WPL 2025: ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್‌ಸಿಬಿ ಬ್ಯಾಟರ್; ವಿಡಿಯೋ ನೋಡಿ
WPL 2025, RCB W vs GG: ಆರ್‌ಸಿಬಿ ಇನ್ನಿಂಗ್ಸ್ನ 12ನೇ ಓವರ್‌ನಲ್ಲಿ ಮೇಘನಾ ಸಿಂಗ್ ಎಸೆದ ಚೆಂಡನ್ನು ರಾಘವಿ ಬಿಶ್ಟ್ ಕವರ್ಸ್‌ನಲ್ಲಿ ನಿಂತಿದ್ದ ನಾಯಕಿ ಆಶ್ಲೀ ಗಾರ್ಡ್ನರ್ ಕಡೆಗೆ ಆಡಿದರು. ಗಾರ್ಡ್ನರ್ ಸುಲಭವಾಗಿ ಕ್ಯಾಚ್ ತೆಗೆದುಕೊಳ್ಳಬಹುದಿತ್ತು. ಆದರೆ ಗಾರ್ಡ್ನರ್ ಅವರಿಗೆ ಈ ಸುಲಭ ಕ್ಯಾಚ್ ಅನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಇದನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆತಿಥೇಯ ಆರ್‌ಸಿಬಿ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಹಣಾಹಣಿಯಲ್ಲಿ ಮತ್ತೊಮ್ಮೆ ಆರ್‌ಸಿಬಿ ಬ್ಯಾಟಿಂಗ್ ವಿಫಲವಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡದ ಅಗ್ರ ಕ್ರಮಾಂಕ ಮತ್ತೊಮ್ಮೆ ಶೋಚನೀಯವಾಗಿ ವಿಫಲವಾಯಿತು. ಆದಾಗ್ಯೂ, ಕನಿಕಾ ಅಹುಜಾ ಮತ್ತು ರಾಘವಿ ಬಿಶ್ತ್ ಒಟ್ಟಾಗಿ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರೂ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತಿದ್ದರು. ಆದರೆ 12 ನೇ ಓವರ್‌ನಲ್ಲಿ ಪರಿಸ್ಥಿತಿ ಬದಲಾಗಿ ರಾಘವಿ ಬಿಶ್ಟ್ ಔಟಾದರು. ಆದರೆ ಅವರು ಔಟಾದ ರೀತಿ ಅತ್ಯಂತ ವಿಚಿತ್ರವಾಗಿದೆ.
ವಿಚಿತ್ರ ರೀತಿಯಲ್ಲಿ ಔಟಾದ ಆರ್‌ಸಿಬಿ ಬ್ಯಾಟರ್
ವಾಸ್ತವವಾಗಿ ಆರ್‌ಸಿಬಿ ಇನ್ನಿಂಗ್ಸ್ನ 12ನೇ ಓವರ್‌ನಲ್ಲಿ ಮೇಘನಾ ಸಿಂಗ್ ಎಸೆದ ಚೆಂಡನ್ನು ರಾಘವಿ ಬಿಶ್ಟ್ ಕವರ್ಸ್‌ನಲ್ಲಿ ನಿಂತಿದ್ದ ನಾಯಕಿ ಆಶ್ಲೀ ಗಾರ್ಡ್ನರ್ ಕಡೆಗೆ ಆಡಿದರು. ಗಾರ್ಡ್ನರ್ ಸುಲಭವಾಗಿ ಕ್ಯಾಚ್ ತೆಗೆದುಕೊಳ್ಳಬಹುದಿತ್ತು. ಆದರೆ ಗಾರ್ಡ್ನರ್ ಅವರಿಗೆ ಈ ಸುಲಭ ಕ್ಯಾಚ್ ಅನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಇದನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾದರು. ಆದರೆ ಇತ್ತ ಕ್ಯಾಚ್ ಕೈಚೆಲ್ಲಿದನ್ನು ನೋಡಿದ ರಾಘವಿ ರನ್‌ಗಾಗಿ ಓಡುವ ತಪ್ಪನ್ನು ಮಾಡಿದರು. ಇದನ್ನು ಗಮನಿಸಿದ ಮಿಡ್-ಆಫ್ ಫೀಲ್ಡರ್ ಭಾರತಿ ಫೂಲ್ಮಾಲಿ ಬೇಗನೆ ಬಂದು ಚೆಂಡನ್ನು ಹಿಡಿದು ನೇರವಾಗಿ ಸ್ಟಂಪ್‌ಗಳತ್ತ ಎಸೆದರು. ಹೀಗಾಗಿ ಸುಲಭ ಕ್ಯಾಚ್ ಕೈಚೆಲ್ಲಿದ ಹೊರತಾಗಿಯೂ ರಾಘವಿ ರನೌಟ್ ಆಗಬೇಕಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ

ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್ಗೆ ಸೇರ್ಪಡೆ

ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್ಡಿಕೆಯನ್ನು ಭೇಟಿಯಾದ ಸತೀಶ್

Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
