Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Bandh: ಮಾ.22ರಂದು ಕರ್ನಾಟಕ ಬಂದ್ ಫಿಕ್ಸ್: ಬಸ್ ಇರಲ್ಲ…ಯಾರ್ ಯಾರ ಬೆಂಬಲ?

Karnataka Bandh:ಇತ್ತೀಚೆಗಷ್ಟೇ ಕರ್ನಾಟಕದ ಸಾರಿಗೆ ಕೆಎಸ್‌ಆರ್‌ಟಿಸಿ ಬಸ್‌ ಕಂಡಕ್ಟರ್‌ ಮತ್ತು ಚಾಲಕರ ಮುಖಕ್ಕೆ ಮರಾಠಿ ಪುಂಡರು ಮಸಿ ಬಳಿದಿದ್ದರು. ಅಷ್ಟೇ ಅಲ್ಲದೆ, ಹಲ್ಲೆಯನ್ನೂ ಸಹ ನಡೆಸಿದ್ದರು. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ತಡೆಯಲು ಸರ್ಕಾರದ ಮೇಲೆ ಒತ್ತಡ ಹಾಕಲು ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಹಾಗಾದ್ರೆ, ಈ ಬಂದ್​ಗೆ ಯಾರ್ ಯಾರು ಬೆಂಬಲಿಸಿದ್ದಾರೆ? ಏನು ಹೇಳಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

Karnataka Bandh: ಮಾ.22ರಂದು ಕರ್ನಾಟಕ ಬಂದ್ ಫಿಕ್ಸ್: ಬಸ್ ಇರಲ್ಲ...ಯಾರ್ ಯಾರ ಬೆಂಬಲ?
Karnataka Bandh
Follow us
ರಮೇಶ್ ಬಿ. ಜವಳಗೇರಾ
|

Updated on:Mar 18, 2025 | 4:38 PM

ಬೆಂಗಳೂರು, (ಮಾರ್ಚ್​ 18): ಇದೇ ಮಾರ್ಚ್​​ 22ರಂದು ಕರ್ನಾಟಕ ಬಂದ್ (Karnataka Bandh)​ ಫಿಕ್ಸ್ ಆಗಿದೆ. ಬೆಳಗಾವಿಯಲ್ಲಿ (Belagavi) ಮರಾಠಿ ಪುಂಡರ ದಬ್ಬಾಳಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ಇದೇ ಶನಿವಾರ ಅಂದ್ರೆ ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಸಂಬಂಧ ಇಂದು (ಮಾರ್ಚ್​ 18) ಬೆಂಗಳೂರಿನಲ್ಲಿ ‘ಅಖಂಡ ಕರ್ನಾಟಕ ಬಂದ್‌’ಗೆ ಕುರಿತು ಅಧ್ಯಕ್ಷ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್​ ಮಾಡಲು ತೀರ್ಮಾನವಾಗಿದೆ.

ಯಾರು ವಾಹನ ಹತ್ತಬೇಡಿ ಎಂದು ವಾಟಳ್​

ಇನ್ನು ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮತನಾಡಿದ ವಾಟಾಳ್ ನಾಗರಾಜ್, ಮಾರ್ಚ್ 22ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆ ತನಕ ಬಂದ್ ಆಗುವುದು ನಿಶ್ಚಿತ. ಬೆಳಗ್ಗೆ 10:30ಕ್ಕೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ಮಾಡುತ್ತೇವೆ. ಹೀಗಾಗಿ ನಿಮ್ಮ ಸ್ವಾಭಿಮಾನಕ್ಕಾಗಿ ಯಾರು ವಾಹನ ಹತ್ತಬೇಡಿ ಸಾರ್ವಜನಿಕರಿಗೆ ಮನವಿ ಮಾಡಿದರು.

ಇದನ್ನೂ ಓದಿ: ಮಾರ್ಚ್ 21-23ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಲೈಫ್​​ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್​​ಪೋ 2025

ಮಾರ್ಚ್ 22ರಂದು ಯಾರು ಮೆಟ್ರೋ ಹತ್ತಬೇಡಿ

ಮಾರ್ಚ್ 22ರಂದು ಯಾರು ಮೆಟ್ರೋ ಹತ್ತಬೇಡಿ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಮಾತಾನಾಡಿದ್ದೇವೆ. ಅವತ್ತು ಬಸ್ ಓಡಿಸಬಾರದೆಂದು ಹೇಳಿದ್ದೇವೆ. ಇನ್ನೂ ಒಂದು ಸಲ ಹೇಳುತ್ತೇವೆ ಅವತ್ತು ಬಸ್ ಓಡಿಸಬಾರದು. ಮಂತ್ರಿ, ಸಿಎಂ ಕಾರಿನ ಚಾಲಕರೇ ಆಗಿರಲಿ, ಮಾನ ಮರ್ಯಾದೆ ಗೌರವ ಅಭಿಮಾನ ಸ್ವಾಭಿಮಾನಕ್ಕೆ ಅಂದು ಗಾಡಿ ಹತ್ತಬೇಡಿ. ಬೆಳಗಾವಿಯಿಂದ ಎಂಇಎಸ್ ಅನ್ನು ಒದ್ದು ಓಡಿಸಬೇಕೋ ಬೇಡ್ವೋ? ಬೆಳಗಾವಿ ಘಟನೆ ಕಣ್ಣಿಗೆ ಚಿಕ್ಕದಾಗಿರಬಹುದು. ಆದ್ರೆ ನಮ್ ಕಣ್ಣಿಗೆ ಇದು ಬೆಟ್ಟ. ಕರ್ನಾಟಕದಲ್ಲಿ ಶಿವಾಜಿ ಪ್ರತಿಮೆ ಇದೆ. ಮಹಾರಾಷ್ಟ್ರದಲ್ಲಿ ನಮ್ಮ ಕನ್ನಡಿಗರ ಪ್ರತಿಮೆ ಇಲ್ಲ. ಕರ್ನಾಟಕದಲ್ಲಿ ತಮಿಳು, ತೆಲಗು, ಮಾರ್ವಾಡಿ, ಮಲೆಯಾಳಿಗರು ಬೇಕಾ? ಎಂದು ವಾಟಾಳ್ ಪ್ರಶ್ನಿಸಿದರು.

ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಹಿಂದಿಯಲ್ಲಿ ಭಾಷಣ ಮಾಡುತ್ತಾರೆ. ವಿಧಾನಸಭೆಯೊಳಗೆ ಯಾಕೆ ಯಾರು ಇದನ್ನು ವಿರೋಧ ಮಾಡಿಲ್ಲ. ಮೂಕ ಪ್ರೇಕ್ಷಕರಂತೆ ಮಾನ ಮರ್ಯಾದೆ ಇಲ್ಲದೇ ಶಾಸಕರು ಸುಮ್ಮನಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು, ದರೋಡೆಕೋರರು, ಕನ್ನಡ ಕಲಿಸಲ್ಲ ಅಂತ ನ್ಯಾಯಾಲಯಕ್ಕೆ ಹೋಗ್ತಾರೆ. ಚಾಲಕರು ಯಾರೇ ಇರಲಿ, ಬಸ್ ಆಟೋ, ಕಾರು ಚಾಲಕರಿಗೆ ಇದು ಸ್ವಾಭಿಮಾನ, ಮರ್ಯಾದೆ ಪ್ರಶ್ನೆಯಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ಬಂದ್​ಗೆ KSRTC, ಬಿಎಂಟಿಸಿ ನೌಕರರ ಸಂಘ ಬೆಂಬಲ

ಇನ್ನು ಮಾರ್ಚ್​ 22ರಂದು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಸಾರಿಗೆ ನೌಕರರ ಕೂಟ ಸಹ ಬೆಂಬಲಿಸಿದೆ. ಈ ಬಗ್ಗೆ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ಪ್ರತಿಕ್ರಿಯಿಸಿ, ಬಂದ್​ಗೆ KSRTC, ಬಿಎಂಟಿಸಿ ನೌಕರರ ಸಂಘದಿಂದ ಬೆಂಬಲ ಇದೆ. ಕಳೆದ ತಿಂಗಳು ಸಾರಿಗೆ ನೌಕರನ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಖಂಡಿಸಿದ ಕನ್ನಡಪರ ಹೋರಾಟಗಾರರಿಗೆ ಸದಾ ಚಿರಋಣಿ. ಕೆಎಸ್​ಆರ್​ಟಿಸಿ, ಬಿಎಂಟಿಸಿ ನೌಕರರು ನಿಮ್ಮ ಜೊತೆ ಇದ್ದೇವೆ. ಕರ್ನಾಟಕ ಬಂದ್​​ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು. ಆದ್ರೆ ಮೆಟ್ರೋ ಬಂದ್​ ಕುರಿತು ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಆದರೂ ಸಹ ಅಂದು ಏನಾದರೂ ಪ್ರಯಾಣ ಮಾಡುವ ಪ್ಲ್ಯಾನ್ ಇದ್ದರೆ ಯಾವುದಕ್ಕೂ ಮುಂದೂಡುವುದು ಒಳಿತು.

ಬಂದ್​ಗೆ ಶಿವರಾಮೇಗೌಡ ಬಣ ಬೆಂಬಲ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್​ 22ರಂದು ಕರ್ನಾಟಕ ಬಂದ್​ಗೆ ಕನ್ನಡ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಸಹ ಬೆಂಬಲಿಸಿದೆ. ಈ ಬಗ್ಗೆ ಸ್ವತಃ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಶಿವರಾಮೇಗೌಡ ಸ್ಪಷ್ಟಪಡಿಸಿದ್ದಾರೆ. ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ಬಂದ್​ಗೆ ಕರೆ ನೀಡಲಾಗಿದೆ. ನಾಡಿನ ಹಿತಕ್ಕಾಗಿ ಬಂದ್​ಗೆ ಕರೆ ನೀಡಲಾಗಿದೆ. ಸರ್ವ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಬಂದ್​ಗೆ ಕರೆ ನೀಡಿದ್ದೇವೆ. ಮೆಟ್ರೋದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಆಗುತ್ತಿದೆ. ಶಿವಸೇನೆ ನಿಷೇಧ ಸೇರಿ ಅನೇಕ ವಿಚಾರ ಮುಂದಿಟ್ಟು ಬಂದ್​ಗೆ ಕರೆ ನೀಡಲಾಗಿದೆ. ಚಾಲಕರು ಸೇರಿ ಎಲ್ಲರೂ ಈ ಬಂದ್​ ಅನ್ನು ಯಶಸ್ವಿಗೊಳಿಸಬೇಕು. ಆಸ್ಪತ್ರೆ, ಹಾಲು ಸೇರಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲವೂ ಬಂದ್ ಎಂದು ತಿಳಿಸಿದರು.

ಬಂದ್​ ಆಗುತ್ತಾ ಹೋಟೆಲ್​?

ಹೋಟೆಲ್ ನವರು ಈ ಬಂದ್ ಗೆ ಬೆಂಬಲ ಕೊಡಬೇಕು ಎಂದು ಕಾರ್ಮಿಕ ಸಂಘಟನೆಯ ರವಿ ಬೈಂದೂರು ಮನವಿ ಮಾಡಿದ್ದಾರೆ. ಒಂದು ವೇಳೆ ಹೋಟೆಲ್ ನವರು ಬಂದ್ ಗೆ ಬೆಂಬಲ‌ ಕೊಡಲಿಲ್ಲ ಅಂದರೆ ನಾವು ನಿಮ್ಮ ಹೋರಾಟಕ್ಕೆ ಕೈ ಜೋಡಿಸಲ್ಲ. ನಮಗೆ ನಿಮ್ಮ ನೈತಿಕ ಬೆಂಬಲ ಬೇಡ, ಪೂರ್ಣ ಬೆಂಬಲ ಬೇಕು ಎಂದಿದ್ದಾರೆ. ಆದ್ರೆ, ಹೋಟೆಲ್ ಮಾಲೀಕರ ಸಂಘ ಮಾತ್ರ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಕರ್ನಾಟಕ ಬಂದ್​ ವೇಳೆ ಏನಿರುತ್ತೆ?

  • ಆಸ್ಪತ್ರೆ
  • ಮೆಡಿಕಲ್
  •   ಹಾಲು
  • ಅಗತ್ಯವಸ್ತುಗಳು
  • ಮೆಟ್ರೋ

ಬಂದ್​ಗೆ ಯಾರ ಬೆಂಬಲ ಸಿಕ್ಕಿದೆ?

  • ಓಲಾ, ಊಬರ್ ಟ್ಯಾಕ್ಸಿ ಅಸೋಸಿಯೇಷನ್
  • ಎರಡು ಆಟೋ ಅಸೋಸಿಯೇಷನ್
  • ಎಪಿಎಂಸಿ ಸಂಘಟನೆ

50-50 ಬೆಂಬಲ

  • ಕೆಲ ಸಾರಿಗೆ ನೌಕರ ಸಂಘದಿಂದ ಬೆಂಬಲ
  • ಸಿನಿಮಾ ಥಿಯೇಟರ್, ಚಲನಚಿತ್ರ ವಾಣಿಜ್ಯ ಮಂಡಳಿ
  • ಹೋಟೆಲ್ ಸಂಘಟನೆ
  • ಮಾಲ್
  • ಬೇಕರಿ
  • ಬಾರ್ ಅಂಡ್ ರೆಸ್ಟೋರೆಂಟ್
  • ಅಂಗಡಿ‌ ಮುಗ್ಗಟ್ಟು
  • ಬೀದಿ ಬದಿ ವ್ಯಾಪಾರ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Tue, 18 March 25

ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ