ಟಿವಿ9 ವಾಹಿನಿಯನ್ನು ಕೊಂಡಾಡಿದ ಕೆಜಿಎಫ್ ಬಾಬು ಪೂರ್ತಿ ಆಸ್ತಿಯನ್ನು ಬಡವರಿಗೆ ಕೊಡುತ್ತೇನೆಂದರು!
ಬಡವರಿಗೆ ಆಸ್ತಿ ಹಂಚುವ ನಿರ್ಧಾರದ ಹಿಂದೆ ರಾಜಕೀಯದ ಉದ್ದೇಶವೇನಾದರೂ ಇದೆಯೇ ಅಂದಾಗ ಖಡಾಖಂಡಿತವಾಗಿ ನಿರಾಕರಿಸುವ ಬಾಬು, ನಾನು ಮನಸ್ಸು ಮಾಡಿದ್ದರೆ ಹಿಂಬಾಗಿಲು ರಾಜಕೀಯದ ಮೂಲಕ ಎಂಎಲ್ಸಿ ಆಗಬಹುದಿತ್ತು ಇಲ್ಲವೇ ರಾಜ್ಯಸಭಾ ಎಂಪಿ, ನಾನು ಕರ್ನಾಟಕದ ಯಾವುದೇ ಭಾಗದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಗೆಲ್ತೀನಿ, ಆದರೆ ನನ್ನ ಉದ್ದೇಶ ಅದಲ್ಲ ಎಂದರು.
ಬೆಂಗಳೂರು, ಆಗಸ್ಟ್ 9: ಕರ್ನಾಟಕದಲ್ಲಿ ತನ್ನನ್ನು ಹೀರೋ ಮಾಡಿದ್ದು ಟಿವಿ9 ಎಂದ ರೀಯಲ್ ಎಸ್ಟೇಟ್ ಉದ್ಯಮಿ ಕೆಜಿಎಫ್ ಬಾಬು, ಇಡೀ ಕರ್ನಾಟಕ ಜನರ ಗೌರವ ನನಗೆ ಸಿಕ್ಕಿದೆ, ಇಲ್ಲಿರುವ ಖಾದರ್ ಶರೀಫ್ ಸ್ಲಂನ (Khader Shariff Slum) ಜನ ತನ್ನನ್ನು ಆದರಿಸುತ್ತಾರೆ, ಅವರಿಗಾಗಿ ಮನೆ ಕಟ್ಟಿಸಿ ಕೊಡೋದ್ರಲ್ಲಿ ತನಗೆ ಯಾವ ತಾಪತ್ರಯವೂ ಇಲ್ಲ, ಅವರ ಪ್ರೀತಿ ಹೀಗೆಯೇ ಮುಂದುವರಿಯುತ್ತಿದ್ದರೆ 10,000 ಮನೆಯಲ್ಲ, ಅದಕ್ಕಿಂತಲೂ ಹೆಚ್ಚು ಮನೆಗಳನ್ನು ಕಟ್ಟಿಕೊಡುತ್ತೇನೆ ಎಂದರು. ತನ್ನ ಆಸ್ತಿಯನ್ನು ಮಕ್ಕಳಿಗೆ ಕೊಡಲ್ಲ, ಚುನಾವಣೆಯಲ್ಲಿ ನನಗೆ ಮತ ನೀಡಿದ 22,000 ಜನಕ್ಕೆ ಎಲ್ಲವನ್ನೂ ಕೊಟ್ಟು ಹೋಗುತ್ತೇನೆ ಎಂದು ಅವರು ಹೇಳಿದರು. ಇದಕ್ಕೆ ಮೊದಲು ನಮ್ಮ ಪ್ರತಿನಿಧಿಯೊಮದಿಗೆ ಮಾತಾಡಿದಾಗ ಅವರು ಅರ್ಧ ಆಸ್ತಿಯನ್ನು ತನಗೆ ವೋಟು ನೀಡಿದವರಿಗೆ ಕೊಡುತ್ತೇನೆ ಅಂದಿದ್ದರು, ಈಗ ಪೂರ್ತಿ ಆಸ್ತಿಯನ್ನು ಬರೆದು ಕೊಡುತ್ತೇನೆ ಅನ್ನುತ್ತಿದ್ದಾರೆ.
ಇದನ್ನೂ ಓದಿ: ಅರ್ಧ ಆಸ್ತಿಯನ್ನು ನನಗೆ ವೋಟು ನೀಡಿದ ಚಿಕ್ಕಪೇಟೆಯ ಜನಕ್ಕೆ ಹಂಚುತ್ತೇನೆ, ಮಗನಿಗೆ ಕೊಡಲ್ಲ: ಕೆಜಿಎಫ್ ಬಾಬು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

