ಬಡವರಿಗಾಗಿ 400 ಕೋಟಿ ರೂ ವೆಚ್ಚದಲ್ಲಿ ಮನೆ: ದೇಶದ ಯಾವ ಶ್ರೀಮಂತ ಮಾಡದ ಕೆಲಸ ಎಂದ ಕೆಜಿಎಫ್ ಬಾಬು
ಇತ್ತೀಚೆಗಷ್ಟೇ ಮನೆಗಳನ್ನ ನಿರ್ಮಾಣ ಮಾಡಿಲ್ಲ ಅಂತಾ ಕೆಜಿಎಫ್ ಬಾಬು ವಿರುದ್ಧ ಚಿಕ್ಕಪೇಟೆ ನಿವಾಸಿಗಳು ಪ್ರತಿಭಟನೆ ಮಾಡಿದ್ದರು. ಆದರೆ ಇದೀಗ 400 ಕೋಟಿ ವೆಚ್ಚದಲ್ಲಿ 10 ಸಾವಿರ ಮನೆಗಳನ್ನ ನಿರ್ಮಿಸಿ ಜನರಿಗೆ ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಬೆಂಗಳೂರು, ಆಗಸ್ಟ್ 09: ಇತ್ತೀಚೆಗಷ್ಟೇ ಮನೆಗಳನ್ನ ನಿರ್ಮಾಣ ಮಾಡಿಲ್ಲ ಅಂತಾ ಕೆಜಿಎಫ್ ಬಾಬು (KGF Babu) ವಿರುದ್ಧ ಚಿಕ್ಕಪೇಟೆ ನಿವಾಸಿಗಳು ಪ್ರತಿಭಟನೆ ಮಾಡಿದ್ದರು. ಆದರೆ ಇದೀಗ 400 ಕೋಟಿ ವೆಚ್ಚದಲ್ಲಿ 10 ಸಾವಿರ ಮನೆಗಳನ್ನ ನಿರ್ಮಿಸಿ ಜನರಿಗೆ ನೀಡಲು ಮುಂದಾಗಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಮನೆಗಳನ್ನ ಕಟ್ಟಿಸಿದ್ದೇನೆ. 7 ಮನೆಗಳಲ್ಲಿ ವಕ್ಫ್ ಬೋರ್ಡ್ ಜಾಗ ಆಗಿದ್ದರಿಂದ ತಡ ಆಗಿತ್ತು. ಈಗ ಚಿಕ್ಕಪೇಟೆ ಕ್ಷೇತ್ರದಲ್ಲಿ 10 ಸಾವಿರ ಮನೆಗಳನ್ನು ಕೊಡುತ್ತಿದ್ದೇನೆ. 400 ಕೋಟಿ ವೆಚ್ಚದಲ್ಲಿ ಮನೆಗಳನ್ನ ಕಟ್ಟಿಕೊಡುತ್ತಿದ್ದೇವೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos
