ನನ್ನ ಬದುಕಿನಲ್ಲೇ ಯಾವತ್ತೂ ಕಾನೂನುಬಾಹಿರ ಕೆಲಸ ಮಾಡಿಲ್ಲ, ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ: ಕುಮಾರಸ್ವಾಮಿ
ಜಮೀನು ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ತನಗೆ ನೋಟೀಸ್ ಬಂದಿಲ್ಲ, ಹಾಗೆ ನೋಡಿದರೆ ಸಾಮಾನ್ಯ ಪ್ರಜೆಗೂ ನೋಟೀಸ್ ನೀಡಬೇಕೆಂಬ ಕಾನೂನಿದೆ, ಎಸ್ಐಟಿಯೊಂದನ್ನು ಸರ್ಕಾರ ರಚಿಸಿದ್ದು ಅದರ ಮೂಲಕವೇ ದಬ್ಬಾಳಿಕೆ ನಡೆಸುವ ಪ್ರಯತ್ನ ನಡೆದಿದೆ, ಸರ್ಕಾರ ನಿಸ್ಸಂದೇಹವಾಗಿ ತನ್ನನ್ನು ಟಾರ್ಗೆಟ್ ಮಾಡುತ್ತಿದೆ, ತನ್ನ ಬಿಟ್ಟರೆ ಅದಕ್ಕೆ ಬೇರೇನೂ ಕಾಣುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು, 18 ಮಾರ್ಚ್: ಕೇತಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಂದ ಒತ್ತುವರಿಯಾಗಿರುವ ಜಮೀನು ತೆರವುಗೊಳಿಸಿ ಅಂತ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ (state government) ನೀಡಿರುವ ಆದೇಶ ಮಾಜಿ ಮುಖ್ಯಮಂತ್ರಿಯನ್ನು ವಿಚಲಿತಗೊಳಿಸಿಲ್ಲ. ಮಾಧ್ಯಮಗಳೊಂದಿಗೆ ಮಾತಾಡಿದ ಅವರು ತನ್ನಿಂದ ಯಾವುದೇ ಅಕ್ರಮ ನಡೆದಿಲ್ಲ, ಎರಡು ಸಲ ಮುಖ್ಯಮಂತ್ರಿಯಾಗಿದ್ದ ತನಗೆ ಕಾನೂನುಬಾಹಿರ ಕೆಲಸ ಮಾಡುವ ಅವಶ್ಯಕತೆಯಿಲ್ಲ, 40 ವರ್ಷಗಳ ಹಿಂದೆ ತೆಗೆದುಕೊಂಡ ಜಮೀನು ಅದು, ಇದುವರೆಗೆ ನೂರಾರು ಬಾರಿ ತನಿಖೆ, ವಿಚಾರಣೆ ಆಗಿದೆ, ಸರ್ಕಾರದ ದಬ್ಬಾಳಿಕೆ ವಿರುದ್ಧ ಕಾನೂನಿನ ಚೌಕಟ್ಟನೊಳಗೆ ಹೋರಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾನೂನು ಬಾಹಿರವಾಗಿ ಭೂಮಿ ಇದ್ರೆ ವಶಪಡಿಸಿಕೊಳ್ಳಿ, ಹಾಗೇ ನನ್ನ ಜಮೀನು ಹುಡುಕಿಕೊಡಿ: ಸರ್ಕಾರಕ್ಕೆ ಕುಮಾರಸ್ವಾಮಿ ಪತ್ರ