ಸರ್ಕಾರ ಹನಿ ಟ್ರ್ಯಾಪ್ ಪ್ರಕರಣದ ತನಿಖೆ ನಡೆಸಿದರೆ ಸತ್ಯ ಹೊರಬರಲ್ಲ, ಸಿಬಿಐನಿಂದಲೇ ಆಗಬೇಕು: ಎಸ್ಆರ್ ವಿಶ್ವನಾಥ್
ಇವತ್ತಿನ ಕಲಾಪದಲ್ಲಿ ಬಿಜೆಪಿಯ ಶಾಸಕರು ಸ್ಪೀಕರ್ ಪೀಠದತ್ತ ನುಗ್ಗಿ ಗಲಾಟೆ ಮಾಡುವುದರ ಜೊತೆಗೆ ಪೇಪರ್ಗಳನ್ನು ಹರಿದು ಸಭಾಧ್ಯಕ್ಷರ ಮೇಲೆ ಎಸೆದಿದ್ದನ್ನು ಎಸ್ಅರ್ ವಿಶ್ವನಾಥ್ ಸಮರ್ಥಿಸಿಕೊಂಡರು. ಬಿಜೆಪಿ ಶಾಸಕರು ಅರಚಾಡಿದರೂ ಮಾತಿಗೆ ಮನ್ನಣೆ ಸಿಗದಿದ್ದರೆ ಏನು ಮಾಡಲಾದೀತು? 2009ರಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ನ ಸಿದ್ದರಾಮಯ್ಯ ಸ್ಪೀಕರ್ ಜೊತೆ ಹೇಗೆ ನಡೆದುಕೊಂಡಿದ್ದರು ಅಂತ ಚೆನ್ನಾಗಿ ಗೊತ್ತು ಎಂದು ಶಾಸಕ ಹೇಳಿದರು.
ಬೆಂಗಳೂರು, 21 ಮಾರ್ಚ್: ಸಚಿವ ಕೆಎನ್ ರಾಜಣ್ಣ ಪ್ರಸ್ತಾಪಿಸಿರುವ ಹನಿ ಟ್ರ್ಯಾಪ್ ಪೀಡೆಗೆ ಕೆಲ ಕೇಂದ್ರ ಸಚಿವರು ಮತ್ತು ನ್ಯಾಯಾಧೀಶರು ಸಹ ಟಾರ್ಗೆಟ್ ಆಗಿರುವುದರಿಂದ ಇದೊಂದು ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು ಸಿಬಿಐನಿಂದಲೇ ತನಿಖೆ ಮಾಡಿಸಬೇಕೆಂದು ಬಿಜೆಪಿ ಶಾಸಕ ಎಸ್ ಅರ್ ವಿಶ್ವನಾಥ್ ಹೇಳಿದರು. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ರಾಜ್ಯ ಸರ್ಕಾರದಿಂದ ಯಾವುದೇ ಉನ್ನತಪಟ್ಟದ ತನಿಖೆ ನಡೆದರೂ ಸತ್ಯ ಹೊರಬರಲಾರದು, ಯಾಕೆಂದರೆ ಸಚಿವ ಪರೋಕ್ಷವಾಗಿ ತಮ್ಮ ಪಕ್ಷದ ನಾಯಕನ ವಿರುದ್ಧ ಆಪಾದನೆ ಮಾಡಿದ್ದಾರೆ, ಕಾಂಗ್ರೆಸ್ ಹೈಕಮಾಂಡ್ ಮಧ್ಯಸ್ಥಿಕೆವಹಿಸಿ ಸಂಧಾನ ಮಾಡಿಸುವ ಸಾಧ್ಯತೆಯೂ ಇರುತ್ತದೆ ಹಾಗಾಗಿ, ಕೇಂದ್ರೀಯ ಏಜೆನ್ಸಿಯಿಂದ ತನಿಖೆ ನಡೆಯಬೇಕು ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹನಿ ಟ್ರ್ಯಾಪ್ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ ಖಡಕ್ ಮಾತು