ನಮ್ಮ ತಂಡ ರೀಸರ್ಚ್ನಲ್ಲಿ ತೊಡಗಿದ್ದರಿಂದ ಅಕ್ರಮವನ್ನು ಬಯಲಿಗೆಳೆಯುವುದು ತಡವಾಯಿತು: ಸಿದ್ದರಾಮಯ್ಯ
ಪ್ರತಿಯೊಂದು ದಾಖಲೆಯನ್ನು ರಾಹುಲ್ ಗಾಂಧಿಯವರು ಮಾಧ್ಯಮ ಮತ್ತು ಜನರ ಮುಂದೆ ಇಟ್ಟಿರುವುದರಿಂದ ಕಾಂಗ್ರೆಸ್ ಗೆ ಸುಳ್ಳು ಹೇಳುವಂಥದ್ದೇನೂ ಇಲ್ಲ, ಮತದಾರ ಪಟ್ಟಿಯ ಪ್ರಕಾರ ಮಹದೇವಪುರ ಮತಕ್ಷೇತ್ರದ ರೂಂಮೊಂದರಲ್ಲಿ 80 ಜನ ವಾಸವಾಗಿದ್ದರು ಮತ್ತು ಅವರೆಲ್ಲ ಲೋಕ ಸಭಾ ಚುನಾವಣೆಯಲ್ಲಿ ವೋಟು ಮಾಡಿದ್ದಾರೆ, ಅದು ಹೇಗೆ ಒಂದು ರೂಮಲ್ಲಿ 80 ಜನ ಇರೋದು ಸಾಧ್ಯ ಅಂತ ಸಿದ್ದರಾಮಯ್ಯ ಕೇಳಿದರು.
ಮೈಸೂರು, ಆಗಸ್ಟ್ 9: ಮೈಸೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಈ ವರ್ಷ ಬಿಬಿಎಂಪಿ ಚುನಾವಣೆ ನಡೆಯುವುದರೊಳಗೆ ಬೆಂಗಳೂರಿನ ಎಲ್ಲ ವಾರ್ಡ್ಗಳ ಮತದಾರರ ಪಟ್ಟಿಯನ್ನು ಸರಿ ಮಾಡುತ್ತೇವೆ ಎಂದರು. ರಾಜ್ಯ ಚುನಾವಣಾ ಆಯೋಗದಲ್ಲಿ ರಾಜ್ಯದ ಅಧಿಕಾರಿಗಳಿದ್ದರೂ ಅವರು ಭಾರತೀಯ ಚುನಾವಣಾ ಆಯೋಗದ ಅಧೀನದಲ್ಲಿ ಕೆಲಸ ಮಾಡುತ್ತಾರೆ ಎಂದು ಶಿವಕುಮಾರ್ ಹೇಳಿದರು. ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸೀಟುಗಳು ಹೇಗೆ ಸಿಗುತ್ತಿದ್ದವು ಎಂದು ಬಿಜೆಪಿಯವರು ಕೇಳುತ್ತಿದ್ದಾರೆ ಎಂದಾಗ ಸಿದ್ದರಾಮಯ್ಯ, ನಮ್ಮ ಆಂತರಿಕ ಸಮೀಕ್ಷೆ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 16 ಸೀಟು ಬರಬೇಕಿತ್ತು, ಕೇವಲ 9 ಸೀಟು ಸಿಕ್ಕಾಗ ಸಂಶಯ ಬಂದು ರಾಹುಲ್ ಗಾಂಧಿಯವರು ರೀಸರ್ಚ್ ತಂಡದ ಮೂಲಕ ತನಿಖೆ ಮಾಡಿಸಿದರು, ಅಕ್ರಮ ನಡೆದಿರುವ ಎಲ್ಲ ದಾಖಲೆಗಳ ಬಗ್ಗೆ ಮಾಧ್ಯಮಗಳಿಗೆ ಪ್ರಾತ್ಯಕ್ಷಿತೆಯನ್ನು ನೀಡಿದ್ದಾರೆ, ತಪ್ಪು ಮಾಡಿರುವ ಬಿಜೆಪಿ ನಾಯಕರು ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಬಂದುಹೋದ ನಂತರ ಬಯಲಾಯಿತು ವಿಕ್ಟೋರಿಯ ಆಸ್ಪತ್ರೆಯ ನಿಜಬಣ್ಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

