ಯಡಿಯೂರಪ್ಪ ಹುಟ್ಟುಹಬ್ಬ ಆಚರಣೆ ವಿಷಯವೇ ಅಲ್ಲ, ಚರ್ಚೆ ಕೂಡ ಆಗಿಲ್ಲ: ಬಿವೈ ವಿಜಯೇಂದ್ರ
ವಿಧಾನಸಭಾ ಅಧಿವೇಶನದ ನಂತರ ವಕ್ಫ್ ವಿರುದ್ಧ ಎರಡನೇ ಹಂತದ ಹೋರಾಟ ಮುಂದುವರಿಸುವುದಾಗಿ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ವಿಜಯೇಂದ್ರ, ಅವರು ಹೇಳಿದ್ದು ಗೊತ್ತಿಲ್ಲ, ಅವರು ಪ್ರತಿಭಟನೆ ಮಾಡೋದಾದರೆ ಮಾಡಲಿ, ಪಕ್ಷದ ಬಲವರ್ಧನೆ ತಮ್ಮ ಮುಂದಿರುವ ಆದ್ಯತೆಯಾಗಿದೆ, ವಕ್ಫ್ ವಿರುದ್ಧ ಹೋರಾಟವೂ ಮುಂದುವರಿಯುತ್ತದೆ, ಸದಾ ರೈತರ ಪರವಾಗಿ ನಿಲ್ಲುತ್ತೇವೆ ಎಂದರು.
ಬೆಂಗಳೂರು: ನಗರದಲ್ಲಿಂದು ತಮ್ಮ ತಂದೆ ಬಿಎಸ್ ಯಡಿಯೂರಪ್ಪನವರ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಯಡಿಯೂರಪ್ಪನವರ ಹುಟ್ಟಯಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂಬ ಪ್ರಸ್ತಾವನೆಯೇ ಇಲ್ಲ, ಅಧ್ಯಕ್ಷನಾಗಿ ತಾನು ಕೇವಲ ಪಕ್ಷದ ಸಂಘಟನೆಯ ಬಗ್ಗೆ ಮಾತ್ರ ಯೋಚಿಸುತ್ತಿರುವುದಾಗಿ ಹೇಳಿದರು. ರಾಷ್ಟ್ರೀಯ ನಾಯಕರು ಅನುಮೋದನೆ ನೀಡಿದರೆ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಲಾಗುವುದೇ ಎಂದಿದ್ದಕ್ಕೆ ಅವರು, ಅದು ವಿಷಯವೇ ಅಲ್ಲ, ಅದರ ಬಗ್ಗೆ ಚರ್ಚೆಯೇ ಇಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದಿಢೀರ್ ಮೋದಿ ಭೇಟಿಯಾದ ವಿಜಯೇಂದ್ರ: ವಿರೋಧಿಗಳಿಗೆ ಕೊಟ್ಟ ಸಂದೇಶವೇನು?
Latest Videos