ಮಾರ್ಚ್ 21-23ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಲೈಫ್ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್ಪೋ 2025
Lifestyle, Automobile, Furniture Expo 2025: ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾರ್ಚ್ 21, 22 ಮತ್ತು 23ಕ್ಕೆ, ಶುಕ್ರವಾರದಿಂದ ಭಾನುವಾರದವರೆಗೆ ಟಿವಿ9 ವತಿಯಿಂದ ಎಕ್ಸ್ಫೋ 2025 ನಡೆಯಲಿದೆ. ಲೈಫ್ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಮೇಳ ಇದಾಗಿದ್ದು ಜಾಗತಿಕ ಟಾಪ್ ಬ್ರ್ಯಾಂಡ್ಗಳ ಇತ್ತೀಚಿನ ಉತ್ಪನ್ನಗಳು ಇಲ್ಲಿ ಪ್ರದರ್ಶನದಲ್ಲಿರಲಿವೆ. ಈ ಮೂರು ದಿನ ಬೆಳಗ್ಗೆ 10ಗಂಟೆಯಿಂದ ರಾತ್ರಿ 8ರವರೆಗೆ ಎಕ್ಸ್ಪೋ ತೆರೆದಿರುತ್ತದೆ.

ಲೈಫ್ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಕ್ಷೇತ್ರದ ಹೊಸ ಆವಿಷ್ಕಾರಗಳು, ವಿನೂತನ ಉತ್ಪನ್ನಗಳು ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿವೆ. ಟಿವಿ9 ವತಿಯಿಂದ ಮಾರ್ಚ್ 23ರಿಂದ 25ರವರೆಗೆ ಎಕ್ಸ್ಪೋ ಆಯೋಜಿಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯುವ ಈ ಮೂರು ದಿನಗಳ ಲೈಫ್ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಮೇಳದಲ್ಲಿ ಇತ್ತೀಚಿನ ಟ್ರೆಂಡಿಂಗ್ ಉತ್ಪನ್ನಗಳನ್ನು ಕಾಣಬಹುದು. ಹೊಸ ಹೊಚ್ಚ ವಾಹನಗಳು, ಕಾನ್ಸೆಪ್ಟ್ ವಾಹನಗಳು, ಫ್ಯಾಷನ್ ಜ್ಯುವೆಲರಿಗಳು, ಲಕ್ಷುರಿ ಪೀಠೋಪಕರಣಗಳು ಇವೇ ಮುಂತಾದವನ್ನು ನೀವು ಈ ವರ್ಷದ ಎಕ್ಸ್ಪೋನಲ್ಲಿ ನಿರೀಕ್ಷಿಸಬಹುದು.
ಅರಮನೆ ಮೈದಾನದಲ್ಲಿ ನಡೆಯುವ ಈ ಎಕ್ಸ್ಪೋದಲ್ಲಿ ಮೂರು ಪ್ರತ್ಯೇಕ ವಿಭಾಗಗಳಿರುತ್ತವೆ.
ಆಟೊಮೊಬೈಲ್ ಪೆವಿಲಿಯನ್
ಆಟೊಮೊಬೈಲ್ ಪೆವಿಲಿಯನ್ನಲ್ಲಿ ಜಾಗತಿಕ ಅಗ್ರಗಣ್ಯ ಆಟೊಮೊಬೈಲ್ ಕಂಪನಿಗಳ ಇತ್ತೀಚಿನ ಎಲೆಕ್ಟ್ರಿಕ್ ವಾಹನಗಳು, ಎಕ್ಸ್ಯುವಿ, ಎಂಯುವಿ ಕಾರುಗಳು, ಕಾನ್ಸೆಪ್ಟ್ ವಾಹನಗಳು ಪ್ರದರ್ಶನದಲ್ಲಿ ಇರಲಿವೆ. ಹೊಸ ಬೈಕ್ ಮಾಡಲ್ಗಗಳನ್ನು ಗಮನಿಸಬಹುದು. ವಿಆರ್, ಟೆಸ್ಟ್ ಡ್ರೈವ್ ಮತ್ತಿತರ ಸೌಲಭ್ಯಗಳನ್ನು ಬಳಸಿ ಉತ್ಪನ್ನಗಳ ಬಗ್ಗೆ ಹೆಚ್ಚು ನಿಕಟವಾಗಿ ತಿಳಿಯುವ ಅವಕಾಶ ಇರುತ್ತದೆ.
ಫರ್ನಿಚರ್ ಮತ್ತು ಇಂಟೀರಿಯರ್ ಡಿಸೈನ್ ವಿಭಾಗ
ಈ ಮೇಳದಲ್ಲಿ ಟಾಪ್ ಬ್ರ್ಯಾಂಡ್ಗಳ ಲಕ್ಸುರಿ ಪೀಠೋಪಕರಣಗಳು, ಗೃಹ ಅಲಂಕಾರ ವಸ್ತು ಅಥವಾ ಹೋಮ್ ಡೆಕೋರೇಶನ್, ಸ್ಮಾರ್ಟ್ ಹೋಂ ಸಲ್ಯೂಶನ್ಸ್ ಇತ್ಯಾದಿಯನ್ನು ಕಾಣಬಹುದು. ನಿಮ್ಮ ಮನೆಯನ್ನು ಮತ್ತಷ್ಟು ಸುಂದರಗೊಳಿಸುವ ವಿವಿಧ ತಂತ್ರಗಳನ್ನು ನೀವಿಲ್ಲಿ ಕಣ್ಣಾರೆ ಕಾಣಬಹುದು. ಲೈವ್ ಡೆಮಾನ್ಸ್ಟ್ರೇಶನ್ ಇರುತ್ತದೆ. ಹಾಗೆಯೇ, ಪರಿಸರಸ್ನೇಹಿ ಫರ್ನಿಚರ್ಗಳು ಈ ಎಕ್ಸ್ಪೋದಲ್ಲಿ ಪ್ರದರ್ಶನದಲ್ಲಿರುತ್ತವೆ.
ಲೈಫ್ ಸ್ಟೈಲ್ ಮತ್ತು ಲಕ್ಷುರಿ ಸೆಕ್ಷನ್
ನಿಮ್ಮ ಜೀವನದ ಗುಣಮಟ್ಟ ಹೆಚ್ಚಿಸುವಂತಹ ಮತ್ತು ನಿಮ್ಮ ದೈಹಿಕ ಸೌಂದರ್ಯ ಮತ್ತು ಅರೋಗ್ಯ ಹೆಚ್ಚಿಸುವಂತಹ ಫ್ಯಾಷನ್ ಮತ್ತು ವೆಲ್ನೆಸ್ ಉತ್ಪನ್ನಗಳನ್ನು ಇಲ್ಲಿ ಕಾಣಬಹುದು. ವಿಶ್ವದ ಶ್ರೇಷ್ಠ ಬ್ರ್ಯಾಂಡ್ಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸುತ್ತವೆ.
ಲೈಫ್ಸ್ಟೈಲ್, ಆಟೊಮೊಬೈಲ್, ಫರ್ನಿಚರ್ ಎಕ್ಸ್ಪೋ 2025 ಕಾರ್ಯಕ್ರಮದ ವಿವರ
- ದಿನಾಂಕ: 2025ರ ಮಾರ್ಚ್ 21, 22, 23ಕ್ಕೆ (ಶುಕ್ರವಾರದಿಂದ ಭಾನುವಾರದವರೆಗೆ)
- ಸಮಯ: ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ
- ಕಾರ್ಯಕ್ರಮ ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಂಗಳೂರು
- ಪ್ರವೇಶ ಶುಲ್ಕ: ಉಚಿತ
ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ