ಬಹಳ ದಿನಗಳ ನಂತರ ಹುಟ್ಟೂರು ಬೂಕನಕೆರೆಗೆ ಭೇಟಿ ನೀಡಿ ದೇವಸ್ಥಾನದ ಕಾಮಗಾರಿ ವೀಕ್ಷಿಸಿದ ಬಿಎಸ್ ಯಡಿಯೂರಪ್ಪ
ಮುಂದಿನ ವಾರ ಅಂದರೆ ಫೆಬ್ರುವರಿ 27ರಂದು ಯಡಿಯೂರಪ್ಪನವರು 83 ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಇಳಿ ವಯಸ್ದಿನಲ್ಲೂ ಅವರು ಕಲ್ಯಾಣ ಮಂಟಪದ ಮೆಟ್ಟಿಲುಗಳನ್ನು ಬೇರೆಯವರ ನೆರವಿಲ್ಲದೆ ಹತ್ತಿಕೊಂಡು ಮೊದಲ ಮಹಡಿಗೆ ಹೋಗುತ್ತಾರೆ. ಮಾಜಿ ಪ್ರಧಾನಿ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ದೇವೇಗೌಡ ಅವರಿಗೆ ಈಗ 92ರ ಪ್ರಾಯ. ರಾಜ್ಯದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 77-ವರ್ಷ ವಯಸ್ಸಿನವರು.
ಮಂಡ್ಯ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಶಿವಮೊಗ್ಗ ಜಿಲ್ಲೆಯವರು, ಶಿಕಾರಿಪುರದಲ್ಲಿ ಹುಟ್ಟಿದವರು ಅಂತಲೇ ಬಹಳಷ್ಟು ಜನ ಅಂದುಕೊಂಡಿದ್ದಾರೆ. ಅದರೆ ಆವರು ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲ್ಲೂಕಿನ ಬೂಕನಕೆರೆಯವರು. ಅವರ ಪೂರ್ತಿ ಹೆಸರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಸ್ವಂತ ಊರಲ್ಲಿ ಯಡಿಯೂರಪ್ಪ ಶ್ರೀ ಕೈವಲೇಶ್ವರ ದೇವಸ್ಥಾನ ಕಟ್ಟಿಸುತ್ತಿದ್ದಾರೆ ಮತ್ತು ಇದರ ಜೊತೆಗೆ ದೇವಾಲಯದ ಕಲ್ಯಾಣ ಮಂಟಪ ಕಾಮಗಾರಿ ಕೂಡ ನಡೆಯುತ್ತಿದೆ. ಕಾಮಗಾರಿಯನ್ನು ವೀಕ್ಷಿಸಲು ಅವರು ಇಂದು ಊರಿಗೆ ಭೇಟಿ ನೀಡಿದ್ದರು. ದೇವಸ್ಥಾನ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವರೊಬ್ಬರು ನಿರ್ಮಾಣ ಕಾರ್ಯ ಯಾವ ಹಂತದಲ್ಲಿದೆ, ಇನ್ನೂ ಏನೆಲ್ಲ ಅಗಬೇಕಿದೆ ಅನ್ನೋದನ್ನು ವಿವರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ ಕಮಾಲ್: ಮೋದಿ, ನಡ್ಡಾಗೆ ಪತ್ರದ ಮೂಲಕ ಅಭಿನಂದನೆ ತಿಳಿಸಿದ ಯಡಿಯೂರಪ್ಪ