ನಾಳೆ ಬೆಂಗಳೂರುಗೆ ಬರಲಿದ್ದಾರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಹೇಗಿದೆ ಸಿದ್ಧತೆ ಮತ್ತು ಭದ್ರತಾ ವ್ಯವಸ್ಥೆ?
ನಮ್ಮ ವರದಿಗಾರ ಹೇಳಿವ ಪ್ರಕಾರ ನಗರದ ಮತ್ತ ಸುತ್ತಮುತ್ತಲಿನ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಒಟ್ಟು 6 ಕಡೆಗಳಲ್ಲಿ ಸ್ವಾಗತಿಸಲಿದ್ದಾರೆ. ಯಲಹಂಕ ಭಾಗದ ಸುಮಾರು 5,000ಕ್ಕೂ ಹೆಚ್ಚು ಕಾರ್ಯಕರ್ತರು ಮೇಕ್ರಿ ಸರ್ಕಲ್ ಭಾಗದಲ್ಲಿ ನೆರೆದು ಪ್ರಧಾನಿಯವರಿಗೆ ಸ್ವಾಗತ ಕೋರಲಿದ್ದಾರೆ. ನಂತರ ಚಾಲುಕ್ಯ ಸರ್ಕಲ್, ಕೆಎಸ್ಅರ್ ರೈಲು ನಿಲ್ದಾಣ, ಸೌಥ್ ಎಂಡ್ ಸರ್ಕಲ್, ರಾಗಿಗುಡ್ಡ ಮತ್ತು ಎಲೆಕ್ಟ್ರಾನಿಕ್ ಮೆಟ್ರೋ ಸ್ಟೇಷನ್ಗಳಲ್ಲೂ ಕಾರ್ಯಕರ್ತರು ಮೋದಿಯವರನ್ನು ಸ್ವಾಗತಿಸಲಿದ್ದಾರೆ.
ಬೆಂಗಳೂರು, ಆಗಸ್ಟ್ 9: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ಬೆಂಗಳೂರಿಗೆ ಆಗಮಿಸಲಿದ್ದು ಭದ್ರತೆಗೆ ಸಂಬಂಧಿಸಿದ ಎಲ್ಲ ಸಿದ್ಧತೆಗಳು ಯುದ್ಧೋಪಾದಿಯಲ್ಲಿ ನೆರವೇರುತ್ತಿವೆ. ಈಗಾಗಲೇ ವರದಿ ಮಾಡಿರುವಂತೆ ಪ್ರಧಾನಿಯವರು ಮೂರು ವಂದೇ ಭಾರತ್ ರೈಲುಗಳಿಗೆ (Vande Bharat Trains) ಹಸಿರು ನಿಶಾನೆ ತೋರಿಸಲು, ನಮ್ಮ ಮೆಟ್ರೋದ ಹಳದಿ ಲೈನನ್ನು ಲೋಕಾರ್ಪಣೆ ಮಾಡಲು ಮತ್ತು ಮೂರನೇ ಹಂತದ ಮೆಟ್ರೋ ಯೋಜನೆ ಉದ್ಘಾಟಿಸಲು ಬೆಂಗಳೂರುಗೆ ಆಗಮಿಸುತ್ತಿದ್ದಾರೆ. ಪ್ರಧಾನಿ ಮೋದಿಯವರು ಬೆಂಗಳೂರಲ್ಲಿ ಲ್ಯಾಂಡ್ ಆದ ನಂತರ ಹೆಲಿಕಾಪ್ಟರ್ನಲ್ಲಿ ಹೆಚ್ಕ್ಯೂಟಿಸಿಯಲ್ಲಿರುವ ಹೆಲಿಪ್ಯಾಡ್ಗೆ ಬರಲಿದ್ದು ಅಲ್ಲಿಂದ ರಸ್ತೆ ಮಾರ್ಗವಾಗಿ ಕ್ರಾಂತವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತೆರಳಲಿದ್ದಾರೆ. ರಾಜ್ಯ ಸರ್ಕಾರವು ಇವತ್ತಿನಿಂದಲೇ ಪ್ರಧಾನಿ ತೆರಳುವ ರಸ್ತೆಯುದ್ದಕ್ಕೂ ಸಂಚಾರಿ ಮತ್ತು ಸಿವಿಲ್ ಪೊಲೀಸರನ್ನು ನಿಯೋಜಿಸಿದೆ. ಎಸ್ಪಿಜಿ ಅಧಿಕಾರಿಗಳು ಬೆಂಗಳೂರಿಗೆ ಅಗಮಿಸಿ ರೇಲ್ವೇ ನಿಲ್ದಾಣದ ಬಳಿ ಭದ್ರತಾ ವ್ಯವಸ್ಥೆಯನ್ನು ವೀಕ್ಷಿಸುತ್ತಿದ್ದಾರೆ. ಕೇಂದ್ರ ಸಚಿವ ವಿ ಸೋಮಣ್ಣ ಇಲ್ಲಿಗೆ ಭೇಟಿ ನೀಡಿ ಏರ್ಪಾಟುಗಳನ್ನು ವೀಕ್ಷಿಸಿದ್ದಾರೆ ಮತ್ತು ಸಾಯಂಕಾಲ ಇನ್ನೊಬ್ಬ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಹ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಿದ್ದಾರೆ.
ಇದನ್ನೂ ಓದಿ: Raksha Bandhan 2025: ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮಿಸಿದ ಪ್ರಧಾನಿ ಮೋದಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

