Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಡ್‌ರೂಮ್‌ನಲ್ಲಿ ಗೆಳತಿಯೊಂದಿಗೆ ಮಲಗಿದ್ದ ಯಜಮಾನನಿಗೆ ಗುಂಡು ಹಾರಿಸಿದ ಪಿಟ್‌ಬುಲ್‌ ಶ್ವಾನ; ಏನಿದು ವಿಚಿತ್ರ ಘಟನೆ?

ಈ ಪ್ರಪಂಚದಲ್ಲಿ ನಡೆಯುವಂತಹ ಕೆಲವೊಂದು ಘಟನೆಗಳ ಸುದ್ದಿಗಳನ್ನು ಕೇಳಿದಾಗ ತೀರಾ ವಿಚಿತ್ರವೆಂದೆನಿಸುತ್ತದೆ. ಸದ್ಯ ಅಂತಹದ್ದೊಂದು ನಂಬಲಸಾಧ್ಯವಾದಂತಹ ಘಟನೆ ಇದೀಗ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಗೆಳತಿಯೊಂದಿಗೆ ಬೆಡ್‌ರೂಮ್‌ನಲ್ಲಿ ಮಲಗಿದ್ದ ವೇಳೆ ಪಿಟ್‌ಬುಲ್‌ ಶ್ವಾನ ಆತನಿಗೆ ಗುಂಡು ಹಾರಿಸಿದೆ. ಶ್ವಾನದ ತುಂಟತನದಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಇದರಿಂದ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

Viral: ಬೆಡ್‌ರೂಮ್‌ನಲ್ಲಿ ಗೆಳತಿಯೊಂದಿಗೆ ಮಲಗಿದ್ದ ಯಜಮಾನನಿಗೆ ಗುಂಡು ಹಾರಿಸಿದ ಪಿಟ್‌ಬುಲ್‌ ಶ್ವಾನ; ಏನಿದು ವಿಚಿತ್ರ ಘಟನೆ?
ಪಿಟ್‌ಬುಲ್‌ ಶ್ವಾನ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 17, 2025 | 11:34 AM

ಅಮೆರಿಕ, ಮಾ. 16: ಈ ಸಮಾಜದಲ್ಲಿ ನಂಬಲಸಾಧ್ಯವಾದಂತಹ ಅದೆಷ್ಟೋ ಘಟನೆಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ವಿಲಕ್ಷಣ (bizarre) ಘಟನೆಗಳ ಸುದ್ದಿಗಳನ್ನು ಕೇಳಿದಾಗ ಹಿಂಗೂ ನಡೆಯುತ್ತಾ ಎಂದು ಭಾಸವಾಗುತ್ತದೆ. ಇದೀಗ ಅಮೆರಿಕದಲ್ಲಿ (America) ಇಂತಹ ಅಪರೂಪದ ಹಾಗೂ ನಂಬಲಸಾಧ್ಯವಾದ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಗೆಳತಿಯೊಂದಿಗೆ (girlfriend) ಬೆಡ್‌ರೂಮ್‌ನಲ್ಲಿ ಮಲಗಿದ್ದ ವೇಳೆ ಪಿಟ್‌ಬುಲ್‌ (pitbull) ಶ್ವಾನದ (dog) ಗುಂಡೇಟಿಗೆ ತುತ್ತಾಗಿದ್ದಾನೆ. ಶ್ವಾನದ ತುಂಟತನದಿಂದ ಆಕಸ್ಮಿಕವಾಗಿ ಗುಂಡು (gun) ಹಾರಿದ್ದು, ಇದರಿಂದ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಈ ವಿಚಿತ್ರ ಘಟನೆ ಅಮೆರಿಕದ ಟೆನ್ನೆಸ್ಸೀಯ ಮೆಂಫಿಸ್‌ ಎಂಬಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಪಿಟ್‌ಬುಲ್‌ ಶ್ವಾನದ ಗುಂಡೇಟಿಗೆ ತುತ್ತಾಗಿದ್ದಾನೆ. ಆತ ತನ್ನ ಗೆಳತಿಯೊಂದಿಗೆ ಬೆಡ್‌ರೂಮ್‌ನಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಓರಿಯೊ ಹೆಸರಿನ ಸಾಕು ನಾಯಿ ಆಕಸ್ಮಿಕವಾಗಿ ಗುಂಡು ಹಾರಿಸಿದೆ. ಈ ಗುಂಡು ಆ ವ್ಯಕ್ತಿಯ ತೊಡೆ ಭಾಗಕ್ಕೆ ತಗುಲಿದ್ದು, ಅದೃಷ್ಟವಶಾತ್‌ ಈ ಅನಾಹುತದಲ್ಲಿ ಯಾವುದೇ ಗಂಭೀರ ಹಾನಿಯಾಗಿಲ್ಲ.

ಇದನ್ನೂ ಓದಿ
Image
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
Image
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
Image
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
Image
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ಅಷ್ಟಕ್ಕೂ ಇದು ನಡೆದಿದ್ದದ್ದರೂ ಹೇಗೆ?

ಜೆರಾಲ್ಡ್‌ ಕಿರ್ಕ್‌ವುಡ್‌ ಎಂಬ ವ್ಯಕ್ತಿ ತನ್ನ ಗೆಳತಿಯೊಂದಿಗೆ ಹಾಸಿಗೆಯಲ್ಲಿ ಮಲಗಿದ್ದಾಗ, ಗುಂಡು ತಗುಲಿದ್ದು, ಶ್ವಾನದ ತುಂಟತನದಿಂದ ಆಕಸ್ಮಿಕವಾಗಿ ಗುಂಡು ಹಾರಿದೆ ಎಂದು ಆತ ಹೇಳಿಕೊಂಡಿದ್ದಾನೆ. ಪಿಟ್‌ಬುಲ್‌ ಶ್ವಾನದ ಮುಂಗಾಲು ಟ್ರಿಗರ್‌ ಗಾರ್ಡ್‌ನಲ್ಲಿ ಸಿಲುಕಿಕೊಂಡಿದ್ದು, ಆ ಕಾಲು ಎಳೆದಾಗ ಬಂದೂಕಿನಿಂದ ಗುಂಡು ಹಾರಿದೆ. ಆ ಗುಂಡು ಸೀದಾ ಹೋಗಿ ಜೆರಾಲ್ಡ್‌ ಕಿರ್ಕ್‌ವುಡ್‌ನ ತೊಡೆಯನ್ನು ಸೀಳಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ಬಿಸಿ ಕಾಫಿ ಬಿದ್ದು ಸುಟ್ಟು ಹೋದ ತೊಡೆ ಭಾಗ; ಸಂತ್ರಸ್ತನಿಗೆ 415 ಕೋಟಿ ರೂ. ಪರಿಹಾರ ನೀಡುವಂತೆ ಸ್ಟಾರ್‌ಬಕ್ಸ್‌ಗೆ ಆದೇಶ ನೀಡಿದ ಕೋರ್ಟ್‌

ನ್ಯೂಯಾರ್ಕ್‌ ಪೋಸ್ಟ್‌ ವರದಿಯ ಪ್ರಕಾರ, ʼಆ ವ್ಯಕ್ತಿ ತನ್ನ ಗೆಳತಿಯೊಂದಿಗೆ ಹಾಸಿಗೆಯಲ್ಲಿ ಮಲಗಿದ್ದಾಗ ತನ್ನ ಸಾಕುನಾಯಿ ಪಿಟ್‌ಬುಲ್‌ ಗುಂಡು ಹಾರಿಸಿದೆʼ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಅದೃಷ್ಟವಶಾತ್‌ ಈ ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ವಿಚಿತ್ರ ಪ್ರಕರಣ ಅನೇಕರನ್ನು ದಿಗ್ಭ್ರಮೆಗೊಳಿಸಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:33 am, Mon, 17 March 25

ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಹೋರಿ ಹಬ್ಬ ಅವಳಿಗೆ ಪಂಚಪ್ರಾಣ: ಕೊಲೆಯಾದ ಸ್ವಾತಿ ನೆನೆದು ಗೆಳತಿ ಕಣ್ಣೀರು
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಚಕ್ರಗಳನ್ನು ಕದಿಯಲು ಕಳ್ಳರು ಬಂದಿದ್ದು ಇನ್ನೋವಾ ಕಾರಲ್ಲಂತೆ!
ಅಯ್ಯೋ ಕರ್ಮವೇ..ನಿಂತ ಕಾರಿನ ನಾಲ್ಕು ಟೈರ್ ಬಿಚ್ಚಿಕೊಂಡು ಹೋದ ಖದೀಮರು!
ಅಯ್ಯೋ ಕರ್ಮವೇ..ನಿಂತ ಕಾರಿನ ನಾಲ್ಕು ಟೈರ್ ಬಿಚ್ಚಿಕೊಂಡು ಹೋದ ಖದೀಮರು!
ಪುನೀತ್ ಸಮಾಧಿಗೆ ಶಿವಣ್ಣ-ಗೀತಕ್ಕ ಭೇಟಿ; ಭಾವುಕರಾದ ದಂಪತಿ
ಪುನೀತ್ ಸಮಾಧಿಗೆ ಶಿವಣ್ಣ-ಗೀತಕ್ಕ ಭೇಟಿ; ಭಾವುಕರಾದ ದಂಪತಿ
ಯುವ ಪದಾಧಿಕಾರಿಗಳಿಗೆ ಶಿಸ್ತಿನ ಮಹತ್ವ ಬೋಧಿಸಿದ ಶಿವಕುಮಾರ್
ಯುವ ಪದಾಧಿಕಾರಿಗಳಿಗೆ ಶಿಸ್ತಿನ ಮಹತ್ವ ಬೋಧಿಸಿದ ಶಿವಕುಮಾರ್
ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
ಉಪ ಚುನಾವಣೆಯಲ್ಲಿ ಎಲ್ಲ ಸಮುದಾಯ ಕಾಂಗ್ರೆಸ್​ಗೆ ಮತ ನೀಡಿದೆ: ಸಿದ್ದರಾಮಯ್ಯ
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು