ನಾವು ಧರ್ಮಸ್ಥಳದೊಂದಿಗಿದ್ದೇವೆ ಸ್ಲೋಗನ್ ಹಾಕ್ಕೊಂಡು 200 ಕಾರುಗಳಲ್ಲಿ ಮಂಜುನಾಥನ ಸನ್ನಿಧಿಗೆ ಹೋಗುತ್ತಿದ್ದೇವೆ: ವಿಶ್ವನಾಥ್
ಹಲವು ಯೂಟ್ಯೂಬರ್ಗಳು ಧರ್ಮಸ್ಥಳ ಪ್ರಕರಣಗಳ ಬಗ್ಗೆ ವರದಿ ಮಾಡುತ್ತಿದ್ದಾರೆ, ಅವರಿಗೇನು ಗೊತ್ತಿದೆ ಧರ್ಮಸ್ಥಳದ ಬಗ್ಗೆ? ಶ್ರದ್ಧಾಕೇಂದ್ರಕ್ಕೆ ಅಪಪ್ರಚಾರ ಆಗುವುದನ್ನು ಹಿಂದೂ ಸಹಿಸಲಾರ ಎಂದು ಹೇಳಿದ ವಿಶ್ವನಾಥ್, ಅಲ್ಲಿಗೆ ಹೋಗುವ ಬಗ್ಗೆ ಒಂದು ಕರೆಯನ್ನು ಮಾತ್ರ ಕೊಟ್ಟಿದ್ದು, ಸುಮಾರು 250 ವಾಹನಗಳು ರೆಡಿಯಾಗಿವೆ, ಅದರೆ ಅಷ್ಟೊಂದು ಜನರನ್ನು ಹೇಗೆ ಕರೆದೊಯ್ಯುವುದು ಅಂತ ಚಿಂತೆಯಾಗಿದೆ ಎಂದರು.
ಚಿಕ್ಕಬಳ್ಳಾಪುರ, ಆಗಸ್ಟ್ 9: ಧರ್ಮಸ್ಥಳ (Dharmasthala) ಒಂದು ಶ್ರದ್ಧಾಕೇಂದ್ರ, ಮಂಜುನಾಥ ಸ್ವಾಮಿಯನ್ನು ಅಸಂಖ್ಯಾತ ಹಿಂದೂಗಳು ಆರಾಧಿಸುತ್ತಾರೆ, ಯಾರೋ ಒಬ್ಬರು ಶವಗಳನ್ನು ಹೂತಿದ್ದಾಗಿ ಹೇಳಿದ ಬಳಿಕ ಎಸ್ಐಟಿ ರಚನೆಯಾಗಿ ತನಿಖೆ ಶುರುವಾಗಿದೆ ಅದಕ್ಕೆ ತಮ್ಮ ವಿರೋಧವೇನೂ ಇಲ್ಲ, ಆದರೆ ಶವಗಳನ್ನು ಹೂತಿರುವೆನಂದು ಹೇಳಿರುವ ಸ್ಥಳಗಳಲ್ಲಿ ಉತ್ಖನನ ನಡೆಸಿ ಪರಿಶೀಲಿಸಲಾಗುತ್ತಿದೆ, 15 ಕಡೆ ತೋಡಿದರೂ ಒಂದು ಪುರುಷ ಅಸ್ಥಿಪಂಜರ ಮಾತ್ರ ಸಿಕ್ಕಿದೆ, ತನಿಖೆಯ ಭರದಲ್ಲಿ ಹಿಂದೂಗಳ ಭಾವನಗೆಗಳಿಗೆ ಧಕ್ಕೆಯಾಗಬಾರದು ಎಂದು ಯಲಹಂಕ ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ತಮ್ಮ ಕ್ಷೇತ್ರದಿಂದ 200 ಕಾರುಗಳಲ್ಲಿ ನಾವು ಧರ್ಮಸ್ಥಳದೊಂದಿಗಿದ್ದ್ದೇವೆ ಎಂಬ ಘೋಷಣೆಯೊಂದಿಗೆ ಕಾರಿಗೆ ಕೇಸರಿ ಧ್ವಜ ಕಟ್ಟಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ, ಅಲ್ಲಿ ಪೂಜೆಯನ್ನು ನೆರವೇರಿಸಿಕೊಂಡು ಮರುದಿನ ವಾಪಸ್ಸು ಬರುತ್ತೇವೆ ಎಂದು ವಿಶ್ವನಾಥ್ ಹೇಳಿದರು.
ಇದನ್ನೂ ಓದಿ: ಸರ್ಕಾರ ಹನಿ ಟ್ರ್ಯಾಪ್ ಪ್ರಕರಣದ ತನಿಖೆ ನಡೆಸಿದರೆ ಸತ್ಯ ಹೊರಬರಲ್ಲ, ಸಿಬಿಐನಿಂದಲೇ ಆಗಬೇಕು: ಎಸ್ಆರ್ ವಿಶ್ವನಾಥ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

