Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಕಡತ ಪಾಕ್, ಚೀನಾಕ್ಕೆ ಕೊಡಲ್ಲವೆಂದು ಏನ್ ಗ್ಯಾರಂಟಿ: ಕಾಂಟ್ರಾಕ್ಟರ್​​ ವಿರುದ್ದ ಉಪ ಲೋಕಾಯುಕ್ತ ಗರಂ

ಬೆಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಸ್ಕಾಂ ಮತ್ತು ಜಲಮಂಡಳಿ ಸೇರಿದಂತೆ 45 ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಕಾಂಟ್ರಾಕ್ಟರ್ ಕೈಯಲ್ಲಿ ಬೆಸ್ಕಾಂ ಕಚೇರಿ ಕಡತ ನೋಡಿದ ಉಪ ಲೋಕಾಯುಕ್ತರು, ನೀವು ನಮ್ಮ ಸರ್ಕಾರಿ ಕಡತ ಚೀನಾ, ಪಾಕಿಸ್ತಾನಕ್ಕೆ ಕೊಡಲ್ಲ ಅಂತ ಏನು ಗ್ಯಾರಂಟಿ ಎಂದು ಗರಂ ಆಗಿದ್ದಾರೆ.

ಸರ್ಕಾರಿ ಕಡತ ಪಾಕ್, ಚೀನಾಕ್ಕೆ ಕೊಡಲ್ಲವೆಂದು ಏನ್ ಗ್ಯಾರಂಟಿ: ಕಾಂಟ್ರಾಕ್ಟರ್​​ ವಿರುದ್ದ ಉಪ ಲೋಕಾಯುಕ್ತ ಗರಂ
ಸರ್ಕಾರಿ ಕಡತ ಪಾಕ್, ಚೀನಾಕ್ಕೆ ಕೊಡಲ್ಲವೆಂದು ಏನ್ ಗ್ಯಾರಂಟಿ: ಕಾಂಟ್ರಾಕ್ಟರ್​​ ವಿರುದ್ದ ಉಪ ಲೋಕಾಯುಕ್ತ ಗರಂ
Follow us
Vinayak Hanamant Gurav
| Updated By: ಗಂಗಾಧರ​ ಬ. ಸಾಬೋಜಿ

Updated on: Dec 19, 2024 | 8:13 PM

ಬೆಂಗಳೂರು, ಡಿಸೆಂಬರ್​ 19: ಇಂದು ನಗರದ 45 ಕಡೆ ಏಕಕಾಲದಲ್ಲಿ ಬೆಸ್ಕಾಂ ಮತ್ತು ಜಲಮಂಡಳಿ ಸೇರಿ ಇತರೆ ಕಚೇರಿಗಳ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎಂ.ಜಿ.ರಸ್ತೆಯ ಬೆಸ್ಕಾಂ ಕಚೇರಿ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ಸರ್ಕಾರಿ ಕಡತ ತೆಗೆದುಕೊಂಡು‌ ಹೋಗುತ್ತಿದ್ದ ಕಾಂಟ್ರಾಕ್ಟರ್​​ ವಿರುದ್ದ ಉಪ ಲೊಕಾಯುಕ್ತ ಫುಲ್ ಗರಂ ಆಗಿದ್ದಾರೆ. ನೀವು ನಮ್ಮ ಸರ್ಕಾರಿ ಕಡತ ಚೀನಾ, ಪಾಕಿಸ್ತಾನಕ್ಕೆ ಕೊಡಲ್ಲ ಅಂತ ಏನು ಗ್ಯಾರಂಟಿ? ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಇನ್ನು  ಸರ್ಕಾರಿ ಕಡತ ತೆಗೆದುಕೊಂಡು‌ ಹೋಗುತ್ತಿದ್ದ ಕಾಂಟ್ರಾಕ್ಟರ್​​ ವಿರುದ್ಧ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್‌ ಕೇಸ್ ದಾಖಲಿಸುವಂತೆ ಉಪ ಲೋಕಾಯುಕ್ತ ಬಿ.ವೀರಪ್ಪ ಸೂಚನೆ ನೀಡಿದ್ದಾರೆ. ಬೆಸ್ಕಾಂ ಇಂಜಿನಿಯರ್ ರಾಜೇಶ್ ಎ1 ಆರೋಪಿ  ಮಾಡುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಸಾರ್ವಜನಿಕರಿಂದ ದೂರು: ಬೆಸ್ಕಾಂ, ಜಲಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಗುತ್ತಿಗೆದಾರ ಪವನ್, ಎಲೆಕ್ಟ್ರಿಕಲ್​ ಕೆವಿ‌ ರೆಡ್ಡಿ, ಜ್ಯೋತಿ ಎಲೆಕ್ಟ್ರಿಕ್ಸ್​ ರಾಕೇಶ್ ವಿರುದ್ದ ಕ್ರಿಮಿನಲ್ ಕೇಸ್​ಗೆ ಸೂಚಿಸಲಾಗಿದೆ. ಅದ್ಹೇಗೆ ಸರ್ಕಾರಿ ಕಡತ ಹೊರಗಡೆಯವರೆಗೆ ಕೊಡುತ್ತೀರಿ? ನಿಮ್ಮ ಮೇಲೆ ಕ್ರಿಮಿನಲ್‌ ಕೇಸ್ ಬೀಳುತ್ತೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.

ಸಮವಸ್ತ್ರ ಧರಿಸದ ಸಿಬ್ಬಂದಿಗೆ ಉಪ ಲೋಕಾಯುಕ್ತ ಬಿ. ವೀರಪ್ಪ ಫುಲ್ ಕ್ಲಾಸ್

ಇಂದಿರಾ ನಗರದ ಕೋಡಿಹಳ್ಳಿಯಲ್ಲಿರುವ ಬೆಸ್ಕಾಂ ಕಚೇರಿ ಮೇಲೆ ಕೂಡ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಜೀನ್ಸ್ ಪ್ಯಾಂಟ್, ಟೀ ಷರ್ಟ್ ಧರಿಸಿದ್ದ ಸಿಬ್ಬಂದಿಗೆ ಉಪ ಲೋಕಾಯುಕ್ತ ಬಿ. ವೀರಪ್ಪ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬೆಸ್ಕಾಂ ಪೂರ್ವ ವಿಭಾಗ ಇಂಜಿನಿಯರ್ ಕಚೇರಿಯಲ್ಲಿ ಪರಿಶೀಲನೆ ಮಾಡಲಾಗಿದೆ.

1.86 ಲಕ್ಷ ಲಂಚ ಪಡೆದು ಓಡಿ ಹೋಗಿತ್ತಿದ್ದ ಅಧಿಕಾರಿ

ಇನ್ನು ಗುತ್ತಿಗೆದಾರನಿಂದ 1.86 ಲಕ್ಷ ರೂ. ಲಂಚ ಪಡೆದು ಓಡಿ ಹೋಗಿತ್ತಿದ್ದ ಜಲಮಂಡಳಿ ಅಧಿಕಾರಿ ಲೋಕಾ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ದಾಳಿ ವೇಳೆ ರೆಡ್ ಹ್ಯಾಂಡ್ ಆಗಿ ಇಂದಿರಾ ನಗರ ಜಲಮಂಡಳಿ ಸಿನೀಯರ್ ಅಸಿಸ್ಟಂಟ್ ಚಿದಾನಂದ ಸಿಕ್ಕಿಬಿದ್ದಿದ್ದಾರೆ. ಜಲ ಮಂಡಳಿ ಗುತ್ತಿಗೆದಾರ ತಿಮ್ಮೇಗೌಡನಿಂದ ಚಿದಾನಂದ ಲಂಚ ಪಡೆದಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಮಾರಿಷಸ್​​ನಲ್ಲಿ ಭೋಜ್​ಪುರಿ ಹಾಡಿನ ಸ್ವಾಗತಕ್ಕೆ ಪ್ರಧಾನಿ ಮೋದಿ ಫಿದಾ!
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
ಮಾರಿಷಸ್ ತಲುಪಿದ ಪ್ರಧಾನಿ ಮೋದಿ: ಪ್ರಮುಖ ಒಪ್ಪಂದಗಳಿಗೆ ಸಹಿ ನಿರೀಕ್ಷೆ
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
‘ಅಪ್ಪು’ ಚಿತ್ರಕ್ಕೆ ರಮ್ಯಾ ನಾಯಕಿ ಆಗಬೇಕಿತ್ತು; ಅಚ್ಚರಿಯ ಮಾಹಿತಿ ರಿವೀಲ್
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿನ ನೀರಿನ ಸಮಸ್ಯೆಗೆ ಬಿತ್ತು ಬ್ರೇಕ್​
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
15 ಭರ್ಜರಿ ಸಿಕ್ಸ್​: ವಿಶ್ವ ದಾಖಲೆಯ ಸೆಂಚುರಿ ಸಿಡಿಸಿದ ಎಬಿ ಡಿವಿಲಿಯರ್ಸ್
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
ವಿದ್ಯಾರ್ಥಿಗಳು ತಾಂಬೂಲ ಚವಣ ಮಾಡುವುದ್ದು ನಿಷಿದ್ಧ ಯಾಕೆ ? ವಿಡಿಯೋ ನೋಡಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ
Daily horoscope: ಮಂಗಳವಾರ, ಈ ದಿನ 12 ರಾಶಿಗಳ ಫಲಾಫಲಗಳನ್ನು ತಿಳಿಯಿರಿ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ
ಡಿಆರ್​ಐ ಅಧಿಕಾರಿಗಳ ಕಸ್ಟಡಿ ಅಂತ್ಯ: ರನ್ಯಾ ರಾವ್ ಮತ್ತೆ ಜೈಲಿಗೆ
ಹೆಂಡತಿಯ ಪೋಸ್ಟಿಂಗ್​ಗಾಗಿ ಪಟ್ಟ ಪಡಿಪಾಟಲು ಹೇಳಿಕೊಂಡ: ಶರಣು ಸಲಗರ
ಹೆಂಡತಿಯ ಪೋಸ್ಟಿಂಗ್​ಗಾಗಿ ಪಟ್ಟ ಪಡಿಪಾಟಲು ಹೇಳಿಕೊಂಡ: ಶರಣು ಸಲಗರ
ಶ್ರೇಯಸ್ ಡ್ಯಾನ್ಸ್, ರಾಹುಲ್ ಗಿಫ್ಟ್; ಭಾರತದ ಸಂಭ್ರಮಾಚರಣೆಯ ಝಲಕ್ ಇಲ್ಲಿದೆ
ಶ್ರೇಯಸ್ ಡ್ಯಾನ್ಸ್, ರಾಹುಲ್ ಗಿಫ್ಟ್; ಭಾರತದ ಸಂಭ್ರಮಾಚರಣೆಯ ಝಲಕ್ ಇಲ್ಲಿದೆ