಸೆಗಳ (Congress manifesto) ಬಗ್ಗೆ ಮತ್ತೊಮ್ಮೆ ಹೇಳಿದರು. ಅಷ್ಟೆಲ್ಲ ಭಾಗ್ಯಗಳನ್ನು ನೀಡಿದಾಗ್ಯೂ ಜನ ಪುನಃ ಅಧಿಕಾರ ನೀಡಲಿಲ್ಲ, ಹಾಗಾಗಿ ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದೆವು, ಅದರೆ ಬಿಜೆಪಿ ಅಪರೇಶನ್ ಕಮಲ ನಡೆಸಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂತು ಎಂದರು. ಆಗೆಲ್ಲ ಬಿಜೆಪಿಯನ್ನು ವಾಚಾಮಗೋಚರವಾಗಿ ತೆಗಳುತ್ತಿದ್ದ ಕುಮಾರಸ್ವಾಮಿ ಮತ್ತು ಹೆಚ್ ಡಿ ದೇವೇಗೌಡ ಈಗ ಅಧಿಕಾರಕ್ಕಾಗಿ ಅವರೊಂದಿಗೆ ಕೈ ಜೋಡಿಸಿದ್ದಾರೆ ಎಂದ ಸಿದ್ದರಾಮಯ್ಯ ತಾನು ಕುಮಾರಸ್ವಾಮಿ ವಿಷಯದಲ್ಲಿ ಹೆಚ್ಚು ಮಾತಾಡುವುದನ್ನು ಇಷ್ಟಪಡಲ್ಲ ಎಂದರು. ಜೆಡಿಎಸ್ ಪಕ್ಷ ಹುಟ್ಟಿದ್ದೇ ಸಾಮಾಜಿಕ ನ್ಯಾಯ, ಜಾತ್ಯಾತೀತ ತತ್ವ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವು ಎಂಬ ಆಶಯಳೊಂದಿಗೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:  ವಿಕ್ಟೋರಿಯ ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆ ಮತ್ತು ವ್ಯವಸ್ಥೆ ಬಗ್ಗೆ ರೋಗಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ: ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ