ಬಾಳೆ ಹಣ್ಣಿನ ಮೇಲೆ ಜೈ ಆರ್‌ಸಿಬಿ, ಜೈ ಡಿ ಬಾಸ್: ಸಿದ್ಧಾರೂಢರ ರಥಕ್ಕೆ ಎಸೆದ ಯುವಕರು
ಮಹಾಶಿವರಾತ್ರಿಯಂದು ಹುಬ್ಬಳ್ಳಿಯಲ್ಲಿ ಜರುಗಿದ ಶ್ರೀ ಸಿದ್ಧಾರೂಢರ ರಥೋತ್ಸವಕ್ಕೆ 6 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದರು. ವಿವಿಧ ರಾಜ್ಯಗಳಿಂದ ಭಕ್ತರು ಬಂದಿದ್ದರು. ಆದರೆ, ಕೆಲ ಯುವಕರು ರಥಕ್ಕೆ ಬಾಳೆಹಣ್ಣುಗಳನ್ನು ಎಸೆದಿದ್ದು ವಿಶೇಷವಾಗಿತ್ತು. ಬಾಳೆಹಣ್ಣುಗಳ ಮೇಲೆ "ಜೈ ಆರ್‌ಸಿಬಿ, ಜೈ ಡಿಬಾಸ್" ಎಂದು ಬರೆದಿತ್ತು. ಈ ಘಟನೆ ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಹಾ ಶಿವರಾತ್ರಿ ನಿಮಿತ್ಯ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ರಥೋತ್ಸವ ಜರುಗಿತು. ರಥೋತ್ಸವದಲ್ಲಿ 6 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಶ್ರೀ ಸಿದ್ಧಾರೂಢರು ಉತ್ತರ ಕರ್ನಾಟಕದ ಜನರ ಆರಾಧ್ಯ ದೇವರಾಗಿದ್ದಾರೆ. ಸಿದ್ಧಾರೂಢರ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಮಹಾರಾಷ್ಟ್ರ, ಗೋವಾ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು. ಕೆಲ ಯುವಕರು ಬಾಳೆ ಹಣ್ಣಿನ ಮೇಲೆ ರಥಕ್ಕೆ ಜೈ ಆರ್‌ಸಿಬಿ, ಜೈ ಡಿಬಾಸ್ ಅಂತ ಬರೆದು ಸಿದ್ಧಾರೂಢರ ರಥಕ್ಕೆ ಎಸೆದರು. ಯುವಕರು ಜೈ ಆರ್‌ಸಿಬಿ, ಜೈ ಡಿಬಾಸ್ ಅಂತ ಬರೆದಿರುವ ಬಾಳೆಹಣ್ಣು ಎಸೆದಿರುವ ದೃಶ್ಯ ಟಿವಿ9 ಕ್ಯಾಮೆರಾದಲ್ಲಿ ಸೆರೆಯಾಗಿದೆ.
Latest Videos

ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್

ಗುಜರಾತ್ನಲ್ಲಿ ಐಎಎಫ್ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ

6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
