ಎಐಸಿಸಿ ಆಕ್ಷೇಪಣೆಗಳಿಗೆ, ‘ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂವಾಗೇ ಸಾಯುತ್ತೇನೆ’ ಎಂದ ಡಿಕೆ ಶಿವಕುಮಾರ್
ಶಿವಕುಮಾರ್ ಪಕ್ಕಾ ದೈವಭಕ್ತ ಮತ್ತು ಎಲ್ಲ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುತ್ತಾರೆ. ಅವರ ಹಿಂದೂ ಆಚರಣೆಗಳನ್ನೇ ಎಐಸಿಸಿ ಪ್ರಶ್ನಿಸುತ್ತದೆ ಅಂದರೆ ಧರ್ಮಗಳ ವಿಷಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಅನ್ನೋದು ಸ್ಪಷ್ಟವಾಗುತ್ತದೆ. ಜಾತ್ಯಾತೀತ ಪಕ್ಷ ಮತ್ತು ಸಂವಿಧಾನವನ್ನು ಬಿಟ್ಟು ಬೇರೆ ಏನನ್ನೂ ಯೋಚಿಸಲ್ಲ ಎನ್ನುವ ಕಾಂಗ್ರೆಸ್ನ ಕೀಳು ಮನಸ್ಥಿತಿ ಕನ್ನಡಿಗರಲ್ಲಿ ಹೇವರಿಕೆ ಹುಟ್ಟಿಸಿದೆ.
ಬೆಂಗಳೂರು, ಫೆ. 27: ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಕಾದಾಟ ಶುರುವಾಗಿದೆ. ಶಿವಕುಮಾರ್ ಒಬ್ಬ ಹಿಂದೂ ಆಗಿ ಹಿಂದೂ ಧರ್ಮದ ಪದ್ಧತಿ, ಸಂಸ್ಕಾರಗಳಲ್ಲಿ ಭಾಗಿಯಾಗಿದ್ದು ಪಕ್ಷದ ಸ್ಥಳೀಯ ನಾಯಕರಿಗೆ ಸರಿ ಕಾಣುತ್ತಿಲ್ಲ. ಶಿವಕುಮಾರ್ ತಮ್ಮ ಪತ್ನಿ ಜೊತೆ ಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯ ಸ್ನಾನ ಮಾಡಿದ್ದು, ಅಲ್ಲಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿರುವುದಕ್ಕೆ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶಂಸಿರುವ ಜೊತೆಗೆ ನಿನ್ನೆ ಅವರು ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಪ್ರತಿವರ್ಷ ಮಹಾಶಿವರಾತ್ರಿ ಸಂದರ್ಭದಲ್ಲಿ ಆಯೋಜಿಸುವ ಮತ್ತು ಗೃಹ ಸಚಿವ ಅಮಿತ್ ಶಾ ಸಹ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವರಿಷ್ಠರ ಕಣ್ಣು ಕೆಂಪಾಗಿಸಿದೆ. ಅವರ ನಡೆಯನ್ನು ಟ್ವೀಟ್ ಮೂಲಕ ತೀವ್ರವಾಗಿ ಆಕ್ಷೇಪಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪಿವಿ ಮೋಹನ್ ಗೆ ಖಡಕ್ಕಾಗಿ ಉತ್ತರಿಸಿರುವ ಶಿವಕುಮಾರ್, ‘ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ’ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಬೇಗ ನಿಲುವು ಪ್ರಕಟಿಸಲಿ ಅಂತ ಮನವಿ ಮಾಡಲಾಗಿದೆ: ಶಿವಕುಮಾರ್