AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯ ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ

ಹುಬ್ಬಳ್ಳಿಯ ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ

ಸಂಜಯ್ಯಾ ಚಿಕ್ಕಮಠ
| Edited By: |

Updated on:Feb 16, 2026 | 7:04 PM

Share

ಹುಬ್ಬಳ್ಳಿಯ ಸುಪ್ರಸಿದ್ಧ ಸಿದ್ಧಾರೂಢ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಹರಿದುಬಂದಿದ್ದಾರೆ. ಈ ಹಿನ್ನೆಲೆಯಲ್ಲಿ, ದೇವಸ್ಥಾನ ಸಮಿತಿ, ತಾಲೂಕಾಡಳಿತ ಮತ್ತು ಜಿಲ್ಲಾಡಳಿತವು ಭಕ್ತರಲ್ಲಿ ಶಾಂತಿ ಕಾಪಾಡಿಕೊಳ್ಳಲು, ಸಹಕರಿಸಲು ಹಾಗೂ ತಮ್ಮ ಸ್ಥಳಗಳಲ್ಲಿರಲು ಮನವಿ ಮಾಡಿದೆ. ಅಹಿತಕರ ಘಟನೆಗಳನ್ನು ತಪ್ಪಿಸಲು ವೈದ್ಯರು ಮತ್ತು ತಜ್ಞರ ತಂಡವನ್ನು ನಿಯೋಜಿಸಲಾಗಿದೆ.

ಹುಬ್ಬಳ್ಳಿ, ಫೆಬ್ರವರಿ 16: ಸುಪ್ರಸಿದ್ಧ ಸಿದ್ಧಾರೂಢರ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತಾದಿಗಳು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದಾರೆ. ಎತ್ತ ನೋಡಿದರೂ ಜನ ಸಾಗರವೇ ಕಾಣುತ್ತಿದ್ದು, ಸುಮಾರು ಐದು ಲಕ್ಷ ಭಕ್ತರು ರಥೋತ್ಸವ ಕಣ್ತುಂಬಿಕೊಂಡಿದ್ದಾರೆ. ರಥೋತ್ಸವದ ವೇಳೆ ಉತ್ತುತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಣೆ ಮಾಡಲಾಗಿದ್ದು, ಸಿದ್ದಾರೂಢ ಮಹರಾಜ ಕಿ ಜೈ ಎಂಬ ಘೋಷಣೆಗಳು ಭಕ್ತರಿಂದ ಮೊಳಗಿವೆ. ಮಹಾರಥೋತ್ಸವ ಹಿನ್ನೆಲೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಶೇಷ ಸೇವೆ ನಡೆದಿದ್ದು, ಭಕ್ತರಿಗೆ ನಿನ್ನೆ ಮತ್ತು ಇಂದು ಮುಂಜಾನೆ ಸೇರಿ ಒಂದು ಲಕ್ಷ ಸೆಟ್ ದೋಸೆ ವಿತರಣೆ ಮಾಡಲಾಗಿದೆ. ರಸ್ತೆಯುದ್ದಕ್ಕೂ ಅನ್ನ ಪ್ರಸಾದ, ಮಜ್ಜಿಗೆ, ಹಣ್ಣುಗಳ ವಿತರಣೆ ಭರದಿಂದ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Published on: Feb 16, 2026 07:02 PM