Karnataka Assembly Session: ಕಾಂಗ್ರೆಸ್ ಎಮ್ಮೆಲ್ಸಿ ಪುಟ್ಟಣ್ಣರಿಂದ ಆಕ್ಷೇಪಾರ್ಹ ಪದ ಬಳಕೆ, ವಿಪಕ್ಷ ಸದಸ್ಯರಿಂದ ಗಲಾಟೆ
ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಶಾಸಕರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರಾದರೂ ಸಾಧ್ಯವಾಗಲ್ಲ. ಪುಟ್ಟಣ್ಣ ಅವರು ಬಳಸಿದ ಪದವನ್ನು ಕಡತದಿಂದ ತೆಗೆದುಹಾಕಿರುವುದಾಗಿ ಹೊರಟ್ಟಿ ಅವರು ಹೇಳುತ್ತಾರೆ, ಅದರೆ ವಿಪಕ್ಷಗಳ ಸದಸ್ಯರು ಮಾತ್ರ ಸುಮ್ಮನಾಗಲ್ಲ. ಅಸಲಿಗೆ ಸಿದ್ದರಾಮಯ್ಯ ಮತ್ತ ಶಿವಕುಮಾರ್ ಪರಿಷತ್ನೊಳಗೆ ಬಂದ ಬಳಿಕ ಗಲಾಟೆ ಮತ್ತಷ್ಟು ಜೋರು ಹಿಡಿಯುತ್ತದೆ.
ಬೆಂಗಳೂರು, 21 ಮಾರ್ಚ್: ವಿಧಾನಭೆಯಲ್ಲಿ ಹನಿ ಟ್ರ್ಯಾಪ್ ಪ್ರಕರಣಕ್ಕೆ (honey trap) ಸಂಬಂಧಿಸಿದಂತೆ ಗಲಾಟೆ ನಡೆದರೆ ವಿಧಾನ ಪರಿಷತ್ ನಲ್ಲಿ ಮತ್ತೊಂದು ಕಾರಣಕ್ಕೆ. ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಕೂಗಾಡುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪರಿಷತ್ತನ್ನು ಪ್ರವೇಶಿಸುತ್ತಾರೆ. ಅಸಲಿಗೆ ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಸದನದಲ್ಲಿ ಬಳಸಬಾರದ ಪದವನ್ನು ಬಳಸಿದ್ದಕ್ಕೆ ಅವರನ್ನು ಸದನದಿಂದ ಹೊರ ಹಾಕಬೇಕೆಂದು ವಿಪಕ್ಷಗಳ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಆಗ್ರಹಿಸುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹನಿ ಟ್ರ್ಯಾಪ್ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ ಖಡಕ್ ಮಾತು