AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಅಡಕೆ ತೋಟಕ್ಕೆ ನುಗ್ಗಿ ಏನಿಲ್ಲವೆಂದರೂ ಮುನ್ನೂರು ಅಡಕೆ ಮರಗಳನ್ನು ಕಡಿದುಹಾಕಿರುವ ದುಷ್ಟರು

ದಾವಣಗೆರೆ: ಅಡಕೆ ತೋಟಕ್ಕೆ ನುಗ್ಗಿ ಏನಿಲ್ಲವೆಂದರೂ ಮುನ್ನೂರು ಅಡಕೆ ಮರಗಳನ್ನು ಕಡಿದುಹಾಕಿರುವ ದುಷ್ಟರು

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 09, 2025 | 1:02 PM

Share

ನಾಗರಾಜ್ ದೂರು ದಾಖಲಿಸಿದ ಬಳಿಕ ಪೊಲೀಸರು ಅವರ ತೋಟಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ದುಷ್ಕರ್ಮಿಗಳನ್ನು ಹಿಡಿದು ಜೈಲಿಗೆ ಹಾಕುತ್ತಾರೆ, ಕೋರ್ಟ್ ಶಿಕ್ಷೆ ವಿಧಿಸುತ್ತದೆ, ಅದು ಅವರು ಮಾಡಿದ ಪಾಪದ ಕರ್ಮ. ಅದರೆ, ನಾಗರಾಜ್ ಪಟ್ಟ ಕಷ್ಟದ ಪಾಡೇನು? ಮರ ಕಡಿದ ದುಷ್ಟರಿಗೆ ಬೇಸಾಯ ಮಾಡೋದು ಎಷ್ಟು ಕಷ್ಟ ಎಂಬ ಕಿಂಚಿತ್ ಅರಿವೂ ಕೂಡ ಇರಲಿಕ್ಕಿಲ್ಲ.

ದಾವಣಗೆರೆ, ಆಗಸ್ಟ್ 9: ಈ ರೈತನ ಗೋಳು ಮನಕಲುಕುತ್ತದೆ. ಇವರ ಹೆಸರು ನಾಗರಾಜ್ (Nagaraj) ಮತ್ತು ಜಿಲ್ಲೆಯ ಜಗಳೂರು ತಾಲೂಕಿನ ಕಾಟೇರಹಳ್ಳಿ ಗ್ರಾಮದ ನಿವಾಸಿ. ನಿನ್ನೆ ರಾತ್ರಿ ನಾಗರಾಜ್ ಅಡಕೆ ತೋಟಕ್ಕೆ ನುಗ್ಗಿರುವ ದುಷ್ಕರ್ಮಿಗಳು ಸುಮಾರು 300 ಮರಗಳನ್ನು ನಿರ್ದಯತೆ ಮತ್ತು ನಿಷ್ಕರುಣೆಯಿಂದ ಕಡಿದು ಹಾಕಿದ್ದಾರೆ. ಮಳೆಯನ್ನೇ ನೆಚ್ಚಿಕೊಂಡು ಬೇಸಾಯ ಮಾಡುವ ಪ್ರದೇಶದಲ್ಲಿ ಅಡಕೆ ತೋಟ ಮಾಡಿಕೊಂಡಿದ್ದ ನಾಗರಾಜ್ ಸಾಲ ಸೋಲ ಮಾಡಿ ಮರಗಳಿಗೆ ಟ್ಯಾಂಕರ್​ಗಳ ಮೂಲಕ ನೀರು ಹೊಡೆಸಿದ್ದರು. ಅವರ ಶ್ರಮ ಕನಸು ಕೇವಲ ಒಂದು ರಾತ್ರಿಯಲ್ಲಿ ನುಚ್ಚುನೂರಾಗಿದೆ. ಅವರೊಂದಿಗೆ ವೈರತ್ವವಿದ್ದರೆ ಅದನ್ನು ಸಾಧಿಸಲು ಕೋರ್ಟ್​ ಕಚೇರಿಗಳಿವೆ, ಹೀಗೆ ಮರಗಳನ್ನು ಕಡಿಯುವುದು ಹೇಡಿತನ.

ಇದನ್ನೂ ಓದಿ:  Jet Fuel: ಅಡುಗೆ ಎಣ್ಣೆಯನ್ನು ಜೆಟ್ ಇಂಧನವಾಗಿ ಪರಿವರ್ತನೆ: ಭಾರತದಲ್ಲಿ ಇದೇ ಮೊದಲು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ