AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 1950 ರ ದಶಕದಲ್ಲಿ ಬೆಂಗಳೂರಿನ ಎಂ.ಜಿ ರೋಡ್‌ ಹೇಗಿತ್ತು ನೋಡಿ?

ಸೆಲೆಬ್ರಿಟಿಗಳಿಂದ ಹಿಡಿದು ದೊಡ್ಡ ದೊಡ್ಡ ನಗರಗಳ ಹಳೆಯ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ವೈರಲ್‌ ಆಗುತ್ತಿರುತ್ತವೆ. ಅದೇ ರೀತಿ ಇದೀಗ 70 ವರ್ಷ ಹಳೆಯ ಬೆಂಗಳೂರು ನಗರದ ಫೋಟೋವೊಂದು ಎಲ್ಲೆಡೆ ಹರಿದಾಡುತ್ತಿದೆ. 1950 ದಶಕದಲ್ಲಿ ಎಂ.ಜಿ ರೋಡ್‌ ಹೇಗಿತ್ತು ಎಂಬುದನ್ನು ತೋರಿಸುವ ಕಪ್ಪು-ಬಿಳುಪಿನ ಫೋಟೋ ಹರಿದಾಡುತ್ತಿದ್ದು, ಸಂಚಾರದಟ್ಟಣೆಯಿಲ್ಲದ ಯುಗದ ನೋಟವನ್ನು ಕಂಡು ಸ್ವರ್ಗದಂತಿತ್ತು ನಮ್ಮ ಬೆಂಗಳೂರು ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

Viral: 1950 ರ ದಶಕದಲ್ಲಿ ಬೆಂಗಳೂರಿನ ಎಂ.ಜಿ ರೋಡ್‌ ಹೇಗಿತ್ತು ನೋಡಿ?
Mg Road
ಮಾಲಾಶ್ರೀ ಅಂಚನ್​
| Edited By: |

Updated on:Mar 18, 2025 | 3:17 PM

Share

ಕೆಂಪೇಗೌಡರು ಕಟ್ಟಿದ ಬೆಂದಕಾಳೂರು ಇಂದು ಜಾಗತಿಕ ಮಟ್ಟದಲ್ಲಿ ಹೈಟೆಕ್‌ ನಗರವಾಗಿ ಬೆಳೆದು ನಿಂತಿದೆ. ಜೊತೆಗೆ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು (Bengaluru) ಎಂಬ ಮಾಯಾ ನಗರಿ ಎಷ್ಟೋ ಜನರಿಗೆ ಜೀವನ ಕಲ್ಪಿಸಿಕೊಟ್ಟ ನಗರವಾಗಿದೆ. ಪ್ರಸ್ತುತ ಟ್ರಾಫಿಕ್‌ (Traffic) ಸದ್ದು, ಗದ್ದಲದಿಂದ ತುಂಬಿರುವ ಬೆಂಗಳೂರು ದಶಕಗಳ ಹಿಂದೆ ಹೇಗಿತ್ತು ಗೊತ್ತಾ? ಈ ಕುರಿತ ಹಳೆಯ ಫೋಟೋವೊಂದು (Photo) ವೈರಲ್‌ ಆಗುತ್ತಿದೆ. 1950 ದಶಕದಲ್ಲಿ ಎಂ.ಜಿ ರೋಡ್‌ (M.G Road) ಹೇಗಿತ್ತು ಎಂಬುದನ್ನು ತೋರಿಸುವ ಫೋಟೋ ಹರಿದಾಡುತ್ತಿದ್ದು, ಸಂಚಾರದಟ್ಟಣೆಯಿಲ್ಲದ ಯುಗದ ನೋಟವನ್ನು ಕಂಡು ಸ್ವರ್ಗದಂತಿತ್ತು ನಮ್ಮ ಬೆಂಗಳೂರು ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

ಸುಮಾರು 70 ವರ್ಷಗಳ ಹಿಂದೆ ನಮ್ಮ ಬೆಂಗಳೂರು ನಗರ, ಟ್ರಾಫಿಕ್‌ ಫ್ರೀ ಬೀದಿಗಳು ಹೇಗಿತ್ತು ಎಂಬುದನ್ನು ತೋರಿಸುವ ಹಳೆಯ ಕಪ್ಪು-ಬಿಳುಪಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 1950 ರಲ್ಲಿ ಎಂ.ಜಿ ರೋಡ್‌ ಹೇಗಿತ್ತು, ನಮ್ಮ ಬೆಂಗಳೂರು ಎಷ್ಟು ಪ್ರಶಾಂತವಾಗಿತ್ತು ಎಂಬುದನ್ನು ಈ ಫೋಟೋದಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ
Image
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
Image
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
Image
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
Image
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ಈ ಕುರಿತ ಫೋಟೋವನ್ನು IndiaHistorypic ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “1950 ರಲ್ಲಿ ಬೆಂಗಳೂರಿನ ಎಂ.ಜಿ ರೋಡ್‌ನ ಕಾರ್‌ ಪಾರ್ಕಿಂಗ್”‌ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ಫೋಟೋದಲ್ಲಿ 70 ವರ್ಷಗಳ ಹಿಂದೆ ಎಂ.ಜಿ ರೋಡ್‌ ಹೇಗಿತ್ತು ಎಂಬುದನ್ನು ಹಾಗೂ ವಿಂಟೇಜ್‌ ಕಾರು, ಸೈಕಲ್‌ ರಿಕ್ಷಾಗಳನ್ನು ಪಾರ್ಕ್‌ ಮಾಡಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಕುಡಿದ ಮತ್ತಲ್ಲಿ ಶಾಲೆಗೆ ನುಗ್ಗಿ ಅವಾಂತರ ಸೃಷ್ಟಿಸಿದ ಕುಡುಕ ಮಹಾಶಯ; ಆಘಾತಕಾರಿ ದೃಶ್ಯ ವೈರಲ್‌

ಮಾರ್ಚ್‌ 15 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 36 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಆಗಿನ ಬೆಂಗಳೂರು ಸ್ವರ್ಗದಂತಿತ್ತುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಷ್ಟು ಸುಂದರವಾಗಿತ್ತು ನಮ್ಮ ಬೆಂಗಳೂರು ನಗರ, ಆದ್ರೆ ಇಂದು ಅಭಿವೃದ್ಧಿಯ ಹೆಸರಲ್ಲಿ ಸಿಟಿ ಅವ್ಯವಸ್ತೆಗೊಂಡಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸ್ವರ್ಗದಂತಿದ್ದ ನಗರವನ್ನು ಇಂದು ಅಭಿವೃದ್ಧಿಯ ಹೆಸರಲ್ಲಿ ಹಾಳು ಮಾಡಿ ಬಿಟ್ಟಿದ್ದಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Tue, 18 March 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ