Viral: ದೆಹಲಿ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಜಡೆ ಜಗಳ; ವೈರಲ್ ಆಯ್ತು ವಿಡಿಯೋ
ಮೆಟ್ರೋದೊಳಗೆ ಡ್ಯಾನ್ಸ್, ರೀಲ್ಸ್, ಅಸಭ್ಯ ವರ್ತನೆ, ಜಗಳಗಳ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಮೆಟ್ರೋ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ನೂಕಾಟ-ತಳ್ಳಾಟದ ವಿಚಾರಕ್ಕೆ ಮಹಿಳಾ ಪ್ರಯಾಣಿಕರಿಬ್ಬರ ನಡುವೆ ಜಡೆ ಜಗಳ ನಡೆದಿದೆ. ಜುಟ್ಟು ಎಳೆದಾಡಿಕೊಂಡು ಪರಸ್ಪರ ಜಗಳವಾಡಿಕೊಂಡಿದ್ದು, ಇವರಿಬ್ಬರ ಜಡೆ ಜಗಳವನ್ನು ಕಂಡು ಸಹ ಪ್ರಯಾಣಿಕರು ಸುಸ್ತಾಗಿದ್ದಾರೆ.

ದೆಹಲಿ (Delhi) ಮೆಟ್ರೋ ಅಹಿತರಕ ಘಟನೆ, ಪ್ರಯಾಣಿಕರ ದುರ್ವತನೆಯ ಕಾರಣದಿಂದಲೇ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಸೀಟಿನ ವಿಚಾರವಾಗಿ ಗಲಾಟೆ (commotion) ಮಾಡುವುದು, ರೀಲ್ಸ್, ರೊಮ್ಯಾನ್ಸ್ ಮಾಡುವುದು ಇದೆಲ್ಲಾ ಸರ್ವೇ ಸಾಮಾನ್ಯವಾಗಿದೆ. ಹೀಗೆ ಅಸಭ್ಯ ವರ್ತನೆಯನ್ನು ತೋರಬಾರದು ಎಂದು ಎಚ್ಚರಿಗೆ ನೀಡಿದರೂ ಇಂತಹ ಚಟುವಟಿಕೆಗಳು ಮಾತ್ರ ನಿಲ್ಲುತ್ತಿಲ್ಲ. ಒಂದರ ಮೇಲೊಂದರಂತೆ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಲೇ ಇವೆ. ಇದೀಗ ಮತ್ತೊಂದು ಸಂಘರ್ಷ ನಡೆದಿದ್ದು, ನೂಕಾಟ-ತಳ್ಳಾಟದ ವಿಚಾರಕ್ಕೆ ಮಹಿಳಾ ಪ್ರಯಾಣಿಕರಿಬ್ಬರ ನಡುವೆ ಜಡೆ ಜಗಳ ನಡೆದಿದೆ. ಜುಟ್ಟು ಎಳೆದಾಡಿಕೊಂಡು ಪರಸ್ಪರ ಜಗಳವಾಡಿಕೊಂಡಿದ್ದು, ಈ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ದೆಹಲಿ ನಿವಾಸಿಗಳ ಜೀವನಾಡಿ ಎಂದೇ ಹೆಸರುವಾಸಿಯಾಗಿರುವ ದೆಹಲಿ ಮೆಟ್ರೋ ಇತ್ತೀಚಿನ ದಿನಗಳಲ್ಲಿ ರೀಲ್ಸ್, ಜಗಳ ಸೇರಿದಂತೆ ಪ್ರಯಾಣಿಕರ ದುರ್ವರ್ತನೆಯ ಕಾರಣದಿಂದ ನಗೆಪಾಟಲಿಗೀಡಾಗುತ್ತಿದೆ. ಇದೀಗ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಮೆಟ್ರೋದ ಮಹಿಳಾ ಕೋಚ್‌ನಲ್ಲಿ ನೂಕಾಟ-ತಳ್ಳಾಟದ ವಿಚಾರವಾಗಿ ನಾರಿಮಣಿಯರ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಮಹಿಳೆಯರಿಬ್ಬರು ಒಬ್ಬರಿಗೊಬ್ಬರು ಕೆಟ್ಟದಾಗಿ ಬೈಯುತ್ತಾ, ಜುಟ್ಟು ಎಳೆದಾಡಿಕೊಂಡು ಜಗಳ ಕಾಯ್ದಿದ್ದಾರೆ.
Kalesh b/w Two ladies inside Delhi Metro over push and shove: pic.twitter.com/0gVDxqqRBz
— Ghar Ke Kalesh (@gharkekalesh) March 16, 2025
ಈ ವೀಡಿಯೊವನ್ನು @gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ದೆಹಲಿ ಮೆಟ್ರೋದ ಮಹಿಳಾ ಕೋಚ್ ಒಳಗೆ ಮಹಿಳೆಯರಿಬ್ಬರು ಜಗಳವಾಡುತ್ತಿರುವ ದೃಶ್ಯವನ್ನು ಕಾಣಬಹುದು. ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಜುಟ್ಟು ಎಳೆದಾಡಿಕೊಂಡು ದೊಡ್ಡ ರಂಪಾಟ ಮಾಡಿದ್ದಾರೆ.
ಇದನ್ನೂ ಓದಿ: ಕುಡಿದ ಮತ್ತಲ್ಲಿ ಶಾಲೆಗೆ ನುಗ್ಗಿ ಅವಾಂತರ ಸೃಷ್ಟಿಸಿದ ಕುಡುಕ ಮಹಾಶಯ; ಆಘಾತಕಾರಿ ದೃಶ್ಯ ವೈರಲ್
ಮಾರ್ಚ್ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼದೆಹಲಿ ಮೆಟ್ರೋ ಪ್ರೇಕ್ಷಕರಿಗೆ ಉಚಿತ ಮನೋರಂಜನೆಯನ್ನು ನೀಡುತ್ತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ದೆಹಲಿ ಮೆಟ್ರೋ ಅಲ್ಲ ಫೈಟ್ ಕ್ಲಬ್ʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼದೆಹಲಿ ಮೆಟ್ರೋದಲ್ಲಿ ಫ್ರೀ ಮನರಂಜನೆಗೆ ಯಾವುದೇ ಕೊರತೆಯಿಲ್ಲʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Tue, 18 March 25