Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಬಂದ್: ನಾಳೆ ಸರ್ಕಾರೀ ಬಸ್ ರಸ್ತೆಗಿಳಿಯುತ್ತವೆಯೇ? ಸ್ಪಷ್ಟನೆ ನೀಡದ ಸಚಿವ ರಾಮಲಿಂಗಾರೆಡ್ಡಿ

ಕರ್ನಾಟಕ ಬಂದ್: ನಾಳೆ ಸರ್ಕಾರೀ ಬಸ್ ರಸ್ತೆಗಿಳಿಯುತ್ತವೆಯೇ? ಸ್ಪಷ್ಟನೆ ನೀಡದ ಸಚಿವ ರಾಮಲಿಂಗಾರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 21, 2025 | 2:15 PM

ಕರ್ನಾಟಕ ಬಂದ್: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಹಿನ್ನೆಲೆಯಲ್ಲಿ ನಾಳೆ ಬಂದ್​ಗೆ ಕರೆ ನೀಡಲಾಗಿದೆ. ಎಸ್​ಎಸ್ಎಲ್ಸಿ ಮತ್ತು ಬೇರೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಬಂದ್​ನಲ್ಲಿ ಭಾಗಿಯಾಗುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೇಳಿದೆ. ಇನ್ನೂ ಹಲವಾರು ಕನ್ನಡ ಸಂಘಟನೆಗಳು ಬಂದ್​​ನಿಂದ ಹಿಂದೆ ಸರಿದಿವೆ. ಅದೆಲ್ಲ ಸರಿ, ಅದರೆ ಸಾರಿಗೆ ಸಚಿವ ತಮ್ಮ ನಿಲುವನ್ನು ಸ್ಪಷ್ಟಪಡಿಸಿ ಜನರ ಆತಂಕ ದೂರಮಾಡಬೇಕಿತ್ತು.

ಬೆಂಗಳೂರು, 21 ಮಾರ್ಚ್: ರಾಜ್ಯದ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಎಲ್ಲ ಸಂಘಟನೆಗಳು ಬಂದ್ ನಲ್ಲಿ ಭಾಗಿಯಾಗುತ್ತಿಲ್ಲ. ಅದರೆ ಬಂದ್ ಹಿನ್ನೆಲೆಯಲ್ಲಿ ಕೆಎಸ್​ಅರ್​ಟಿಸಿ ಮತ್ತು ಬಿಎಂಟಿಸಿ ಬಸ್​​ಗಳ ರಸ್ತೆಗಿಳಿಯಲಿವೆಯೇ ಅನ್ನೋದು ಜನರ ಮನದಲ್ಲಿರುವ ದೊಡ್ಡ ಆತಂಕ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಬಸ್ ಗಳ ಓಡಾಟದ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿಲ್ಲ. ಕೆಎಸ್​ಆರ್​ಟಿಸಿ ಯೂನಿಯನ್​ಗಳು ಒಗ್ಗೂಡಿ ಬಂದ್​ಗೆ ಬೆಂಬಲ ನೀಡಿದರೆ ಬಸ್ ಓಡಲ್ಲ, ಬೆಂಬಲಿಸದಿದ್ದರೆ ಓಡುತ್ತವೆ ಎಂದು ಸಚಿವರ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Bandh: ಕರ್ನಾಟಕ ಬಂದ್ ದಿನ ಏನೇನಿರುತ್ತೆ, ಏನೇನಿರಲ್ಲ? ಇಲ್ಲಿದೆ ವಿವರ