ನಾನ್ಯಾಕೆ ಬೇರೆ ಧರ್ಮಕ್ಕೆ ಹೋಗಲಿ, ನನಗೆ ಮಾನವ ಧರ್ಮದ ಮೇಲೆ ಅಚಲ ನಂಬಿಕೆ: ಡಿಕೆ ಶಿವಕುಮಾರ್
ಕುಂಭಮೇಳ ಮತ್ತು ಜಾತಿಯ ನಡುವೆ ಎಲ್ಲಿಯ ಸಂಬಂಧ? ಇದು ಖಂಡಿತವಾಗಿಯೂ ಧರ್ಮದ ವಿಷಯವಲ್ಲ, ಪ್ರಯಾಗ್ರಾಜ್ ನಂತರ ತಾನು ಟಿ ನರಸೀಪುರದ ಕುಂಭಮೇಳದಲ್ಲೂ ಭಾಗಿಯಾಗಿದ್ದೆ, ನಮ್ಮ ದೇಶ ಪವಿತ್ರ ನದಿಗಳ ನಾಡು, ನೀರಿಗೆ ಜಾತಿ, ಧರ್ಮವಿಲ್ಲ. ಮಹಾಕುಂಭಮೇಳವನ್ನು ಹೇಗೆ ಆಯೋಜಿಸಿದರು, ಗಂಗಾ ಅರತಿ ಹೇಗೆ ವ್ಯವಸ್ಥೆ ಮಾಡಿದರು ಅನ್ನೋದನ್ನೆಲ್ಲ ನೋಡ್ಕೊಂಡು ಬಂದಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು, ಫೆ 27: ಹಿಂದೂ ಅಗಿ ಹುಟ್ಟಿದ್ದೇನೆ ಹಿಂದೂವಾಗೇ ಸಾಯ್ತೀನಿ ಅಂತ ಹೇಳಿರುವುದನ್ನು ಬಿಜೆಪಿ ಸ್ವಾಗತಿಸುತ್ತಿದೆ ಎಂದಿದ್ದಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಧರ್ಮ ಬದಲಿಸುವಂಥ ಕೆಲಸಕ್ಕೆ ತಾನ್ಯಾಕೆ ಮುಂದಾಗಬೇಕು, ತನಗೆ ಮಾನವ ಧರ್ಮದ ಮೇಲೆ ವಿಶ್ವಾಸವಿದೆ, ವಿಶ್ವದಲ್ಲಿ ಶಾಂತಿ ನೆಲಸಲು ಮಾನವ ಧರ್ಮವೇ ಕಾರಣವಾಗುತ್ತದೆ ಎಂದು ಹೇಳಿದರು. ಧರ್ಮಕ್ಕಾಗಿ ಯಾರೂ ಅರ್ಜಿ ಗುಜರಾಯಿಸಿ ಹುಟ್ಟಲ್ಲ, ಧರ್ಮ ಅತ್ಯಂತ ವೈಯಕ್ತಿಕ ವಿಷಯ, ಡಾ ಬಿಅರ್ ಅಂಬೇಡ್ಕರ್ ಅವರು ಹಿಂದೂವಾಗಿ ಹುಟ್ಟಿ ಭೌದ್ಧ ಧರ್ಮಕ್ಕೆ ಮತಾಂತರಗೊಂಡರು, ಅದು ಅವರ ವೈಯಕ್ತಿವಾದ ವಿಷಯ, ಯಾರಾದರೂ ಪ್ರಶ್ನಿಸಲಾದೀತೆ ಎಂದು ಶಿವಕುಮಾರ್ ಕೇಳಿದರು. ತಾನು ಕುಂಭಮೇಳಕ್ಕೆ ಹೋಗುವುದನ್ನು ರಾಜಕೀಕರಣ ಮಾಡೋದು ಬೇಡ ಅಂತ ಮೊದಲೇ ಹೇಳಿದ್ದೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಾರೋ ಟ್ವೀಟ್ ಮಾಡಿದರೆ ನಾನು ಉತ್ತರ ಕೊಡಲ್ಲ, ಎದುರುಗಡೆ ಬಂದು ಮಾತಾಡಿದರೆ ಉತ್ತರಿಸುತ್ತೇನೆ: ಶಿವಕುಮಾರ್