ವಿಜಯಪುರದಲ್ಲಿ ಭಾರೀ ಮಳೆ, ಹೊರವಲಯದ ಮನೆಗಳಿಗೆ ನುಗ್ಗಿದ ನೀರು, ಅವೈಜ್ಞಾನಿಕ ಕಾಮಗಾರಿಯ ದೂರು
ಒಂದಷ್ಟು ಜನ ನೀರು ಹರಿದು ಹೋಗುವಂತೆ ಮಾಡಲು ಕಷ್ಟಪಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಬೇಕಾಬಿಟ್ಟಿ ವರ್ತನೆ ಹೇವರಿಕೆ ಹುಟ್ಟಿಸುತ್ತದೆ. ಅಸಲಿಗೆ, ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಭಯ ಇಲ್ಲದಂತಾಗಿದೆ. ಭ್ರಷ್ಟಾಚಾರ ನಡೆಸಲು ಮುಕ್ತ ಅವಕಾಶ ನೀಡಿ ಅದರಲ್ಲಿ ಪರ್ಸೆಂಟೇಜ್ ನಿಗದಿ ಮಾಡುವ ಜನಪ್ರತಿನಿಧಿಗಳಿಗೆ ಯಾವ ಆಧಿಕಾರಿ ತಾನೇ ಹೆದರಿಯಾನು?
ವಿಜಯಪುರ, ಆಗಸ್ಟ್ 9: ನಿನ್ನೆ ರಾತ್ರಿ ವಿಜಯಪುರದಲ್ಲೂ (Vijayapura) ಭಾರಿ ಮಳೆಯಾಗಿದೆ. ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ವಿಜಯಪುರ ನಗರದ ಹೊರಭಾಗದಲ್ಲಿರುವ ರಾಮನಗರ ಮತ್ತು ಕನ್ನಾನ್ ನಗರ ಎಂಬ ಪ್ರದೇಶಗಳು ಜಲಾವೃತಗೊಂಡು ಮನೆಗಳ ಒಳಗೂ ನೀರು ಹೊಕ್ಕಿದೆ. ಕೆಲವು ಮನೆಗಳಲ್ಲಿ ಒಂದೂವರೆ ಅಡಿಗಳಷ್ಟು ನೀರು ಹೊಕ್ಕಿರುವುದರಿಂದ ವಸ್ತುಗಳು ತೋಯ್ದು ಹಾಳಾಗಿವೆ. ರಸ್ತೆ ನಿರ್ಮಾಣ ಕಾಮಗಾರಿ ನಡೆಸುವಾಗ ನೀರು ಹರಿದುಹೋಗುವ ಔಟ್ಲೆಟ್ ಗಳು ಬಂದ್ ಆಗಿರುವುದರಿಂದ ಕೋಟೆಗೋಡೆ ಕಂದಕಕ್ಕೆ ಹರಿದು ಹೋಗಬೇಕಿದ್ದ ನೀರು ಜನವಸತಿ ಪ್ರದೇಶಗಳಲ್ಲಿ ಶೇಖರಣೆಗೊಂಡಿದೆ ಎಂದು ನಮ್ಮ ವರದಿಗಾರ ಹೇಳುತ್ತಾರೆ.
ಇದನ್ನೂ ಓದಿ: Bengaluru Metro Pillar Collapse: ವಿಚಾರಣೆ ವೇಳೆ ಅವೈಜ್ಞಾನಿಕ ಕಾಮಗಾರಿ ನಿರ್ಲಕ್ಷ್ಯವನ್ನು ಒಪ್ಪಿಕೊಳ್ಳದ ಅಧಿಕಾರಿಗಳು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

