Daily Devotional: ಶಿವರಾತ್ರಿ ಅಮಾವಾಸ್ಯೆ ಏನು ಮಾಡಬೇಕು
ಅಮಾವಾಸ್ಯೆ ಹಿಂದೂ ಧರ್ಮದಲ್ಲಿ ವಿಶೇಷ ದಿನ. ಚಂದ್ರನ ಅಂಶ ಕಡಿಮೆ ಇರುವುದರಿಂದ ಪೂರ್ವಜರ ಆತ್ಮಗಳನ್ನು ಸ್ಮರಿಸಿ ತರ್ಪಣ ನೀಡುವುದು ವಾಡಿಕೆ. ಪವಿತ್ರ ಸ್ನಾನ, ಸೂರ್ಯನಿಗೆ ನಮಸ್ಕಾರ, ಅರಿಶಿನ ನೀರಿನಿಂದ ಮನೆ ತೊಳೆಯುವುದು, ಭಿಕ್ಷುಕರಿಗೆ ಮತ್ತು ಪ್ರಾಣಿಗಳಿಗೆ ಆಹಾರ ನೀಡುವುದು ಮುಖ್ಯ. ಅರಳಿ ಮರಕ್ಕೆ ದೀಪ ಹಚ್ಚಿ ಪಿತೃಗಳಿಗೆ ಅರ್ಪಣೆ ಮಾಡುವುದು ಸಹ ಒಳ್ಳೆಯದು. ಇದರಿಂದ ಕುಟುಂಬಕ್ಕೆ ರಕ್ಷಣೆ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಅಮಾವಾಸ್ಯೆಯ ದಿನವು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಚಂದ್ರನ ಅಂಶ ಕಡಿಮೆಯಿರುವ ಈ ದಿನ, ಪೂರ್ವಜರ ಆತ್ಮಗಳನ್ನು ಸ್ಮರಿಸುವುದು ಮತ್ತು ಅವರಿಗೆ ತರ್ಪಣ ನೀಡುವುದು ವಾಡಿಕೆ. ಪೂರ್ವಜರು ಪ್ರಾಣಿ-ಪಕ್ಷಿಗಳ ರೂಪದಲ್ಲಿ ಬಂದು ನಮ್ಮನ್ನು ಸಂಪರ್ಕಿಸುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ, ಈ ದಿನ ಭಿಕ್ಷುಕರು, ಪ್ರಾಣಿಗಳಿಗೆ ಆಹಾರ ನೀಡುವುದು ಮುಖ್ಯ. ಪವಿತ್ರವಾದ ಸ್ನಾನ, ಸೂರ್ಯನಿಗೆ ನಮಸ್ಕಾರ, ಅರಿಶಿನದ ನೀರಿನಿಂದ ಮನೆ ತೊಳೆಯುವುದು ಮುಂತಾದ ಕ್ರಿಯೆಗಳನ್ನು ಮಾಡುವುದು ಸಹ ಒಳ್ಳೆಯದು. ಅರಳಿ ಮರಕ್ಕೆ ಭೇಟಿ ನೀಡಿ ದೀಪ ಹಚ್ಚುವುದು ಮತ್ತು ಪಿತೃಗಳಿಗೆ ಅರ್ಪಣೆ ಮಾಡುವುದು ಸಹ ಅಮಾವಾಸ್ಯೆಯ ಆಚರಣೆಯ ಭಾಗವಾಗಿದೆ. ಈ ಆಚರಣೆಗಳು ಕುಟುಂಬಕ್ಕೆ ರಕ್ಷಣೆ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.