ನಾಡಿನ ಹಿರಿಯ ಮುತ್ಸದ್ದಿ ಬಿಎಸ್ ಯಡಿಯೂರಪ್ಪಗೆ ಇವತ್ತು 83ನೇ ಹುಟ್ಟುಹಬ್ಬದ ಸಂಭ್ರಮ
ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಸೇವೆ ಸಲ್ಲಿಸಿರುವ ಏಕೈಕ ರಾಜಕಾರಣಿಯೆಂದರೆ ಬಿಎಸ್ ಯಡಿಯೂರಪ್ಪ. 2007, 2008, 2018 ಮತ್ತು 2019ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಇಬ್ಬರು ಗಂಡು ಮಕ್ಕಳು ರಾಜಕಾರದಲ್ಲಿದ್ದಾರೆ-ಬಿವೈ ರಾಘವೇಂದ್ರ ಸಂಸದ ಮತ್ತು ಬಿವೈ ವಿಜಯೇಂದ್ರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ.
ಬೆಂಗಳೂರು, ಫೆ.27: ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಮತ್ತು ನಾಡು ಕಂಡ ಉತ್ತಮ ಮುತ್ಸದ್ದಿಗಳಲ್ಲಿ ಒಬ್ಬರಾಗಿರುವ ಬಿಎಸ್ ಯಡಿಯೂರಪ್ಪ ಇಂದು ತಮ್ಮ 83 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಫ್ಯಾಮಿಲಿ ಫಸ್ಟ್ ಎಂಬಂತೆ ಅವರ ಮಕ್ಕಳು ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ಅವರ ಮನೆಗೆ ಬಂದು ವಿಶ್ ಮಾಡಿದರು. ಮೊದಲಿನಂತೆ ಯಡಿಯೂರಪ್ಪನವರು ರಾಜಕಾರಣದಲ್ಲಿ ಸಕ್ರಿಯವಾಗಿಲ್ಲವಾದರೂ ರಾಜ್ಯ ಬಿಜೆಪಿ ಘಟಕದಲ್ಲಿ ಅವರ ಮಾತಿಗೆ ತೂಕ ಜಾಸ್ತಿ. ರಾಜ್ಯದ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಅವರ ಸಲಹೆ ಸೂಚನೆ ಇಲ್ಲದೆ ಹೈಕಮಾಂಡ್ ಕೂಡ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಡಿಯೂರಪ್ಪ ಹುಟ್ಟುಹಬ್ಬ ಆಚರಣೆ ವಿಷಯವೇ ಅಲ್ಲ, ಚರ್ಚೆ ಕೂಡ ಆಗಿಲ್ಲ: ಬಿವೈ ವಿಜಯೇಂದ್ರ
Latest Videos