AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಛಪ್ರಿ ಎಂದು ಕರೆದ ಮಕ್ಕಳು; ಶಾಲಾ ಬಸ್ಸಿನೊಳಗೆ ನುಗ್ಗಿ ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಕ್ಲಾಸ್‌ ತೆಗೆದುಕೊಂಡ ಬೈಕ್‌ ಸವಾರ

ಇತ್ತೀಚಿನ ದಿನಗಳಲ್ಲಿ ಯುವ ಜನತೆ ಈ ʼಛಪ್ರಿʼ ಅನ್ನೋ ಪದವನ್ನು ಹೆಚ್ಚಾಗಿ ಬಳಕೆ ಮಾಡ್ತಾರೆ. ಯಾರಾದ್ರೂ ತಮ್ಮನ್ನು ಚಪ್ರಿ ಎಂದು ಕರೆದರೆ ಕೆಲವೊಬ್ಬರು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬ ಬೈಕ್‌ ಸವಾರ ಕೋಪಗೊಂಡ ಶಾಲಾ ಮಕ್ಕಳಿಗೆಯೇ ಗದರಿದ್ದಾನೆ. ರಸ್ತೆಯಲ್ಲಿ ಹೋಗುತ್ತಿರುವ ವೇಳೆ ಸ್ಕೂಲ್‌ ಬಸ್‌ ಒಳಗಿದ್ದ ವಿದ್ಯಾರ್ಥಿಗಳು ಬೈಕರ್‌ಗೆ ಜೋರಾಗಿ ಛಪ್ರಿ ಎಂದು ಕರೆದಿದ್ದು, ಇದರಿಂದ ಸಿಟ್ಟಿಗೆದ್ದ ಆತ ಬಸ್ಸಿನೊಳಗೆ ಇದೆಂಥಾ ವರ್ತನೆ ನಿಮ್ಮದು ಎಂದು ಶಾಲಾ ಮಕ್ಕಳನ್ನು ಗದರಿದ್ದಾನೆ. ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

Viral: ಛಪ್ರಿ ಎಂದು ಕರೆದ ಮಕ್ಕಳು; ಶಾಲಾ ಬಸ್ಸಿನೊಳಗೆ ನುಗ್ಗಿ ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಕ್ಲಾಸ್‌ ತೆಗೆದುಕೊಂಡ ಬೈಕ್‌ ಸವಾರ
ಬಸ್ Image Credit source: India Today
ಮಾಲಾಶ್ರೀ ಅಂಚನ್​
| Edited By: |

Updated on:Mar 19, 2025 | 10:13 AM

Share

ಜಮ್ಮು-ಕಾಶ್ಮೀರ, ಮಾ. 18: ಛಪ್ರಿ Chhapri) ಅನ್ನೋ ಪದವನ್ನು ನೀವು ಕೂಡಾ ಕೇಳಿರುತ್ತೀರಿ ಅಲ್ವಾ. ಹುಚ್ಚುಚ್ಚಾಗಿ ಆಡುವವರನ್ನು, ಚಿತ್ರ ವಿಚಿತ್ರ ಬಟ್ಟೆ ತೊಡುವವರು, ಹೇರ್‌ ಕಲರ್‌ ಸೇರಿದಂತೆ ವಿಚಿತ್ರವಾಗಿ ಸ್ಟೈಲ್‌ ಮಾಡುವವರನ್ನು ಜನ ಚಪ್ರಿ ಎಂದು ಕರಿತಾರೆ. ಆದ್ರೆ ಕೆಲವೊಬ್ಬರು ಯಾರಾದ್ರೂ ತಮ್ಮನ್ನು ಚಪ್ರಿ ಎಂದು ಕರೆದರೆ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ತನ್ನನ್ನು ಚಪ್ರಿ ಎಂದು ಕರೆದರೆಂದು ಸ್ಕೂಲ್‌ (school) ಮಕ್ಳ ಮೇಲೆ ಬೈಕ್‌ ಸವಾರ (biker) ಗರಂ ಆಗಿದ್ದಾನೆ. ರಸ್ತೆಯಲ್ಲಿ ಹೋಗುತ್ತಿರುವ ವೇಳೆ ಸ್ಕೂಲ್‌ ಬಸ್‌ (school bus) ಒಳಗಿದ್ದ ವಿದ್ಯಾರ್ಥಿಗಳು (students) ಬೈಕರ್‌ಗೆ ಜೋರಾಗಿ ಚಪ್ರಿ ಎಂದು ಕರೆದಿದ್ದು, ಇದರಿಂದ ಸಿಟ್ಟಿಗೆದ್ದ ಆತ ಬಸ್ಸಿನೊಳಗೆ ಇದೆಂಥಾ ವರ್ತನೆ ನಿಮ್ಮದು ಎಂದು ಶಾಲಾ ಮಕ್ಕಳನ್ನು ಗದರಿದ್ದಾನೆ. ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

ಈ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದು, ಇಲ್ಲಿನ ಜೋಧಾಮಲ್‌ ಪಬ್ಲಿಕ್‌ ಸ್ಕೂಲ್‌ನ ವಿದ್ಯಾರ್ಥಿಗಳು ಸ್ಕೂಲ್‌ ಬಸ್ಸಿನಲ್ಲಿ ಹೋಗ್ತಿದ್ದ ವೇಳೆ ಬೈಕ್‌ ಸವಾರನೊಬ್ಬನಿಗೆ ಚಪ್ರಿ ಎಂದು ಜೋರಾಗಿ ಕೂಗುವ ಮೂಲಕ ಕಾಲೆಳೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬೈಕರ್‌ ನಡು ರಸ್ತೆಯಲ್ಲಿ ಸ್ಕೂಲ್‌ ಬಸ್ಸನ್ನು ನಿಲ್ಲಿಸಿ, ಅದರೊಳಗೆ ನುಗ್ಗಿ “ಇದು ಯಾವ ರೀತಿಯ ನಡವಳಿಕೆ? ಹೀಗೆ ಮಾಡುವುದು ಎಷ್ಟು ಸರಿ” ಎಂದು ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡಿದ್ದಾನೆ. ನಂತರ ಹಾಗೋ ಹೀಗೋ ಸಮಧಾನ ಪಡಸಿ ಶಿಕ್ಷಕರು ಆತನನ್ನು ಹೋಗುವಂತೆ ಮಾಡಿದ್ದಾರೆ.

ಇದನ್ನೂ ಓದಿ
Image
ದೈವದ ವೇಷ ಹಾಕಿ ವೇದಿಕೆ ಮೇಲೆ ನರ್ತನ ಮಾಡಿದ ಯುವಕ
Image
ಕುಡಿದ ಮತ್ತಲ್ಲಿ ಶಾಲೆಗೆ ನುಗ್ಗಿ ಅವಾಂತರ ಸೃಷ್ಟಿಸಿದ ಕುಡುಕ ಮಹಾಶಯ
Image
ಜೀವಂತ ಮಗಳ ಶ್ರಾದ್ಧ ಮಾಡಿ, ಪಿಂಡ ಇಟ್ಟ ಪೋಷಕರು
Image
Video: ಬೃಹತ್ ಸರಕು ಹಡಗನ್ನು ನುಂಗಿದ ಮರಳು ಬಿರುಗಾಳಿ

ಈ ಕುರಿತ ವಿಡಿಯೋವನ್ನು Faisal unfiltered ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, “ಬೈಕ್‌ ಸವಾರನನ್ನು ಚಪ್ರಿ ಎಂದು ಕರೆದ ವಿದ್ಯಾರ್ಥಿಗಳು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ರಸ್ತೆಯಲ್ಲಿ ಸವಾರನೊಬ್ಬ ಬೈಕ್‌ ಓಡಿಸುತ್ತಿದ್ದ ಹೋಗುತ್ತಿದ್ದ ವೇಳೆ ಸ್ಕೂಲ್‌ ಬಸ್ಸಿನಲ್ಲಿದ್ದ ಮಕ್ಕಳನ್ನು ಆತನನ್ನು ಚಪ್ರಿ… ಚಪ್ರಿ… ಎಂದು ಕರೆದು ಕಾಲೆಳೆದಿದ್ದಾರೆ. ಇದರಿಂದ ಕೋಪಗೊಂಡ ಬೈಕ್‌ ಸವಾರ ಬಸ್ಸಿನೊಳಗೆ ನುಗ್ಗಿ ʼಶಾಲೆಯಲ್ಲಿ ಮಕ್ಕಳು ಇದನ್ನೇ ಕಲಿಯೋದಾ, ಇದೆಂಥಾ ಲಜ್ಜೆಗೆಟ್ಟ ಭಾಷೆಗಳನ್ನು ಮಾತಾಡ್ತಾರೆ ಮೇಡಂʼ ಎಂದು ಹೇಳಿ ಮಕ್ಕಳಿಗೆ ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡಿದ್ದಾನೆ.

ಮತ್ತಷ್ಟು ಓದಿ: Viral: ದೆಹಲಿ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಜಡೆ ಜಗಳ; ವೈರಲ್‌ ಆಯ್ತು ವಿಡಿಯೋ

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 36 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವರು ಮಕ್ಕಳು, ಅವರೊಂದಿಗೆ ಅಷ್ಟು ಒರಟಾಗಿ ನಡೆದುಕೊಳ್ಳುವುದು ಸರಿಯೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಕ್ಕಳು ತಪ್ಪು ಮಾಡಿದ್ದಾರೆ ನಿಜ, ಆದ್ರೆ ಇದನ್ನು ವಿಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡಲು ನಿನಗ್ಯಾರು ಅಧಿಕಾರ ಕೊಟ್ಟಿದ್ದುʼ ಎಂದು ಗರಂ ಆಗಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಡುರಸ್ತೆಯಲ್ಲಿ ಬಸ್‌ ನಿಲ್ಲಿಸಿ ವಿದ್ಯಾರ್ಥಿಗಳನ್ನು ನಿಂದಿಸಲು ನಿನಗ್ಯಾರು ಅಧಿಕಾರ ಕೊಟ್ಟಿದ್ದುʼ ಎಂದು ಕೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:12 am, Wed, 19 March 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ