Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ಘಾನಿಸ್ತಾನ್ ತಂಡಕ್ಕೆ ರೋಚಕ ಜಯ... ಇರ್ಫಾನ್ ಪಠಾಣ್ ಜಿಲೇಬಿ ಡ್ಯಾನ್ಸ್

ಅಫ್ಘಾನಿಸ್ತಾನ್ ತಂಡಕ್ಕೆ ರೋಚಕ ಜಯ… ಇರ್ಫಾನ್ ಪಠಾಣ್ ಜಿಲೇಬಿ ಡ್ಯಾನ್ಸ್

ಝಾಹಿರ್ ಯೂಸುಫ್
|

Updated on: Feb 27, 2025 | 10:55 AM

Afghanistan vs England: ಲಾಹೋರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡ 325 ರನ್ ಕಲೆಹಾಕಿತು. ಅಫ್ಘಾನ್ ನೀಡಿದ 326 ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಜೋ ರೂಟ್ (120) ಸೆಂಚುರಿ ಬಾರಿಸಿದರು. ಇದಾಗ್ಯೂ ಇಂಗ್ಲೆಂಡ್ ತಂಡ 49.5 ಓವರ್​ಗಳಲ್ಲಿ 317 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಅಫ್ಘಾನಿಸ್ತಾನ್ ತಂಡ 8 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ತಂಡ ಜಯ ಸಾಧಿಸಿದೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಪರ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್ (177) ಭರ್ಜರಿ ಶತಕ ಸಿಡಿಸಿದ್ದರು. ಈ ಶತಕದ ನೆರವಿನಿಂದ ಅಫ್ಘಾನಿಸ್ತಾನ್ ತಂಡ 50 ಓವರ್​ಗಳಲ್ಲಿ 325 ರನ್ ಕಲೆಹಾಕಿತು. ಈ 326 ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಜೋ ರೂಟ್ (120) ಸೆಂಚುರಿ ಬಾರಿಸಿದರು. ಇದಾಗ್ಯೂ ಇಂಗ್ಲೆಂಡ್ ತಂಡ 49.5 ಓವರ್​ಗಳಲ್ಲಿ 317 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಅಫ್ಘಾನಿಸ್ತಾನ್ ತಂಡ 8 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ಅಫ್ಘಾನಿಸ್ತಾನ್ ತಂಡದ ಈ ರೋಚಕ ಗೆಲುವಿನ ಬೆನ್ನಲ್ಲೇ ಇರ್ಫಾನ್ ಪಠಾಣ್ ಅಫ್ಘಾನ್ ಸ್ಟೈಲ್ ಡ್ರೆಸ್​​ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಫ್ಘಾನಿಸ್ತಾನ್ ತಂಡವನ್ನು ಅಭಿನಂದಿಸಿದ್ದಾರೆ.

ಈ ವಿಡಿಯೋಗೆ ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಟಗಾರ ರಶೀದ್ ಖಾನ್ ಪ್ರತಿಕ್ರಿಯಿಸಿದ್ದು, ನಾನಿಲ್ಲದೇ ನೀವು ಡ್ಯಾನ್ಸ್ ಮಾಡಿದ್ದು ತಪ್ಪು ಎಂದು ಕಾಲೆಳೆದಿದ್ದಾರೆ. ಅಲ್ಲದೆ ಇರ್ಫಾನ್ ಪಠಾಣ್ ಅವರ ಬೆಂಬಲಕ್ಕೆ ಧನ್ಯವಾದವನ್ನು ಸಹ ಅರ್ಪಿಸಿದ್ದಾರೆ.

ಈ ಹಿಂದೆ 2023ರ ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದ ಅಫ್ಘಾನಿಸ್ತಾನ್ ತಂಡದ ಜೊತೆ ಇರ್ಫಾನ್ ಪಠಾಣ್ ಮೈದಾನದಲ್ಲೇ ಡ್ಯಾನ್ಸ್ ಮಾಡಿದ್ದರು. ಅಲ್ಲದೆ ಅಫ್ಘಾನಿಸ್ತಾನದ ಬಹುತೇಕ ಆಟಗಾರರು ಇರ್ಫಾನ್ ಪಠಾಣ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿಯೇ ಅಫ್ಘಾನ್ ತಂಡದ ಗೆಲುವನ್ನು ನೃತ್ಯದೊಂದಿಗೆ ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಸಂಭ್ರಮಿಸಿದ್ದಾರೆ.