AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಪ್ಲೈಟಲ್ಲಿ ನಾನೇನಾದ್ರೂ ಡ್ರಾಮಾ ಮಾಡಿದ್ರೆ ಕ್ಷಮಿಸಿ; ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌ ಹಂಚಿದ ದಂಪತಿ

ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ತಮಗಾದ ಒಳ್ಳೆಯ ಮತ್ತು ಕೆಟ್ಟ, ಭಯಾನಕ ಅನುಭವಗಳ ಬಗ್ಗೆ ಕಥೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ರು ಬಳಕೆದಾರರು ರೆಡ್ಡಿಟ್‌ನಲ್ಲಿ ಹೃದಯಸ್ಪರ್ಶಿ ಕಥೆಯೊಂದನ್ನು ಶೇರ್‌ ಮಾಡಿದ್ದಾರೆ. ಅವರು ತಮ್ಮ ಪುಟಾಣಿ ಮಗುವಿನ ಸಲುವಾಗಿ ವಿಮಾನದಲ್ಲಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಚಾಕೊಲೇಟ್‌ ಮತ್ತು ಇಯರ್‌ಪ್ಲಗ್‌ಗಳನ್ನು ನೀಡಿದ್ದು, ಈ ಹೃದಯಸ್ಪರ್ಶಿ ಕಥೆ ನೆಟ್ಟಿಗರ ಮನ ಗೆದ್ದಿದೆ.

Viral: ಪ್ಲೈಟಲ್ಲಿ ನಾನೇನಾದ್ರೂ ಡ್ರಾಮಾ ಮಾಡಿದ್ರೆ ಕ್ಷಮಿಸಿ; ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌ ಹಂಚಿದ ದಂಪತಿ
ವೈರಲ್​​ ಫೋಟೋ
ಮಾಲಾಶ್ರೀ ಅಂಚನ್​
| Edited By: |

Updated on: Mar 14, 2025 | 2:07 PM

Share

ಪುಟ್ಟ ಮಕ್ಕಳೊಂದಿಗೆ (kids) ವಿಮಾನದಲ್ಲಿ (Flight) ಪ್ರಯಾಣಿಸುವುದು ಪೋಷಕರಿಗೆ ಒಂದು ಸವಾಲಿನ ಸಂಗತಿಯೇ ಸರಿ. ಹೌದು ಹೆಚ್ಚಿನ ಸಂದರ್ಭಗಳಲ್ಲಿ ವಿಮಾನ ಪ್ರಯಾಣದ (flight journey) ವೇಳೆ ಪುಟ್ಟ ಪುಟ್ಟ ಮಕ್ಕಳು ಭಯದಿಂದಲೋ ಅಥವಾ ಕಿರಿಕಿರಿ ಉಂಟಾಗಿಯೋ ಅತಿಯಾಗಿ ರಚ್ಚೆ ಹಿಡಿಯುತ್ತಾರೆ. ಮಕ್ಕಳ ಈ ಅಳುವಿನ ಸತ್ತು ಸಹ ಪ್ರಯಾಣಿಕರಿಗೂ ಕಿರಿಕಿರಿ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಇಲ್ಲೊಂದು ದಂಪತಿ ತಮ್ಮ ಆರು ತಿಂಗಳ ಮಗು, ಅದರ ಮೊದಲ ವಿಮಾನ ಪ್ರಯಾಣದಲ್ಲಿ ಅತ್ರೆ ಅದರಿಂದ ಸಹ ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು, ಅವರಿಗೆ ಕ್ಯೂಟ್‌ ಪತ್ರದೊಂದಿಗೆ ಚಾಕೊಲೇಟ್‌ (chocolates) ಮತ್ತು ಇಯರ್‌ಪ್ಲಗ್‌ಗಳನ್ನು (earplugs) ಗಿಫ್ಟ್‌ ಆಗಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ತಮ್ಮ ಆರು ತಿಂಗಳ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ದಂಪತಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದ ಜೊತೆ ಚಾಕೊಲೇಟ್‌ ಮತ್ತು ಇಯರ್‌ಪ್ಲಗ್‌ಗಳನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಇದು ಅವರ ಮಗುವಿನ ಮೊದಲ ವಿಮಾನ ಪ್ರಯಾಣವಾಗಿದ್ದು, ಏನಾದ್ರೂ ಮಗು ಅತ್ರೆ ಇದರಿಂದ ಸಹ ಪ್ರಯಾಣಿಕರಿಗೆ ಕಿರಿಕಿರಿ ಆಗಬಾರದೆಂದು ಕ್ಯೂಟ್‌ ಗಿಫ್ಟ್‌ಗಳನ್ನು ನೀಡಿದ್ದಾರೆ.

the_anecdotist135 ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇದು ನಮ್ಮ ಮಗುವಿನ ಮೊದಲ ವಿಮಾನ ಪ್ರಯಾಣ, ಮಗು ವಿಮಾನದಲ್ಲಿ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಐಡಿಯಾ ನಮಗಿರಲಿಲ್ಲ ಅದಕ್ಕಾಗಿ ಸಹ ಪ್ರಯಾಣಿಕರಿಗೆ ಚಾಕೊಲೇಟ್‌ ಮತ್ತು, ಇಯರ್‌ ಪ್ಲಗ್‌ಗಳನ್ನು ನೀಡಿದ್ದೇವೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್‌ ಆಗುತ್ತಿರುವ ಫೋಟೋದಲ್ಲಿ “ನನ್ನ ಹೆಸರು ಜೆರೆಮಿಯಾ, ಇದು ನನ್ನ ಮೊದಲ ವಿಮಾನ ಪ್ರಯಾಣ. ನಾನು ಕೇವಲ 6 ತಿಂಗಳ ಮಗುವಾಗಿರುವುದರಿಂದ, ಹಸಿವು ಕಿರಿಕಿರಿಯಿಂದ ಅಳಬಹುದು ಅಥವಾ ಜೋರಾಗಿ ಡ್ರಾಮಾ ಮಾಡಬಹುದು. ಹೀಗೆ ಇದರಿಂದ ಏನಾದ್ರೂ ನಿಮಗೆ ಕಿರಿಕಿರಿ ಆದ್ರೆ ಕ್ಷಮಿಸಿ, ದಯವಿಟ್ಟು ಈ ಇಯರ್‌ಪ್ಲಗ್‌ ಮತ್ತು ಚಾಕೊಲೇಟ್‌ಗಳನ್ನು ಆನಂದಿಸಿ. ನಿಮ್ಮ ತಾಳ್ಮೆಗೆ ಧನ್ಯವಾದಗಳು” ಎಂದು ಮುದ್ದಾದ ಬರಹ ಬರೆದಿರುವುದನ್ನು ಕಾಣಬಹುದು.

ಇದನ್ನೂ ಓದಿ: ವಿದ್ಯುತ್ ಇಲ್ಲದೆಯೇ ಬೆಳಕು ನೀಡುತ್ತೆ ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಈ ಕರೆಂಟ್‌ ಫ್ರೀ ಬಲ್ಬ್‌; ಇದು ಹೇಗೆ ವರ್ಕ್‌ ಆಗುತ್ತೆ ಗೊತ್ತಾ?

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಮ್ಮ ಈ ನಡೆ ತುಂಬಾ ಸಿಹಿಯಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಇದೊಂದು ಒಳ್ಳೆಯ, ಚಿಂತನಶೀಲ ಉಪಕ್ರಮವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಸಿಹಿಯಾದ ನಡೆಯೇ ಆದ್ರೆ ಇದು ತೀರಾ ಅನಗತ್ಯ ಎಂದು ನನ್ನ ಭಾವನೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ